ಮಡಿಕೇರಿ, ಅ. ೪: ಹನ್ನೆರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡದ ಉಜಿರೆಯಲ್ಲಿ ನಡೆದ ಸೌಜನ್ಯ ಅತ್ಯಾಚಾರ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ನಗರದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ನಿಷ್ಪಕ್ಷಪಾತ ಮರುತನಿಖೆ ನಡೆÀಸಿ, ಯುವತಿಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಹಾಗೂ ಇಂತಹ ಅಮಾನುಷ ಪ್ರಕರಣಗಳು ಮರುಕಳಿಸದಂತೆ ಸರ್ಕಾರ ಕಠಿಣ ಕಾನೂನು ರೂಪಿಸುವಂತೆ ವಿದ್ಯಾರ್ಥಿ ಸಮೂಹ ಆಗ್ರಹಿಸಿತು.

ವಾಯ್ಸ್ ಆಫ್ ಯೂತ್ ಸಂಘಟನೆಯ ನೇತೃತ್ವದಲ್ಲಿ ನಗರದ ಇಂದಿರಾಗಾAಧಿ ವೃತ್ತದಲ್ಲಿ ಸೇರಿದ ವಿದ್ಯಾರ್ಥಿಗಳು, ಅತ್ಯಾಚಾರ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಕೊಡಗಿನಲ್ಲೂ ಇಂತಹ ಪ್ರಕರಣಗಳು ಮರುಕಳಿಸಬಾರದು. ಪ್ರಕರಣದಲ್ಲಿ ಸಂತೋಷ್ ರಾವ್ ಎಂಬಾತನನ್ನು ಬಂಧಿಸಿದ್ದರೂ, ಸೂಕ್ತ ಸಾಕ್ಷಾö್ಯಧಾರಗಳ ಕೊರತೆಯಿಂದ ಆರೋಪÀ ಮುಕ್ತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಮರುತನಿಖೆ ನಡೆಸಲೇಬೇಕೆಂದು ವಾಯ್ಸ್ ಆಫ್ ಯೂತ್ ಅಧ್ಯಕ್ಷ ದಿನೇಶ್ ಮಾಧ್ಯಮ ಗಳ ಮೂಲಕ ಒತ್ತಾಯಿಸಿದರು. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗುವ ಕಾನೂನು ಜಾರಿಯಾಗಬೇಕೆಂದು ವಿದ್ಯಾರ್ಥಿನಿಗಳು ಆಗ್ರಹಿಸಿದÀರು.

ಅನುಮತಿ ಪಡೆಯದ ಕಾರಣ, ಪ್ರತಿಭಟನಾಕಾರರಿಗೆ ಮೆರವಣಿಗೆ ನಡೆಸಲು ಪೊಲೀಸರು ಅವಕಾಶ ನಿರಾಕರಿಸಿದ ಪ್ರಸಂಗವೂ ಎದುರಾಯಿತು. ಈ ವೇಳೆ ವಾಯ್ಸ್ ಆಫ್ ಯೂತ್ ಸಂಘಟನೆಯ ಪ್ರತಾಪ್, ಶಶಿ, ಜಗ್ಗ, ದರ್ಶಿನಿ ಮತ್ತಿತರರು ಪಾಲ್ಗೊಂಡಿದ್ದರು.