ಚೆಟ್ಟಳ್ಳಿ, ಅ. ೪: ಅವಧಿಗೂ ಮುನ್ನ ಸುರಿದ ಮಳೆಯಿಂದಾಗಿ ಅರೆಬಿಕಾ ಕಾಫಿ ಹಣ್ಣಾಗಿದ್ದು, ಉದುರಿಹೋಗುವ ಭೀತಿಯಿಂದ ಕೆಲವೆÀಡೆÀ ಸೆಪ್ಟಂಬರ್ ತಿಂಗಳಲ್ಲೇ ಬೆಳೆಗಾರರು ಹಣ್ಣಾದÀ ಅರೆಬಿಕಾ ಕಾಫಿ ಕುಯಿಲು ಪ್ರಾರಂಭಿಸಿದ್ದಾರೆ. ಕಳೆದ ವಾರ ನಿರಂತರವಾಗಿ ಸುರಿದ ಮಳೆಯ ನಡುವೆ ಒಣಗಿಸಲಾಗದೆ ಬೆಳೆಗಾರರು ಪರದಾಡುವಂತಾಗಿದೆ.

ಅAತರರಾಷ್ಟಿçÃಯ ಮಾರುಕಟ್ಟೆಯಲ್ಲಿ ಅರೆಬಿಕಾದ ಬೇಡಿಕೆ ಹೆಚ್ಚಿದ್ದರೂ ವರ್ಷದಿಂದ ವರ್ಷಕ್ಕೆ ಬದಲಾಗುತಿರುವ ಮಳೆ ಹಾಗೂ ಹವಾಮಾನದ ವೈಪರೀತ್ಯದ ಪರಿಣಾಮ ಕಾಫಿ ನಾಡಾದ ಕೊಡಗಿನ ಅರೆಬಿಕಾ ಬೆಳೆಗಾರರು ಪರಿಸತಪಿಸು ವಂತಾಗಿದೆ.

ಮಡಿಕೇರಿ ತಾಲೂಕು ಹೊಸ್ಕೇರಿಯ ಕಾಫಿ ಬೆಳೆಗಾರ ತೆಕ್ಕಡೆ ಜರ್ನಾಧನ ಅವರ ತೋಟದಲ್ಲಿ ಈ ಬಾರಿ ಬಲು ಬೇಗನೆ ಹಣ್ಣಾದ ಅರೆಬಿಕಾ ಹಣ್ಣನ್ನು ಮಳೆಯ ನಡುವೆಯೇ ಕುಯಿಲು ಮಾಡಿ ಪಲ್ಪ್ಮಾಡಿ ಬೀಜವು ಹಾಳಾಗದಂತೆ ಗೋದಾಮಿ ನೊಳಗೆ ಹರಡಿ ಒಣಗಿಸಲು ಪ್ರಯತ್ನಿಸುತ್ತಿದ್ದಾರೆ.

(ಮೊದಲ ಪುಟದಿಂದ) ಕಳೆದ ಮೂರು ದಿನಗಳಿಂದ ಮಳೆ ಕಡಿಮೆಯಾಗಿದ್ದು, ಬಿಸಿಲು ಬರುತಿದ್ದಂತೆ ಕಣದಲ್ಲಿ ಹರಡಿ ಒಣಗಿಸುತಿದ್ದಾರೆ. ಈ ವರ್ಷ ವಾಡಿಕೆಗಿಂತ ಮಳೆ ಕಡಿಮೆಯಾದರೂ ಮುಂದಿನ ದಿನಗಳಲ್ಲಿ ಉದುರುತ್ತÀವೆ. ಕುಯಿಲು ಮಾಡಿದರೆ ಒಣಗಿಸಲು ಪರದಾಟದ ನಡುವೆ ಈ ಬಾರಿಯೂ ಫಸಲಿನ ಸಮಯದಲ್ಲಿ ಹೊಡೆತ ಬೀಳುವ ಆತಂಕದಲ್ಲಿ ಬೆಳೆಗಾರರಿದ್ದಾರೆ.

ದಕ್ಷಿಣ ಕೊಡಗಿಗಿಂತ ಉತ್ತರ ಕೊಡಗಿನ ವಾತಾವರಣ ಅರೆಬಿಕಾ ಬೆಳೆಗೆ ಉತ್ತಮವಾಗಿದ್ದು, ಇಲ್ಲಿನ ಬೆಳೆಗಾರರು ಹೆಚ್ಚಿನ ನಿರ್ವಹಣೆಯಿದ್ದರೂ, ಅರೆಬಿಕಾವನ್ನು ಬೆಳೆಯುತಿದ್ದಾರೆ. ಪಲ್ಪ್ ಮಾಡಲು ಎರಡು ಮೂರು ಬಾರಿ ಹಣ್ಣನ್ನು ಮಾತ್ರ ಕುಯಿಲು ಮಾಡಬೇಕಿದೆ. ಈ ಬಾರಿ ಹಣ್ಣಾಗುತ್ತಿರುವ ಅರೆಬಿಕಾದ ನಡುವೆ ಸುರಿಯುವ ಮಳೆ ಶಾಪವಾಗಿ ಪರಿಣಮಿಸುತ್ತಿದೆ. ಒಂದು ಬದಿಯಲ್ಲಿ ಕಾಫಿ ಹಣ್ಣಾದಂತೆ ಕುಯಿಲು ಮಾಡದಿದ್ದರೆ ಪಕ್ಷಿಗಳು, ಮಂಗಗಳು ತಿಂದು ನಾಶಪಡಿಸಿದರೆ, ಮತ್ತೊಂದಡೆ ಅರೆಬಿಕಾದ ಹಣ್ಣುಗಳೆಲ್ಲ ಉದುರುತ್ತಿವೆ. ಅರೆಬಿಕಾಗೆ ರೋಬಸ್ಟಾಗಿಂತ ಹೆಚ್ಚಿನ ಬೆಲೆ ಸಿಗುತ್ತದೆಯಾದರೂ ಕುಯಿಲಿನÀ ಸಮಯದಲ್ಲಿ ಬರುವ ಅಕಾಲಿಕ ಮಳೆ, ರೋಗಬಾಧೆಯನ್ನು ನಿಯಂತ್ರಿಸಲಾಗದೆ ಅರೆಬಿಕಾ ಬೆಳೆಗಾರರು ಗಿಡಗಳನೆಲ್ಲ ತೆಗೆದು ರೋಬಸ್ಟಾ ಗಿಡಗಳನ್ನು ನೆಡುತ್ತಿರುವುದು ಸಾಮಾನ್ಯವಾಗಿದೆ.

-ಪುತ್ತರಿರ ಕರುಣ್ ಕಾಳಯ್ಯ