ಕುಶಾಲನಗರ, ಅ. ೮: ಸಂಘಟನೆ ಗಳು ಸಮಾಜಗಳು ಸರ್ಕಾರಿ ಸೌಲಭ್ಯ ಗಳನ್ನು ತಮ್ಮ ಸಮುದಾಯದ ಪ್ರತಿ ಯೊಬ್ಬರಿಗೂ ತಲುಪಿಸುವ ಜವಾ ಬ್ದಾರಿ ನಿಭಾಯಿಸಬೇಕೆಂದು ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಡಾ. ಮಂಥರ್ ಗೌಡ ಕರೆ ನೀಡಿದರು.

ಕುಶಾಲನಗರ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ನಡೆದ ೨೦ನೇ ವರ್ಷದ ಶ್ರೀ ವಿಶ್ವ ಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆ ಯಲ್ಲಿ ಮಾತನಾಡಿದ ಅವರು ಸಮಾಜದ ಬೇಡಿಕೆ ಮತ್ತು ಅಹವಾ ಲುಗಳಿಗೆ ಸ್ಪಂದಿಸಲು ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.

ದಿವ್ಯ ಸಾನಿಧ್ಯ ವಹಿಸಿ ಆಶೀ ರ್ವಚನ ನೀಡಿದ ಅರೆಮಾದನಹಳ್ಳಿ ಪೀಠಾಧಿಪತಿಗಳಾದ ಶ್ರೀ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿಗಳು ಕೊಡಗು ಜಿಲ್ಲೆಯಲ್ಲಿ ಸಮಾಜಕ್ಕೆ ಅಗತ್ಯವಿರುವ ಜಾಗಗಳನ್ನು ಗುರುತಿಸಿದ್ದು ಸಮುದಾಯ ಭವನ ಸೇರಿದಂತೆ ಅಭಿವೃದ್ಧಿ ಕಾಮ ಗಾರಿಗಳಿಗೆ ಸರ್ಕಾರದ ಸಹಕಾರ ಕೋರಿದರು.

ತಾಲೂಕು ವಿಶ್ವಕರ್ಮ ಸಮಾ ಜದ ಅಧ್ಯಕ್ಷ ಹೆಚ್.ಜಿ. ಲಿಂಗಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಜಿಲ್ಲಾ ವಿಶ್ವಕರ್ಮ ಅಧ್ಯಕ್ಷರಾದ ಎಸ್.ಜೆ. ದೇವದಾಸ್, ಉದ್ಯಮಿ ಆರ್.ಎನ್. ಜಯತೀರ್ಥ, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ರಾದ ಮಹೇಶ್ ಆಚಾರ್ಯ, ಗೌರವಾ ಧ್ಯಕ್ಷರಾದ ಹೆಚ್ ವಿ ರಾಜಾಚಾರ್, ಪ್ರಮುಖರಾದ ವಿ. ಕುಮಾರ್, ಹೆಚ್.ಎನ್. ಸುಬ್ರಹ್ಮಣ್ಯ ವಿ. ಕೃಷ್ಣ, ಜಗದೀಶ್, ಮಹಿಳಾ ಘಟಕದ ಅಧ್ಯಕ್ಷರಾದ ಲಲಿತ ವರದರಾಜ್, ಅಧಿಕಾರಿ ಶೇಖರ್, ಎಸ್.ಎಂ. ಶಾಮಸುಂದರ್, ಹೆಚ್.ಎನ್. ರಾಜಾಚಾರ್ ಮತ್ತಿತರರು ಇದ್ದರು.

ಇದೇ ಸಂದರ್ಭ ಸಮಾಜದ ಪ್ರಮುಖರಾದ ಮಂಗಳ ಪ್ರಕಾಶ್, ಶಶಿಕಲ ಕೃಷ್ಣಚಾರ್, ರತ್ನಮ್ಮ ಪುಟ್ಟಣ್ಣ ಆಚಾರ್, ಮಹೇಶ್, ಶೇಖರ್, ಸಾಧಕಿ ಪ್ರಗತಿ ಬಡಿಗೇರ್ ಅವರು ಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್ಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಧಾರ್ಮಿಕ ಸಭೆಗೂ ಮುನ್ನ ಕುಶಾಲನಗರ ಕಾವೇರಿ ನದಿ ಬಳಿಯಿಂದ ಕಳಸ ಹೊತ್ತ ಮಹಿಳೆಯರು ಹಾಗೂ ಸಮುದಾಯ ಬಾಂಧವರು ಮೆರವಣಿಗೆ ಮೂಲಕ ಶ್ರೀಗಳನ್ನು ಸಭಾಂಗಣಕ್ಕೆ ಕರೆ ತಂದರು. ವಕೀಲರಾದ ಕೆ ಬಿ ಮೋಹನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.