ಹ್ಯಾಂಗ್ಝೌ, ಅ. ೬: ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ೨೦೨೩ರ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಪುರುಷರ ಹಾಕಿ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜಪಾನ್ ವಿರುದ್ಧ ಭಾರತ ೫-೧ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.
ಮನ್ಪ್ರೀತ್ ಸಿಂಗ್ ಬಾರಿಸಿದ ಗೋಲಿನ ನೆರವಿನಿಂದ ಭಾರತ ವಿರಾಮದ ವೇಳೆಗೆ ೧-೦ ಮುನ್ನಡೆ ಸಾಧಿಸಿತ್ತು. ನಂತರ ನಾಯಕ ಹರ್ಮನ್ಪ್ರೀತ್ ಸಿಂಗ್, ಅಮಿತ್ ರೋಹಿತ್ ದಾಸ್ ಮತ್ತು ಅಭಿಷೇಕ್ ಗೋಲು ಗಳಿಸುವ ಮೂಲಕ ಜಪಾನ್ ತಂಡವನ್ನು ಮಣಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಭಾರತದ ಹಾಕಿ ತಂಡ ಗೆಲುವಿನೊಂದಿಗೆ ೨೦೨೪ರಲ್ಲಿ ನಡೆಯಲ್ಲಿರುವ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದುಕೊಂಡಿದೆ.
೧೯೬೬, ೧೯೯೮ ಮತ್ತು ೨೦೧೪ರಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದಿದ್ದ ಭಾರತ ಈಗ ನಾಲ್ಕನೇ ಬಾರಿ ಏಷ್ಯನ್ ಗೇಮ್ಸ್ ಚಿನ್ನವನ್ನು ತನ್ನದಾಗಿಸಿಕೊಂಡಿದೆ.
ಏಷ್ಯನ್ ಗೇಮ್ಸ್ನಲ್ಲಿ ಭಾರತ ಇಂದು ೨೨ನೇ ಚಿನ್ನದ ಪದಕ ಗೆದ್ದಿದ್ದು, ಇದರೊಂದಿಗೆ ದೇಶದ ಒಟ್ಟು ಪದಕಗಳ ಸಂಖ್ಯೆ ೯೫ಕ್ಕೆ ಏರಿಕೆಯಾಗಿದೆ.