ಮಡಿಕೇರಿ, ಅ. ೪: ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಗರಸಭಾ ಸದಸ್ಯೆಯರು, ಮಹಿಳೆಯರ ಬಳಗ, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ತಾ.೨೨ ರಂದು ಗಾಂಧಿ ಮೈದಾನದಲ್ಲಿ ಮಹಿಳಾ ದಸರಾ ಆಯೋಜಿಸಲಾಗಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಮತ್ತು ಮಹಿಳಾ ದಸರಾ ಸಮಿತಿ ಸಂಚಾಲಕಿ ಶ್ವೇತಾ ಪ್ರಶಾಂತ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾ.೨೨ ರಂದು ಬೆಳಿಗ್ಗೆ ೧೦ ಗಂಟೆಯಿAದಲೇ ನಗರದ ಗಾಂಧಿ ಮೈದಾನದಲ್ಲಿ ೮ನೇ ವರ್ಷದ ಮಹಿಳಾ ದಸರಾವನ್ನು ಸಂಭ್ರಮದಿAದ ಆಚರಿಸಲು ತೀರ್ಮಾನಿಸಲಾಗಿದ್ದು, ವಿವಿಧ ಸ್ಪರ್ಧೆಗಳನ್ನು ಜಿಲ್ಲೆಯ ಮಹಿಳೆಯರಿಗಾಗಿ ಆಯೋಜಿಸಲಾಗಿದೆ.

ಎಥ್‌ನಿಕ್ ಫ್ಯಾಷನ್ ಶೋ ೨೦ ರಿಂದ ೩೦ ಮತ್ತು ೩೫ ರಿಂದ ೪೫ ವರ್ಷ ವಯೋಮಿತಿಯ ಮಹಿಳೆಯರಿಗೆ. ಕರ್ನಾಟಕದ ವಿವಿಧ ಉಡುಗೆಗಳಿಗೆ ಆದ್ಯತೆ - (ಒಟ್ಟು ೩ ರಿಂದ ೪ ಗುಂಪುಗಳಿಗೆ ಅವಕಾಶ, ೧ ಗುಂಪಿನಲ್ಲಿ ೧೦ ಜನರು ಕಡ್ಡಾಯವಾಗಿ ಇರಬೇಕು, ಉಡುಗೆ, ಆಭರಣ, ವಸ್ತç, ನಡಿಗೆ, ಕೇಶ ವಿನ್ಯಾಸ, ಎಲ್ಲವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು.

ಗಾರ್ಭಾ ನೃತ್ಯ ಸ್ಪರ್ಧೆ - ೨೦ ರಿಂದ ೩೦ ವರ್ಷದ ಮಹಿಳೆಯರಿಗಾಗಿ-

(೩ ರಿಂದ ೪ ಗುಂಪುಗಳಿಗೆ ಅವಕಾಶ, ೧ ಗುಂಪಿನಲ್ಲಿ ೬ ರಿಂದ ೧೦ ಜನರು ಇರಬೇಕು). ೩೦ ರಿಂದ ೪೦ ವರ್ಷ ವಯೋಮಿತಿ ಮಹಿಳೆಯರಿಗೆ-೧೦೦ ಮೀಟರ್ ಓಟದ ಸ್ಪರ್ಧೆ, ತೆಂಗಿನ ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆ, ಹಗ್ಗ ಜಗ್ಗಾಟ : ೪ ಗುಂಪುಗಳಿಗೆ ಅವಕಾಶ ವಿರುತ್ತದೆ. (ಒಂದು ಗುಂಪಿನಲ್ಲಿ ೧೦ ಜನ ಇರಬೇಕು),

೪೦ ರಿಂದ ೫೦ ವರ್ಷ ವಯೋಮಿತಿ ಮಹಿಳೆಯರಿಗೆ -೧೦೦ ಮೀಟರ್ ಓಟದ ಸ್ಪರ್ಧೆ, ಚಮಚದಲ್ಲಿ ನಿಂಬೆ ಹಣ್ಣು ಇಟ್ಟು ವೇಗವಾಗಿ ನಡೆಯುವುದು., ಬಕೆಟ್‌ಗೆ ಚೆಂಡನ್ನು ಹಾಕುವುದು.

