ಮಡಿಕೇರಿ, ಅ. ೪: ಮೀಸಲು ಅರಣ್ಯದಲ್ಲಿ ಉರುಳು ಹಾಕಿ ಜಿಂಕೆಯನ್ನು ಹತ್ಯೆಗೈದ ಆರೋಪಿಗಳನ್ನು ಸಿ.ಐ.ಡಿ. ಪೊಲೀಸ್ ಅರಣ್ಯ ಘಟಕ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಮಾವಿನಹಳ್ಳ ಹಾಡಿಯ ನಿವಾಸಿಗಳಾದ ಗೋಪಾಲ್, ಜೆ.ಎಲ್.ಪುಟ್ಟ ಬಂಧಿತ ಆರೋಪಿಗಳು. ಸೋಮವಾರಪೇಟೆ ತಾಲೂಕು ರಂಗಸಮುದ್ರದ ಮಾವಿನಹಳ್ಳ ಹಾಡಿಯ ಸಮೀಪದ ಆನೆಕಾಡು ಮೀಸಲು ಅರಣ್ಯದಲ್ಲಿ ಉರುಳು ಹಾಕಿ ಜಿಂಕೆಯನ್ನು ಬೇಟೆಯಾಡಿ ಹತ್ಯೆ ಮಾಡಿ ಅದರ ಚರ್ಮವನ್ನು ಅಲ್ಲಿಯೇ ಬಿಟ್ಟು ಹೋದ ಪ್ರಕರಣ ಬೆಳಕಿಗೆ ಬಂದಿತ್ತು. ತನಿಖೆ ಕೈಗೊಂಡ ಪೊಲೀಸರು ಇಬ್ಬರನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಸಿಐಡಿ ಅರಣ್ಯ ಘಟಕದ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ನಿರ್ದೇಶನ, ಮಡಿಕೇರಿ ವಿಭಾಗದ ಅಧೀಕ್ಷಕ ಕಾಶಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕಿ ಸಿ.ಯು. ಸವಿ, ಮುಖ್ಯಪೇದೆಗಳಾದ ಶೇಖರ್, ರಾಘವೇಂದ್ರ, ಯೋಗೇಶ್, ಉಮೇಶ್, ಮೋಹನ್ ಪೇದೆಗಳಾದ ಸ್ವಾಮಿ, ಮಂಜುನಾಥ್ ಇದ್ದರು.