ಸೋಮವಾರಪೇಟೆ, ಅ. ೮: ಕಳೆದ ಕೆಲ ದಿನಗಳಿಂದ ಮೋಡ ಮುಸುಕಿದ ವಾತಾವರಣ ಕಂಡುಬAದಿದ್ದ ಸೋಮವಾರಪೇಟೆ ವಿಭಾಗಕ್ಕೆ ಇಂದು ಮಧ್ಯಾಹ್ನದ ನಂತರ ಭಾರೀ ಮಳೆ ಸುರಿಯಿತು.

ಗಾಳಿ ಮಳೆಯ ಆರ್ಭಟ ದಿಂದಾಗಿ ದಿಢೀರ್ ಜನ ಜೀವನ ಅಸ್ತವ್ಯಸ್ಥಗೊಂಡಿತು. ಮಳೆಯ ಆರ್ಭಟದಿಂದಾಗಿ ಅಪರಾಹ್ನ ೩ ಗಂಟೆಯಿAದ ೬.೩೦ರವರೆಗೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸ್ಥಗಿತಗೊಂಡಿತ್ತು.

ಮಳೆಯಿAದಾಗಿ ಪಟ್ಟಣದಲ್ಲಿ ಜನಸಾಮಾನ್ಯರ ಓಡಾಟ ಸ್ಥಗಿತ ಗೊಂಡು ಬಿಕೋ ಎನ್ನುತ್ತಿತ್ತು. ರಸ್ತೆ, ಚರಂಡಿಗಳಲ್ಲಿ ಕೊಳಚೆ ನೀರು ಹರಿದು ಪರಿಸರ ತಿಳಿಯಾಯಿತು.

ಮನೆ ಮುಂಭಾಗ ಕೊಳಚೆ ನೀರು: ಧಾರಾಕಾರ ಮಳೆಗೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿ ಹಾಗೂ ಮೋರಿಯಲ್ಲಿ ನೀರಿನ ಸರಾಗ ಹರಿವು ಸಾಧ್ಯವಾಗದೇ ಆಲೇಕಟ್ಟೆ ರಸ್ತೆಯಲ್ಲಿನ ಯೋಗೇಂದ್ರ ಎಂಬವರ ಮನೆಯ ಮುಂಭಾಗ ಕೊಳಚೆ ನೀರು ಸಂಗ್ರಹವಾಯಿತು. ಚೌಡ್ಲು, ಗಾಂಧಿನಗರ ಭಾಗದಿಂದ ಹರಿದು ಬರುವ ಮಳೆ, ಕೊಳಚೆ ನೀರು ಆಲೇಕಟ್ಟೆ ರಸ್ತೆಯ ಯೋಗೇಂದ್ರ ಅವರ ಮನೆಯ ಮುಂಭಾಗ ಶೇಖರಣೆಗೊಂಡು ಭಾರೀ ಅವಾಂತರ ಸೃಷ್ಟಿಸಿತು.

ಇಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿಯಿAದ ಪ್ರತಿ ಮಳೆಯ ಸಂದರ್ಭವೂ ಯೋಗೇಂದ್ರ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತಿದೆ. ಈ ಬಗ್ಗೆ ಲೋಕೋ ಪಯೋಗಿ ಇಲಾಖೆಯ ಗಮನ ಸೆಳೆದರೆ ಚೌಡ್ಲು ಗ್ರಾಮ ಪಂಚಾಯಿತಿ ಚೌಡ್ಲು ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದರೆ ಲೋಕೋ ಪಯೋಗಿ ಇಲಾಖೆಯ ಮೇಲೆ ಗೂಬೆ ಕೂರಿಸಿಕೊಂಡು ದಿನ ಕಳೆಯುತ್ತಿದ್ದಾರೆ ಎಂದು ಯೋಗೇಂದ್ರ ಅವರು ದೂರಿದ್ದಾರೆ.

ತಕ್ಷಣ ಲೋಕೋಪಯೋಗಿ ಇಲಾಖೆ ಹಾಗೂ ಚೌಡ್ಲು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮಳೆ ನೀರಿನ ಸರಾಗ ಹರಿವಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇಂದು ಸುರಿದ ಮಳೆ ಕೃಷಿ ಚಟುವಟಿಕೆಗೆ ಪೂರಕ ವಾತಾವರಣ ಒದಗಿಸಿದ್ದು, ಕೃಷಿಕರಲ್ಲಿ ಒಂದಿಷ್ಟು ಸಮಾಧಾನ ತಂದಿದೆ. ನೀರಿಲ್ಲದೆ ಒಣಗುತ್ತಿದ್ದ ಭತ್ತದ ಗದ್ದೆಗಳು, ಗೊಬ್ಬರ ಹಾಕಿ ಮಳೆಗಾಗಿ ಕಾಯುತ್ತಿದ್ದ ಬೆಳೆಗಾರರಿಗೆ ಇಂದಿನ ಮಳೆ ಹರ್ಷ ತಂದಿದೆ.