ಮಡಿಕೇರಿ, ಅ. ೩ : ಹಾಕಿ ಇಂಡಿಯಾ ವತಿಯಿಂದ ಪ್ರಥಮ ಹಾಕಿ ಇಂಡಿಯಾ ಸಬ್‌ಜೂನಿಯರ್ ಬಾಲಕ-ಬಾಲಕಿಯರ ದಕ್ಷಿಣವಲಯ ಚಾಂಪಿಯನ್‌ಶಿಪ್ - ೨೦೨೩ ಪಂದ್ಯಾವಳಿ ಚೆನ್ನೆöÊಯಲ್ಲಿ ಅ. ೧೭ ರಿಂದ ೨೪ರವರೆಗೆ ಜರುಗಲಿದೆ. ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಹಾಕಿ ಕರ್ನಾಟಕದಿಂದ ತಂಡದ ಆಟಗಾರರ ಆಯ್ಕೆಗೆ ಶಿಬಿರ ಏರ್ಪಡಿಸಲಾಗಿದೆ. ೨೦೦೮ರ ಜನವರಿ ೧ರ ಬಳಿಕ ಜನಿಸಿದವರು ಈ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಆಯ್ಕೆ ಶಿಬಿರ ಬೆಂಗಳೂರಿನ ಶಾಂತಿನಗರದಲ್ಲಿರುವ ಫಿ.ಮಾ. ಕೆ.ಎಂ. ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ತಾ. ೭ರಂದು ಬೆ. ೧೦ ರಿಂದ ಪ್ರಾರಂಭವಾಗಲಿದೆ ಎಂದು ಹಾಕಿ ಕರ್ನಾಟಕದ ಡಾ. ಎ.ಬಿ. ಸುಬ್ಬಯ್ಯ ತಿಳಿಸಿದ್ದಾರೆ.