ಚೆಟ್ಟಳ್ಳಿ, ಅ. ೭: ೨೦೨೩-೨೪ ನೇ ಸಾಲಿಗೆ IಅಆP- ಒಖಿಈ ಯೋಜನೆ ಅಡಿಯಲ್ಲಿ, ಕಾಫಿ ಮಂಡಳಿಯು ಕಾಫಿ ಬೆಳೆಗಾರರಿಗೆ ಈ ಕೆಳಕಂಡ ಯೋಜನೆಗಳಿಗೆ ಸಹಾಯಧನ ನೀಡಲು ಅನುಮೋದನೆ ದೊರೆತಿರುತ್ತದೆ.

೧. ರಿಪ್ಲಾಂಟೇಶನ್ (ಮರುನಾಟಿ) - ೨೫ ವರ್ಷಕ್ಕೂ ಮೀರಿದ ಎತ್ತರದ ಅರೇಬಿಕಾ ಹಾಗೂ ೧೫ ವರ್ಷ ಮೀರಿದ ಡ್ವಾರ್ಫ್ ಅರೇಬಿಕಾ ತಳಿಗಳು ಹಾಗೂ ೪೦ ವರ್ಷ ಮೀರಿದ ರೊಬಸ್ಟಾ ಅನುತ್ಪಾದಕ ತೋಟಗಳಲ್ಲಿ, ಗಿಡಗಳನ್ನು ತೆಗೆದು ಹೊಸ ಗಿಡಗಳನ್ನು ಹಾಕಲು (ಮರುನಾಟಿ).

೨. ಕೆರೆ, ತೆರೆದ ರಿಂಗ್ ಬಾವಿ, ನೀರಾವರಿ (ಸ್ಪಿçಂಕ್ಲರ್/ ಡ್ರಿಪ್) ಉಪಕರಣಗಳು.

೩. ಕಾಫಿಕಣ, ಗೊಡಾನ್ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ). ಸಹಾಯಧನವು ಕೆಳಕಂಡ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.

೧. ೨೫ ಎಕರೆ ಒಳಗಿನ ವೈಯಕ್ತಿಕ ಸಣ್ಣ ಬೆಳೆಗಾರರಿಗೆ ಮಾತ್ರ ಅನ್ವಯವಾಗುವುದು.

೨. ಕಳೆದ ಹತ್ತು ವರ್ಷಗಳಲ್ಲಿ ಅಂದರೆ ೨೦೧೨-೧೩ ರಿಂದ ಕಾಫಿ ಮಂಡಳಿಯಿAದ ಅರ್ಜಿ ಸಲ್ಲಿಸುವ ಕೆಲಸಕ್ಕೆ ಸಹಾಯಧನ ಪಡೆದಿರಬಾರದು.

೩. ಸಹಾಯಧನಕ್ಕಾಗಿ ಸಲ್ಲಿಸಬೇಕಾದ ಅಗತ್ಯವಿರುವ ದಾಖಲೆಗಳು.

ಎ. ಅರ್ಜಿ (ಕಾಫಿ ಮಂಡಳಿಯ ಕಚೇರಿಯಲ್ಲಿ ಲಭ್ಯ) ಅಥವಾ ತಿತಿತಿ.iಟಿಜiಚಿಛಿoಜಿಜಿee.oಡಿg ವೆಬ್‌ಸೈಟ್ ನೋಡಬಹುದು

ಬಿ. ಸಹಿ ಮಾಡಿದ ಪಾಸ್‌ಪೋರ್ಟ್ ಅಳತೆಯ ಫೋಟೊ

ಅ. ಆಧಾರ್ ಪ್ರತಿ

ಆ. ಬ್ಯಾಂಕ್ ಪಾಸ್ ಬುಕ್ ಪ್ರತಿ.

ಇ. ಹಿಡುವಳಿದಾರರ ಹೆಸರಲ್ಲಿ ಇರುವ ಎಲ್ಲಾ ಕಾಫಿ ತೋಟಗಳ ಪಹಣಿಗಳು (ಖಖಿಅ)

ಎಫ್. ಸ್ವಯಂ ಸಹಿ ಮಾಡಿದ ಅಂದಾಜು ನಕ್ಷೆ ಹಾಗೂ ಚಕ್ಕುಬಂದಿ

g. ಖಾತಾ ನಕಲು/ಮ್ಯುಟೇಶನ್/ಪಟ್ಟೆ ಪುಸ್ತಕ

ಜಿ. ಕೆರೆ, ಬಾವಿ ತಗಲುವ ಅಂದಾಜು ವೆಚ್ಛ ಹಾಗೂ ಪ್ಲಾನ್

ಹೆಚ್. ಸ್ಪಿçಂಕ್ಲರ್ / ಡ್ರಿಪ್ ನೀರಾವರಿ ಉಪಕರಣಗಳಿಗೆ ಕೊಟೇಶನ್.

ಮೊದಲು ಬಂದವರಿಗೆ ಮೊದಲ ಆದ್ಯತೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ೩೧ ಅಕ್ಟೋಬರ್ ೨೦೨೩. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಾಫಿ ಮಂಡಳಿಯ ಕಚೇರಿಯನ್ನು ಸಂಪರ್ಕಿಸುವುದು. ಮುಖಾರಿಬ್ ಡಿ.ಎಸ್. (ಕಿರಿಯ ಸಂಪರ್ಕ ಅಧಿಕಾರಿಗಳು ಕಾಫಿ ಮಂಡಳಿ ಗೋಣಿಕೊಪ್ಪಲು) : ೯೪೪೯೦೬೩೦೫೭