ಮಡಿಕೇರಿ, ಅ. ೬: ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಉತ್ಸವ ಆಚರಣೆ ಅಚ್ಚುಕಟ್ಟಾಗಿ ನಡೆಯಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ರಾಜಾ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿಂದು ದಸರಾ ಉತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ದಸರಾ ಸಮಿತಿ ಪದಾಧಿಕಾರಿ ಗಳ ಸಲಹೆ, ಸೂಚನೆಗಳನ್ನು ಆಲಿಸಿ ಅವರು ಮಾತನಾಡಿದರು. ದಸರಾ ಕಾರ್ಯಕ್ರಮಗಳಿಗಾಗಿ ನಿರ್ಮಾಣ ಮಾಡಲಾಗುವ ವೇದಿಕೆಯನ್ನು ಸುರಕ್ಷತೆಯ ದೃಷ್ಟಿಯಿಂದ ವೇದಿಕೆಯ ಸಾಮರ್ಥ್ಯದ ಬಗ್ಗೆ ಲೋಕೋಪ ಯೋಗಿ ಇಲಾಖೆ ಪರಿಶೀಲನೆ ನಡೆಸಲಿದೆ. ಯಾವುದೇ ರೀತಿಯ ವಿದ್ಯುತ್ ಅವಘಡಗಳು ಸಂಭವಿಸದ ರೀತಿಯಲ್ಲಿ ಚೆಸ್ಕಾಂ ಗಮನ ಹರಿಸಬೇಕು. ಕಲಾವಿದರಿಗೆ, ಕಲಾಸಕ್ತರಿಗೆ ಮಳೆಯಿಂದ ತೊಂದರೆ ಆಗದ ರೀತಿಯಲ್ಲಿ ವಾಟರ್ ಪ್ರೂಫ್ ಶಾಮಿಯಾನ ಅಳವಡಿಕೆಗೆ ದಸರಾ ಸಮಿತಿ ಕ್ರಮಕೈಗೊಳ್ಳಬೇಕು. ಯಾವುದೇ ಅಗ್ನಿ ಅನಾಹುತಗಳು ಸಂಭವಿಸದAತೆ ಅಗ್ನಿ ಶಾಮಕದಳ ವೇದಿಕೆ ವ್ಯಾಪ್ತಿಯಲ್ಲಿ ಹಾಗೂ ನಗರ ವ್ಯಾಪ್ತಿಯಲ್ಲಿ ಬೆಂಕಿ ನಂದಿಸುವ ವಾಹನಗಳನ್ನು ನಿಯೋಜಿಸಬೇಕು. ಹೂಗಿಡಗಳಿಂದ ವೇದಿಕೆಯ ಶೃಂಗಾರವನ್ನು ಹೆಚ್ಚಿಸುವಲ್ಲಿ ತೋಟಗಾರಿಕಾ ಇಲಾಖೆ ಮತುವರ್ಜಿ ವಹಿಸಬೇಕೆಂದು ವೆಂಕಟ್ ರಾಜಾ ಅವರು ಸೂಚನೆ ನೀಡಿದರು.
ಆರೋಗ್ಯ ಇಲಾಖೆಯಿಂದ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು. ವೇದಿಕೆ ಬಳಿ ಪ್ರಥಮ ಚಿಕಿತ್ಸಾ ಕಿಟ್ ಜೊತೆಗೆ ಓರ್ವ ವೈದ್ಯ ಹಾಗೂ ನರ್ಸ್ನ್ನು ನಿಯೋಜಿಸಬೇಕು. ಆಸ್ಪತ್ರೆಗಳಲ್ಲಿ ೨೪ ಗಂಟೆಗಳ ಕಾಲ ವೈದ್ಯರು ಕರ್ತವ್ಯಕ್ಕೆ ಸಿದ್ಧರಿರುವಂತೆ ಗಮನ ಹರಿಸಬೇಕು.
