ಮಡಿಕೇರಿ, ಅ. ೭: ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ೯ ಪ್ರಮುಖ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ ೫ ಹಂತಗಳ ಪಾದಯಾತ್ರೆಯಲ್ಲಿ ೩ನೇ ಹಂತದ ಪಾದಯಾತ್ರೆ ಗೋಣಿಕೊಪ್ಪಲಿನಿಂದ ಆರಂಭಗೊAಡಿತು.

ಪಟ್ಟಣದ ಶ್ರೀ ಉಮಾಮಹೇಶ್ವರಿ ದೇವಾಲಯದ ಬಳಿಯಿಂದ ಸಾಗಿದ ಪಾದಯಾತ್ರೆಯಲ್ಲಿ “ಕೊಡವ ಲ್ಯಾಂಡ್” ಪರ ಘೋಷಣೆಗಳು ಮೊಳಗಿದವು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿದ ಪ್ರಮುಖರು ಪ್ರಮುಖ ಬೇಡಿಕೆಗಳ ಹಕ್ಕೊತ್ತಾಯಗಳನ್ನು ಮಂಡಿಸಿದರು.

ನAತರ ಮಾಯಮುಡಿಯ ಕಂಗಳತ್ತನಾಡ್ ಮತ್ತು ಬಾಳೆಲೆಯ ಅರ್ಕೇರಿನಾಡ್‌ಗೆೆ ಪಾದಯಾತ್ರೆ ಸಾಗಿತು. ಕೊಡವ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ನಾಚಪ್ಪ ಅವರು ಬೇಡಿಕೆ ಈಡೇರುವವರೆಗೆ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಹೋರಾಟ ನಿಲ್ಲದು ಎಂದು ಘೋಷಿಸಿದರು.

ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಜಾಗೃತಿ ಸಭೆಗಳನ್ನು ಆರಂಭಿಸಲಾಯಿತು.

ತಾ.೮ ರಂದು (ಇಂದು) ಬೆಳಿಗ್ಗೆ ೧೦ ಗಂಟೆಗೆ ಕಿರ್ನಾಲ್‌ನಾಡ್ ಕರ‍್ಗೂರ್-ಬೆಸಗೂರ್ ೩ ಗಂಟೆಗೆ ಪತ್ತ್ ಕಟ್‌ನಾಡ್ ಬೆಕ್ಕೆಸೆಡ್ಲೂರ್-ಕಾನೂರ್ ಪೊನ್ನಂಪೇಟೆ ತಾಲೂಕು, ತಾ.೯ ರಂದು ಬೆಳಿಗ್ಗೆ ೧೦ ಗಂಟೆಗೆ ತೊಡನಾಡ್ ಕುಮಟೂರ್-ಶ್ರೀಮಂಗಲ, ೨:೩೦ ಗಂಟೆಗೆ, ಕುರ್ಚಿನಾಡ್ ಕುರ್ಚಿ-ಬೀರುಗ, ಪೊನ್ನಂಪೇಟೆ ತಾಲೂಕು, ತಾ.೧೦ ರಂದು ಬೆಳಿಗ್ಗೆ ೧೦ ಗಂಟೆಗೆ ಮರೆನಾಡ್, ಪಾಕೇರಿನಾಡ್, ಐವತ್ನಾಡ್, ಪೊನಾಡ್ ಈ ನಾಲ್ಕು ನಾಡು ಮಂದ್‌ಗಳಲ್ಲಿ ಸಭೆ (ಬಾಡಗರ ಕೇರಿ-ತೆರಾಲ್-ಬಿರುನಾಣಿ) (ಪೊನ್ನಂಪೇಟೆ ತಾಲೂಕು), ತಾ.೧೧ ರಂದು ಬೆಳಿಗ್ಗೆ ೧೦ ಗಂಟೆಗೆ ತಾಳೆರಿನಾಡ್ (ಟಿ.ಶೆಟ್ಟಿಗೇರಿ), ೨.೩೦ ಗಂಟೆಗೆ ಅಂಜಿಗೇರಿನಾಡ್ (ಹುದಿಕೇರಿ-ಬೇಗೂರು) (ಪೊನ್ನಂಪೇಟೆ ತಾಲೂಕು) ನಲ್ಲಿ ಪಾದಯಾತ್ರೆ ನಡೆಯಲಿದೆ ಎಂದು ನಾಚಪ್ಪ ತಿಳಿಸಿದ್ದಾರೆ.

ಮದ್ರಿರ ಕರುಂಬಯ್ಯ, ಜಮ್ಮಡ ನಂದ, ಜಮ್ಮಡ ಮೋಹನ್, ಕೋಣಿಯಂಡ ಸಂಜು, ಅಜ್ಜಿಕುಟ್ಟೀರ ಲೋಕೇಶ್, ಅಪ್ಪೆಂಗಡ ಮಾಲೆ, ಜಮ್ಮಡ ಜಯ, ಕಾಂಡೇರ ಸುರೇಶ್, ಜಮ್ಮಡ ಜಗನ್, ಜಮ್ಮಡ ಡೀನ, ಕಾಡ್ಯಮಾಡ ಮನು ಸೋಮಯ್ಯ, ಪುಚ್ಚಿಮಾಡ ಸುಭಾಷ್, ಪುಚ್ಚಿಮಾಡ ರಾಯ್, ಕಿರಿಯಮಾಡ ಶಯನ್, ಕಿರಿಯಮಾಡ ಶಾನ್, ಡಾ.ಕಾಳಿಮಾಡ ಶಿವಪ್ಪ, ಪರ್ವಂಗಡ ನವೀನ್, ಚೋಳಪಂಡ ನಾಣಯ್ಯ, ಕಲಿಯಂಡ ಮೀನಾ, ಕೊಲ್ಲಿರ ಗಯಾ, ಚೋಳಪಂಡ ಜ್ಯೋತಿ, ಪಟ್ಟಮಾಡ ಲಲಿತಾ, ಪಟ್ಟಮಾಡ ಕುಶ, ಮತ್ತಿತರ ಪ್ರಮುಖರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.