ಮಡಿಕೇರಿ, ಅ. ೪ : ಎಸ್.ಕೆ.ಎಸ್.ಎಸ್.ಎಫ್. ಜಿಲ್ಲಾ ಸಮ್ಮೇಳನ, ಬೃಹತ್ ಮಿಲಾದ್ ಕಾನ್ಫರೆನ್ಸ್ ಮತ್ತು ನೂರೇ ಅಜ್ಮೀರ್ ಕಾರ್ಯಕ್ರಮವು ತಾ. ೧೧ ರಂದು ಕುಶಾಲನಗರದ ಎಸ್‌ಎಲ್‌ಎನ್ ಮೈದಾನದಲ್ಲಿ ನಡೆಯಲಿದೆ ಎಂದು ಎಸ್.ಕೆ.ಎಸ್.ಎಸ್.ಎಫ್. ಜಿಲ್ಲಾಧ್ಯಕ್ಷ ತಮ್ಲೀಕ್ ಧಾರಿಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ ೪ ಗಂಟೆಗೆ ಮಿಲಾದ್ ಸಂದೇಶ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ಮುಸ್ಲಿಂ ಯೂತ್ ಲೀಗ್‌ನ ಕೇಂದ್ರ ಅಧ್ಯಕ್ಷ ಪಾಣಕ್ಕಾಡ್ ಸೈಯ್ಯಿದ್ ಮುನವ್ವರಲಿ ಶಿಹಾಬ್ ತಂಙಳ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಎಸ್‌ಕೆಎಸ್‌ಎಸ್‌ಎಫ್ ಕೇಂದ್ರ ಸಮಿತಿ ಉಪಾಧ್ಯಕ್ಷ ಸತ್ತಾರ್ ಪಂದಲ್ಲೂರ್ ‘ಸತ್ಯ, ಅಸ್ತಿತ್ವ, ಸಮರ್ಪಣೆ’ ವಿಷಯದ ಕುರಿತು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಎ.ಎಸ್ ಪೊನ್ನಣ್ಣ, ಮಂಥÀರ್ ಗೌಡ, ಮಾಜಿ ಶಾಸಕ ಇಬ್ರಾಹಿಂ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.

ರಾತ್ರಿ ೮ ಗಂಟೆಗೆ ವಲಿಯುದ್ದೀನ್ ಫೈಜಿ ನೇತೃತ್ವದಲ್ಲಿ ನಡೆಯಲಿರುವ ನೂರೇ ಅಜ್ಮೀರ್ ಅಧ್ಯಾತ್ಮಿಕ ಸಂಗಮದಲ್ಲಿ ಧಾರ್ಮಿಕ ರಾಜಕೀಯ ನೇತಾರರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಅ.೫, ೬ ಮತ್ತು ೭ ರಂದು ಜಿಲ್ಲೆಯಾದ್ಯಂತ ಪ್ರಚಾರ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಮ್ಲೀಕ್ ಧಾರಿಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ಕೆ.ಎಸ್.ಎಸ್.ಎಫ್. ಕುಶಾಲನಗರ ಅಧ್ಯಕ್ಷ ಅಬ್ದುಲ್ ಹಮೀದ್, ಜಿಲ್ಲಾ ಸಮಿತಿ ಸದಸ್ಯರಾದ ಹಸನ್ ಮಾಪಿಳತ್ತೋಡು, ಹುಸೈನ್ ಮಾಪಿಳತ್ತೋಡು, ಸಮ್ಮೇಳನದ ವ್ಯವಸ್ಥಾಪಕ ಅಬ್ದುಲ್ ಮಜೀದ್, ಸ್ವಾಗತ ಸಮಿತಿ ಸಂಚಾಲಕ ಪಿ.ಎಂ. ಅಬ್ದುಲ್ಲ ಹಾಜರಿದ್ದರು.