ಬಾಲಕ ಹಾಗೂ ಬಾಲಕಿಯರ ಮಂದಿರ ಮಕ್ಕಳಿಗೆ ದಸರಾ ಸಮಿತಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವಕಾಶ ನೀಡಲು ಕ್ರಮಕೈಗೊಳ್ಳಬೇಕು. ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿಗಳು ದಸರಾ ಅನುದಾನವನ್ನು
(ಮೊದಲ ಪುಟದಿಂದ) ಪಾರದರ್ಶಕವಾಗಿ ಬಳಕೆ ಮಾಡಬೇಕು. ಆರ್ಥಿಕ ಶಿಸ್ತನ್ನು ಪಾಲಿಸಬೇಕು ದಸರಾ ಉತ್ಸವ ಕಳೆದು ಒಂದು ತಿಂಗಳೊಳಗಾಗಿ ಲೆಕ್ಕಪತ್ರ ವ್ಯವಹಾರಗಳನ್ನು ಪೂರ್ಣಗೊಳಿಸಬೇಕೆಂದು ದಸರಾ ಸಮಿತಿಗೆ ನಿರ್ದೇಶನ ನೀಡಿದರು.
ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ದಸರಾ ಉತ್ಸವಕ್ಕೆ ಸಂಬAಧಿಸಿದAತೆ ಪೊಲೀಸ್, ಆರೋಗ್ಯ ಹಾಗೂ ವಿದ್ಯುತ್ ಇಲಾಖೆಗಳು ಸೇರಿದಂತೆ ಎಲ್ಲಾ ಇಲಾಖೆಗಳು ಸಹಕಾರ ನೀಡಬೇಕು. ನಗರ ವ್ಯಾಪ್ತಿಯಲ್ಲಿ ಸಿಸಿಕ್ಯಾಮೆರಾ ಅಳವಡಿಕೆಗೂ ಸಮಿತಿಯಿಂದ ಕ್ರಮಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆಯೂ ಸಮಿತಿಯೊಂದಿಗೆ ಕೈಜೋಡಿಸಬೇಕು ಎಂದರು. ಮಡಿಕೇರಿ ದಸರಾ ಸಂಬAಧ ಈಗಾಗಲೇ ೭೫ ಲಕ್ಷಕ್ಕೆ ಸೀಮಿತವಾಗಿ ದಸರಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಆದರೆ ಕಲಾವಿದರ ಸಂಭಾವನೆ, ಗ್ಯಾಲರಿವ್ಯವಸ್ಥೆ ಸೇರಿದಂತೆ ಎಲ್ಲಾ ವೆಚ್ಚಗಳು ಈ ಬಾರಿ ಹೆಚ್ಚಳವಾಗಿದ್ದು, ೭೫ ಲಕ್ಷ ಅನುದಾನ ಸಾಕಾಗುತ್ತಿಲ್ಲ. ಹೆಚ್ಚುವರಿ ಅನುದಾನಕ್ಕೆ ಉಸ್ತುವಾರಿ ಸಚಿವರು ಹಾಗೂ ಶಾಸಕರು ಪ್ರಯತ್ನಿಸುತ್ತಿದ್ದು, ಒಂದು ವೇಳೆ ಹೆಚ್ಚುವರಿ ಅನುದಾನ ಬರದಿದ್ದಲ್ಲಿ ದಾನಿಗಳಿಂದ, ಉದ್ಯಮಿಗಳಿಂದ, ವ್ಯಾಪಾರಿಗಳಿಂದ ಹಣ ಸಂಗ್ರಹಾತಿಗೆ ಮುಂದಾಗಲು ಚಿಂತನೆ ನಡೆಸಲಾಗಿದೆ. ಗಾಂಧಿ ಮೈದಾನದಲ್ಲಿ ಪಾರ್ಕಿಂಗ್ ಸಮಸ್ಯೆ ಇರುವುದರಿಂದ ಹೊಸ ಖಾಸಗಿ ಬಸ್ನಿಲ್ದಾಣದಲ್ಲಿ ದಸರಾ ಸಂದರ್ಭ ಪಾರ್ಕಿಂಗ್ ವ್ಯವಸ್ಥೆ ಮಾಡಲು ಚಿಂತಿಸಲಾಗಿದೆ ಎಂದು ಮಾಹಿತಿ ನೀಡಿದರು. ದಸರಾ ಪ್ರಯುಕ್ತ ಕೆಲ ದಿನಗಳ ಕಾಲ ಕಾಫಿ ಬೋರ್ಡ್ನಿಂದ ಉಚಿತ ಕಾಫಿ ವಿತರಣೆಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ರಾಜ್ ಅವರು ಮಾತನಾಡಿ, ಪೊಲೀಸ್ ಇಲಾಖೆಯಲ್ಲಿರುವ ಎಲ್ಲಾ ಸಿಸಿ ಕ್ಯಾಮೆರಾಗಳನ್ನು ಭದ್ರತೆಗಾಗಿ ಬಳಸಿಕೊಳ್ಳಲಾಗುವುದು. ಒಂದು ವೇಳೆ ಸಿಸಿಕ್ಯಾಮೆರಾಗಳ ಕೊರತೆ ಎದುರಾದರೆ ದಸರಾ ಸಮಿತಿಯಿಂದ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಮಡಿಕೇರಿ ದಸರಾ ಸಮಿತಿ ವಿಶೇಷ ಆಹ್ವಾನಿತರಾದ ಜಿ. ಚಿದ್ವಿಲಾಸ್ ಅವರು ಮಾತನಾಡಿ, ದಸರಾದಂದು ಪ್ರವಾಸಿಗರು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ತುರ್ತು ಸಹಾಯಕ್ಕಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳನ್ನು ನಗರದ ಅಲ್ಲಲ್ಲಿ ಅಳವಡಿಸುವಂತಾಗಬೇಕು. ದಸರಾಕ್ಕೆ ಬರುವವರು ಮದ್ಯವನ್ನು ತರದ ರೀತಿಯಲ್ಲಿ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ನಡೆಸಬೇಕು. ವಿಜಯದಶಮಿಯಂದು ಇಡೀ ರಾತ್ರಿ ರಾಜಾಸೀಟಿಗೆ ಪ್ರವೇಶ ಕಲ್ಪಿಸಬೇಕು. ಇದರಿಂದ ನಗರದೊಳಗೆ ಜನದಟ್ಟಣೆಯ ಒತ್ತಡ ಕಡಿಮೆಯಾಗಲು ಸಹಕಾರಿಯಾಗುತ್ತದೆ.
ತೀರ್ಪುಗಾರರಿಗೆ ಭದ್ರತೆ ಒದಗಿಸಬೇಕು, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಹಾಗೂ ರೂಟ್ಮ್ಯಾಪ್ ಬಗ್ಗೆ ವಿಜಯದಶಮಿಗೆ ಮೂರು ದಿನ ಮುಂಚಿತವಾಗಿ ಪ್ರಚಾರ ಮಾಡುವಂತಾಗಬೇಕು ಎಂದರು. ಮಂಟಪಗಳು ಸಾಗುವ ಮಾರ್ಗದಲ್ಲಿ ವಿದ್ಯುತ್ ತಂತಿ ಹಾಗೂ ದೂರವಾಣಿ, ಕೇಬಲ್ಗಳಿಂದ ತೊಂದರೆ ಆಗದಂತೆ ಸಂಬAಧಿಸಿದವರು ಕ್ರಮ ವಹಿಸಬೇಕು. ಗಾಂಧಿ ಮೈದಾನದ ಶೌಚಾಲಯದಲ್ಲಿ ಸಮರ್ಪಕ ನೀರಿನ ವ್ಯವಸ್ಥೆ ಮಾಡಬೇಕು. ಸರ್ಕಾರಿ ಕಚೇರಿಗಳಿಗೂ ಕೂಡ ವಿದ್ಯುತ್ ಅಲಂಕಾರ ಮಾಡುವ ನಿಟ್ಟಿನಲ್ಲಿ ಆದೇಶ ನೀಡಬೇಕು ಎಂದು ಕೋರಿದರು.
