ಮಡಿಕೇರಿ, ಅ. ೪: ಹಂಡ್ಲಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ೨೦೨೨-೨೩ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕೆ.ಪಿ. ನಿರಂಜನ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಸಂಘದ ನಿರ್ದೇಶಕ ಎಸ್. ಆರ್. ವೀರೇಂದ್ರ ಕುಮಾರ್ ಸ್ವಾಗತಿಸಿ, ಗಣೇಶ್ ವಂದಿಸಿದರು. ಸಂಘದ ನಿರ್ದೇಶಕರುಗಳಾದ ಎಸ್. ರವಿಕುಮಾರ, ಎಂ.ಪಿ. ನಾಗೇಶ, ಕೆ.ಆರ್. ಕುಸುಮ, ಕೆ.ಎಂ. ದೇವರಾಜು, ಉಪಾಧ್ಯಕ್ಷರಾದ ಕೆ.ಎನ್. ಮಧು, ಕೆಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಎಸ್.ಎಂ. ಭರತ, ಮೇಲ್ವಿಚಾರಕ ಹೆಚ್.ಸಿ. ಕುಮಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎನ್. ಬಸಪ್ಪ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.