ಸುಂಟಿಕೊಪ್ಪ, ಅ. ೩: ವನ್ಯ ಪ್ರಾಣಿಗಳ ದಾಂಧಲೆಯಿAದ ಹೈರಾಣಾಗಿರುವ ಕೃಷಿಕರು ಇದೀಗ ಕಾಡು ದನಗಳ ಹಾವಳಿಗೆ ತುತ್ತಾಗಿದ್ದಾರೆ.
ಯಡವನಾಡು ಮೀಸಲು ಅರಣ್ಯ ಪ್ರದೇಶದಿಂದ ಐಗೂರು ವ್ಯಾಪ್ತಿಗೆ ಕಾಡು ದನಗಳು ಲಗ್ಗೆಯಿಡುತ್ತಿವೆ. ಐಗೂರು ಗ್ರಾಮದ ಎಂ.ಸಿ. ಗಣೇಶ, ಎಂ.ಸಿ. ಸಂಜಯ್, ರಾಣಿ ದೇವರಾಜು, ಎಂ.ಎA. ಲಿಂಗರಾಜು ಹಾಗೂ ಪುಚ್ಚಿಯಂಡ ಕುಟುಂಬಸ್ಥರ ಕಾಫಿ ತೋಟಕ್ಕೆ ೧೦೦ಕ್ಕೂ ಅಧಿಕ ಕಾಡು ದನ ಲಗ್ಗೆಯಿಟ್ಟು ಕಾಫಿ ಗಿಡದ ಕೊಂಬೆಗಳನ್ನು ಮುರಿದು ಹೊಸದಾಗಿ ನೆಟ್ಟ ಕಾಫಿ ಗಿಡ, ಕರಿಮೆಣಸು ಗಿಡಗಳನ್ನು ನಾಶಪಡಿಸಿವೆ.
ಬಾಳೆಗಿಡ ಹಾಗೂ ತೋಟದಲ್ಲಿ ಸಿಕ್ಕ ಸಣ್ಣ ಅಡಿಕೆ, ತೆಂಗು ಗಿಡವನ್ನು ತಿಂದು ಮೆಟ್ಟಿ ನಾಶಪಡಿಸುತ್ತಿದ್ದು, ಫಸಲು ಬಿಡುವ ಸಮಯದಲ್ಲಿ ನೂರಾರು ಕಾಡು ದನಗಳು ಒಂದೇ ಸಮನೆ ನುಗ್ಗುವುದರಿಂದ ಕಾಯಿಗಳು ನೆಲಕ್ಕೆ ಉದುರಿ ಬೀಳುತ್ತಿದೆ.
ರಾತ್ರಿ ೧೧ ಗಂಟೆಗೆ ತೋಟಕ್ಕೆ ನುಗ್ಗುವ ಕಾಡು ದನಗಳು ಬೆಳಗ್ಗಿನ ಜಾವ ೩ ಗಂಟೆಗೆ ಕಾಲ್ಕಿತ್ತು ಅರಣ್ಯ ಪ್ರದೇಶಕ್ಕೆ ಸೇರಿಕೊಳ್ಳುತ್ತಿವೆ.