ರೋಟರಿ ಕ್ಲಬ್, ಲಯನ್ಸ್ ಕ್ಲಬ್ಗಳ ಸಹಕಾರ ಪಡೆದು ನಗರದಲ್ಲಿ ಅಲ್ಲಲ್ಲಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಾಣ ಮಾಡಬೇಕು. ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮಡಿಕೇರಿ ದಸರಾ ಸಂಬAಧ ಪೋಸ್ಟರ್ಗಳನ್ನು ಅಳವಡಿಸಿ, ಪ್ರಚಾರ ಕೈಗೊಳ್ಳಬೇಕು. ನವರಾತ್ರಿಯ ೯ ದಿನಗಳ ಕಾಲ ನಗರದಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ ಗಮನ ಹರಿಸಬೇಕು. ಪ್ರವಾಸೋದ್ಯಮ ಇಲಾಖೆಯಿಂದ ಕೊಡಗಿನ ಗಡಿಗಳಲ್ಲಿ ದಸರಾ ಸಂಬAಧ ಸ್ವಾಗತ ಕಮಾನುಗಳನ್ನು ಅಳವಡಿಸಬೇಕು. ಮಳೆ ಬಂದರೆ ರಕ್ಷಣೆ ಪಡೆಯಲು ಅನುಕೂಲವಾಗುವಂತೆ ಕಾವೇರಿ ಕಲಾಕ್ಷೇತ್ರವನ್ನು ತೆರೆದಿಡಬೇಕು ಎಂಬಿತ್ಯಾದಿ ಸಲಹೆಗಳನ್ನು ನೀಡಿದರು.
ದಶಮಂಟಪ ಸಮಿತಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ವಿಜಯದಶಮಿಗೆ ಮೂರು ದಿನ ಮುಂಚಿತವಾಗಿ ಮಂಟಪ ಹಾಗೂ ಕರಗಗಳಿಗೆ ಅನುದಾನ ಸಿಗುವಂತಾಗಬೇಕು. ರಸ್ತೆ ದುರಸ್ತಿ ಕಾರ್ಯ ತ್ವರಿತವಾಗಿ ನಡೆಯಬೇಕು. ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಬೇಕು ಎಂದು ಕೋರಿದರು.
ದಸರಾ ಸಮಿತಿಯ ಪ್ರಮುಖರಾದ ಬೈಶ್ರೀ ಪ್ರಕಾಶ್ ಮಾತನಾಡಿ, ರಸ್ತೆ ದುರಸ್ತಿ ಕಾರ್ಯವು ರಸ್ತೆಯು ಶಾಶ್ವತವಾಗಿ ಉಳಿಯುವ ರೀತಿಯಲ್ಲಿ ಆಗಬೇಕು. ದಸರಾಕ್ಕೆ ಹೆಚ್ಚುವರಿ ಅನುದಾನ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತವೂ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು. ದಸರಾ ಸಮಿತಿ ಮಾಜಿ ಅಧ್ಯಕ್ಷ ಎಂ.ಬಿ. ದೇವಯ್ಯ ಮಾತನಾಡಿ, ಪ್ರವಾಸಿ ತಾಣಗಳಿಗೆ ತೆರಳುವ ರಸ್ತೆ ಬದಿಗಳಲ್ಲಿ ಕಾಡು ಕಡಿಯುವ ಕೆಲಸವಾಗಬೇಕು ಎಂದರು. ಸತೀಶ್ ಪೈ ಮಾತನಾಡಿ, ಸಹಾಯವಾಣಿ ತೆರೆಯುವಂತಾಗಬೇಕೆAದರು. ಚುಮ್ಮಿ ದೇವಯ್ಯ ಮಾತನಾಡಿ, ಜಿಲ್ಲಾ ಕ್ರೀಡಾಂಗಣವನ್ನು ದಸರಾ ಕ್ರೀಡಾಕೂಟಕ್ಕೆ ಉಚಿತವಾಗಿ ನೀಡುವಂತಾಗಬೇಕು. ದಸರಾ ಉತ್ಸವದಲ್ಲಿ ಕ್ರೀಡಾ ಸಾಧಕರನ್ನು ಗೌರವಿಸುವಂತಾಗಬೇಕು ಎಂದರು.
