ಪೊನ್ನಂಪೇಟೆ, ಅ. ೪ : ಪೊನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೩-೨೮ನೇ ಸಾಲಿನ ಆಡಳಿತ ಮಂಡಳಿಗೆ ಚುನಾವಣಾ ಪ್ರಕ್ರಿಯೆ ನಡೆಯಿತು. ಒಟ್ಟು ೧೩ ಸ್ಥಾನಗಳಿಗೆ ೨೩ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ೧೦ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದ ಕಾರಣ ಉಳಿದ ಎಲ್ಲಾ ೧೩ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು.

ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಕೋಳೆರ ಸಿ. ದಿನು, ಅಡ್ಡಂಡ ಕೆ. ತಿಮ್ಮಯ್ಯ (ಜಾಲಿ), ಆಲೀರ ಅಬ್ದುಲ್ ಅಜೀಜ್, ಅಡ್ಡಂಡ ಸಿ. ಕುಶಾಲಪ್ಪ (ಪ್ರಕಾಶ್), ಪಡಿಞÁರಂಡ ಗಿರೀಶ್, ಚೀರಂಡ ಎಂ. ಚಂಗಪ್ಪ, ಪ್ರವರ್ಗ ಎ. ಕ್ಷೇತ್ರದಿಂದ ಮಂಜುವAಡ ಬೆಳ್ಳಿಯಪ್ಪಮಯ್ಯ (ಅರುಣ), ಪ್ರವರ್ಗ ಬಿ ಕ್ಷೇತ್ರದಿಂದ ಚೀರಂಡ ಕಂದಾ ಸುಬ್ಬಯ್ಯ, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಮಚ್ಚಿಯಂಡ ಸುವಿನ್ ಮಾಚಯ್ಯ, ಮೂಕಳೇರ ಪಿ. ಸರಸ್ವತಿ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಹೆಚ್.ಟಿ. ವಿಠಲ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಸುಮಿತ ವಿಶ್ವನಾಥ್, ಸಾಲಗಾರರಲ್ಲದ ಕ್ಷೇತ್ರದಿಂದ ಕಾಕೇರ ಆರ್. ತಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾ ಅಧಿಕಾರಿ ಪಿ.ಆಶಾ ಅವರು ಚುನಾವಣಾ ಪ್ರಕ್ರಿಯೆ ನಡೆಸಿದರು.