ವೀರಾಜಪೇಟೆ, ಅ. ೭: ಪೌರ ಕಾರ್ಮಿಕರಿಗೆ ಸೌಲಭ್ಯ ಸವಲತ್ತು ಗಳನ್ನು ನೀಡುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ವೀರಾಜ ಪೇಟೆ ತಹಶೀಲ್ದಾರ್ ಆರ್. ರಾಮ ಚಂದ್ರ ಹೇಳಿದರು.
ವೀರಾಜಪೇಟೆ ಪುರಸಭೆ ಇವರ ವತಿಯಿಂದ ಪುರಭವನದಲ್ಲಿ ಆಯೋ ಜಿಸಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರ ಸೇವೆಯನ್ನು ಸದಾ ಸ್ಮರಿಸಬೇಕು. ಅವರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.
ಪೌರ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಇರ್ಫಾನ್ ಮಾತನಾಡಿ, ಅಧಿಕಾರಿಗಳು ಪೌರಕಾರ್ಮಿಕರ ಬೇಕು ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.
ಕಂದಾಯ ಅಧಿಕಾರಿ ಮನೋಜ್ ಕುಮಾರ್ ಮಾತನಾಡಿ, ಪುರಸಭೆ ಯಿಂದ ನೀಡುವ ಎಲ್ಲಾ ಸ್ವಚ್ಛತಾ ಸಲಕರಣೆಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಮುಂದಿನ ತಿಂಗಳು ವಯೋ ನಿವೃತ್ತಿ ಹೊಂದುವ ವೇಲು ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಕಾರ್ಮಿಕರಿಗೆ ಆಯೋಜಿ ಸಲಾಗಿದ್ದ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸ ಲಾಯಿತು. ಪೌರ ಕಾರ್ಮಿಕರಿಗೆ ನೀಡುವ ವಾರ್ಷಿಕ ಭತ್ಯೆ ೭ ಸಾವಿರ ರೂ.ಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಮುಖ್ಯಾಧಿಕಾರಿ ಎ. ಚಂದ್ರಕುಮಾರ್, ಕಚೇರಿ ವ್ಯವಸ್ಥಾಪಕಿ ಸುಜಾತ, ಕಂದಾಯ ಉಪನಿರೀಕ್ಷಕಿ ಸುಲೇಖಾ ಮತ್ತಿತರರು ಉಪಸ್ಥಿತರಿದ್ದರು.