೫೦ ರಿಂದ ೬೦ ವರ್ಷ ವಯೋಮಿತಿ ಮಹಿಳೆಯರಿಗೆ - ಬಾಸ್ಕೆಟ್ ಬಾಲ್ (೨೦ ರಿಂದ ೨೫ ಜನರಿಗೆ ಅವಕಾಶ), ತಲೆಯ ಮೇಲೆ ಪುಸ್ತಕ ಇಟ್ಟು ನಡೆಯುವುದು, ಕೋಲಿಗೆ ರಿಂಗ್ ಹಾಕುವುದು.

೬೦ ರಿಂದ ೭೦ ವರ್ಷ ವಯೋಮಿತಿ ಮಹಿಳೆಯರಿಗೆ - ನಿಧಾನವಾಗಿ ನಡೆಯುವುದು. ಸೂಜಿಗೆ ನೂಲನ್ನು ಹಾಕುವುದು. ಬಾಂಬ್ ಇನ್ ಸಿಟಿ.

೭೦ ರಿಂದ ೮೦ ವರ್ಷ ವಯೋಮಿತಿ ಮಹಿಳೆಯರಿಗೆ - ಸೂಜಿಗೆ ನೂಲನ್ನು ಹಾಕುವುದು, ಚೆಂಡನ್ನು ವರ್ಗಾಯಿಸುವುದು, ನಿಧಾನವಾಗಿ ನಡೆಯುವುದು.

ಎಲ್ಲಾ ವಯಸ್ಸಿನ ಮಹಿಳೆಯರಿಗಾಗಿ ಮೆಹೆಂದಿ ಹಾಕುವುದು, ಸೀರೆಯ ನಿಖರವಾದ ಬೆಲೆ ಹೇಳುವುದು ಮತ್ತು ವಾಲಗತ್ತಾಟ್ ಸ್ಪರ್ಧಿಗಳು ತಮ್ಮ ಆಧಾರ್ ಕಾರ್ಡ್ ಅಥವಾ ಐ.ಡಿ. ತರತಕ್ಕದ್ದು ಎಂದು ಮಹಿಳಾ ದಸರಾ ಸಂಚಾಲಕಿ ಶ್ವೇತಾಪ್ರಶಾಂತ್ ತಿಳಿಸಿದ್ದಾರೆ. ಮಹಿಳಾ ದಸರಾ ಅಂಗವಾಗಿನ ಎಲ್ಲಾ ಸ್ಪರ್ಧೆಗಳಿಗೆ ನೋಂದಾಯಿಸಲು ತಾ.೧೨ ಕೊನೆ ದಿನವಾಗಿದೆ.

ಹೆಚ್ಚಿನ ಮಾಹಿತಿಗೆ ಸವಿತಾ ಕುಡೆಕಲ್ - ೯೫೩೫೮೯೮೩೫೨, ಮೀನಾ ಕುಮಾರಿ - ೯೫೯೧೭ ೫೯೯೮೩, ಶ್ವೇತಾ ಪ್ರಶಾಂತ್ - ೯೯೮೦೯೩೮೭೦೦, ಮಿನಾಝ್ -೮೩೧೦೮೯೧೨೬೯, ವೀಣಾಕ್ಷಿ - ೮೭೬೨೩ ೦೩೨೦೮, ಸವಿತಾ ರಾಕೇಶ್ ೭೯-೭೫೪೦೯೪೯೫, ಕನ್ನಿಕೆ - ೭೭೬೦೮ ೪೦೭೫೪ ಸಂಪರ್ಕಿಸಬಹುದಾಗಿದೆ.