ಅಬ್ದುಲ್ರಜಾಕ್ ಮಾತನಾಡಿ, ದಸರಾ ಸಮಿತಿ ಹಾಗೂ ಮಂಟಪ ಸಮಿತಿಗಳು ಅಂಗಡಿಗಳಲ್ಲಿ ದೇಣಿಗೆ ಸಂಗ್ರಹ ಮಾಡುವದರಿಂದ ಜನರಿಗೆ ತೊಂದರೆಯಾಗುತ್ತದೆ ಎಂದರು. ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ ಮಾತನಾಡಿ, ದಸರಾ ಸಂಬAಧ ಕಳೆದ ಬಾರಿಯ ಅನುದಾನ ಬರಲು ಬಾಕಿಯಿದ್ದು, ಈ ಬಾರಿಯೂ ಹೆಚ್ಚಿನ ಖರ್ಚುಗಳಿವೆ ಹೀಗಿರುವಾಗ ದೇಣಿಗೆ ಸಂಗ್ರಹ ಮಾಡದೆ ದಸರಾ ಆಚರಣೆಗೆ ಮಾಡಲು ಕಷ್ಟವಾಗುತ್ತದೆ ಎಂದು ಹೇಳಿದರು.
ಮಾಜಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ, ವಿಜಯದಶಮಿಯಂದು ಮಂಟಪಗಳಿಗೆ ಸಂಬAಧಿಸಿದ ತಾಂತ್ರಿಕ ವಸ್ತುಗಳನ್ನು ನಗರದೊಳಕ್ಕೆ ತರಲು ಅವಕಾಶ ನೀಡಬೇಕು; ಪೊಲೀಸರು ಸಹಕರಿಸಬೇಕು ಎಂದು ಕೋರಿದರು. ಕರ್ಕಶ ಶಬ್ಧವನ್ನು ಹೊರಹೊಮ್ಮಿಸುವ ಪೀಪಿಗಳನ್ನು ನಿಷೇಧಿಸಬೇಕು ಎಂದು ಮನವಿ ಮಾಡಿದರು. ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಚ್.ಟಿ. ಅನಿಲ್ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬAಧಿಸಿದAತೆ ಈ ಬಾರಿ ೧೬೦ ಅರ್ಜಿಗಳು ಬಂದಿದ್ದು, ಆ ಪೈಕಿ ೪೨ ನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗಿದ್ದು, ಶೇ. ೧೦ ರಷ್ಟು ಮಾತ್ರ ಹೊರಗಿನ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿನಿತ್ಯ ೬ ರಿಂದ ೭ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ವೇದಿಕೆ ಸಮಿತಿ ಅಧ್ಯಕ್ಷೆ ಕನ್ನಂಡ ಕವಿತ ಮಾತನಾಡಿ, ಪ್ರತಿ ಅಂಗಡಿಗಳಲ್ಲಿ ಕಸದ ಬುಟ್ಟಿಗಳನ್ನು ಅಳವಡಿಸಿ ಶುಚಿತ್ವ ಕಾಪಾಡಲು ಸೂಚಿಸಬೇಕು ಎಂದು ಹೇಳಿದರು. ಅಲಂಕಾರ ಸಮಿತಿ ಅಧ್ಯಕ್ಷ ಮುನಿರ್ ಮಾಚಾರ್ ಮಾತನಾಡಿ, ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಹಿನ್ನೆಲೆಯಲ್ಲಿ ಕೊಡಗಿನ ಗಡಿಭಾಗಗಳಲ್ಲಿ ಜಿಲ್ಲೆಗೆ ಆಗಮಿಸುವವರ ಆರೋಗ್ಯ ತಪಾಸಣೆ ನಡೆಸಬೇಕೆಂದು ಕೋರಿದರು.
ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ನವರಾತ್ರಿ ೯ ದಿನಗಳ ಕಾಲ ನಗರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲು ತೀರ್ಮಾನಿಸಲಾಗಿದೆ ಎಂದರು. ಗೋಣಿಕೊಪ್ಪ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ಗೋಣಿಕೊಪ್ಪ ದಸರಾ ಮಂಟಪಗಳ ಶೋಭಾಯಾತ್ರೆಯಲ್ಲಿ ಎಲ್ಲಾ ಇಲಾಖೆಗಳಿಂದಲೂ ಒಂದೊAದು ಸ್ತಬ್ಧಚಿತ್ರಗಳನ್ನು ಹೊರಡಿಸುವಂತಾಗಬೇಕು. ಹಳೆಯ ವಿದ್ಯುತ್ ಕಂಬಗಳ ತೆರವು ಕಾರ್ಯಕೈಗೊಳ್ಳಬೇಕು ಎಂದು ಮನವಿ ಮಾಡಿದರು.