ಮಡಿಕೇರಿ, ಅ. ೪: ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನ ಚೀಫ್ ಜನರಲ್ ಮ್ಯಾನೇಜರ್ ಆಗಿ ಕೊಡಗಿನವರಾದ ಮಣವಟ್ಟಿರ ಬೆಳ್ಯಪ್ಪ (ಜಯ) ಅವರು ನೇಮಕಗೊಂಡಿದ್ದಾರೆ. ಈತನಕ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಇದೀಗ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿ ಬಡ್ತಿ ಹೊಂದಿದ್ದಾರೆ.

೧೯೯೧ರಲ್ಲಿ ಬ್ಯಾಂಕ್‌ಗೆ ಸೇರ್ಪಡೆಗೊಂಡ ಇವರು ಮೂಲತಃ ಬಲ್ಲಮಾವಟಿ ದೊಡ್ಡಪುಲಿಕೋಟು ಗ್ರಾಮದವರಾದ ಮಣವಟ್ಟಿರ ಕುಟ್ಟಪ್ಪ ಹಾಗೂ ದೇವಕಿ ದಂಪತಿಯ ಪುತ್ರ.