ಮಡಿಕೇರಿ, ಅ. ೩: ಮಡಿಕೇರಿ ದಸರಾ ಉತ್ಸವಕ್ಕೆ ಸರ್ಕಾರದಿಂದ ಬರುವ ಅನುದಾನದಲ್ಲಿ ದಶಮಂಟಪಗಳಿಗೆ ಅನ್ಯಾಯವಾಗ ದಂತೆ ಉತ್ತಮ ಅನುದಾನ ನೀಡಲು ಕ್ರಮಕೈಗೊಳ್ಳುವುದಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಭರವಸೆ ನೀಡಿದರು.
ನಗರದ ರಾಜ್ದರ್ಶನ್ ಸಭಾಂಗಣದಲ್ಲಿ ನಡೆದ ದಶಮಂಟಪ ಸಮಿತಿ ಸಭೆಯಲ್ಲಿ ದಶಮಂಟಪ ಸಮಿತಿಗಳ ವಿವಿಧ ಬೇಡಿಕೆಯ ಮನವಿ ಪತ್ರವನ್ನು ಸ್ವೀಕರಿಸಿ ಬಳಿಕ ಅವರು ಮಾತನಾಡಿದರು. ದಶಮಂಟಪಗಳು ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದು, ಅವುಗಳಿಗೆ ಪ್ರಾಮುಖ್ಯತೆ ನೀಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಬಾರಿ ಬಾಕಿ ಇರುವ ಅನುದಾನದೊಂದಿಗೆ ಈ ಬಾರಿಯು ಉತ್ತಮ ಅನುದಾನವನ್ನು ದಶಮಂಟಪಗಳಿಗೆ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಂಥರ್ ಗೌಡ ಆಶ್ವಾಸನೆಯಿತ್ತರು. ತಾ. ೨೪ರ ಸಂಜೆ ೬ ಗಂಟೆಯಿAದ ತಾ. ೨೫ರ ಸಂಜೆ ೬ ಗಂಟೆವರೆಗೆ ಧ್ವನಿವರ್ಧಕವನ್ನು ಮಂಟಪಗಳಲ್ಲಿ ಬಳಸುವ ಸಂಬAಧ ದಶಮಂಟಪ ಸಮಿತಿಯ ಬೇಡಿಕೆ ಅನ್ವಯ ಸಂಬAಧಿಸಿದವರೊAದಿಗೆ ಚರ್ಚಿಸಿ ಅವಕಾಶ ಕಲ್ಪಿಸುವು ದಾಗಿಯೂ ಶಾಸಕರು ಭರವಸೆ ನೀಡಿದರು.
ಮಡಿಕೇರಿ ದಸರಾ ಜನೋತ್ಸವ ವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ನುಸುಳಬಾರದು. ಈ ಹಿನ್ನೆಲೆಯಲ್ಲಿ ಹಾಲಿ ಜನಪತ್ರಿನಿಧಿಗಳು ಹಾಗೂ ಮಾಜಿ ಜನಪ್ರತಿನಿಧಿ ಗಳೆಲ್ಲರನ್ನು ಉತ್ಸವಕ್ಕೆ ಆಹ್ವಾನಿಸುವ ಕೆಲಸವಾಗಬೇಕೆಂದು ದಸರಾ ಸಮಿತಿಗೆ ಸೂಚಿಸಿದ ಮಂಥರ್ ಗೌಡ, ನಗರದ ರಸ್ತೆ ದುರಸ್ತಿ ಕಾರ್ಯವನ್ನು ಕಡ್ಡಾಯವಾಗಿ ದಸರಾ ಉತ್ಸವಕ್ಕೂ ಮುನ್ನ ನಿರ್ವಹಿಸುವಂತೆ ನಗರ ಸಭಾಧ್ಯಕ್ಷರಿಗೆ ನಿರ್ದೇಶನ ನೀಡಿದರು. ದಸರಾ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳಿಂದ ಆಗಬೇಕಿರುವ ಪೂರ್ವ ತಯಾರಿ ಬಗ್ಗೆ ಶೀಘ್ರ ಸಭೆ ಕರೆದು ಸೂಚನೆ ನೀಡುವುದಾಗಿ ಶಾಸಕರು ತಿಳಿಸಿದರು.
ಕೆಪಿಸಿಸಿ ಪ್ರಮುಖ ಚಂದ್ರಮೌಳಿ ಮಾತನಾಡಿ, ಮಡಿಕೇರಿ ದಸರಾ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಆಚರಿಸಲ್ಪಡಬೇಕು ಎಂದು ಅಭಿಪ್ರಾಯಪಟ್ಟರು.
(ಮೊದಲ ಪುಟದಿಂದ) ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಮಡಿಕೇರಿ ನಗರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ದಶಮಂಟಪಗಳು ಸಹಕಾರ ನೀಡಬೇಕು ಎಂದರಲ್ಲದೆ ವಿಜಯದಶಮಿಯಂದು ಯಾವ ಮಂಟಪ ಅತೀ ಹೆಚ್ಚು ಪ್ರದರ್ಶನ ನೀಡುತ್ತದೆ ಎಂದು ಪರಿಶೀಲಿಸಿ ಹೆಚ್ಚು ಪ್ರದರ್ಶನ ನೀಡಿದ ಮಂಟಪಕ್ಕೆ ದಸರಾ ಸಮಿತಿಯಿಂದ ವಿಶೇಷ ಬಹುಮಾನ ನೀಡಲಾಗುವುದು ಎಂದರು.
ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಮಂಟಪಗಳಿಗೆ ಹೆಚ್ಚಿನ ಅನುದಾನ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಮನವಿ ಮಾಡಿದರು.
ವೇದಿಕೆಯಲ್ಲಿ ದಶಮಂಟಪ ಸಮಿತಿ ಅಧ್ಯಕ್ಷ ಮಂಜುನಾಥ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ದಶಮಂಟಪ ಸಮಿತಿ ಗೌರವಾಧ್ಯಕ್ಷ ಮನು ಮಂಜುನಾಥ್, ನಿರಂಜನ್, ಕೋದಂಡರಾಮ ಮಂಟಪ ಸಮಿತಿ ಅಧ್ಯಕ್ಷ ಗೋಪಿನಾಥ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಂಸ ಉಪಸ್ಥಿತರಿದ್ದರು. ಇದೇ ಸಂದರ್ಭ ದಶಮಂಟಪ ಸಮಿತಿಯಿಂದ ಶಾಸಕ ಮಂಥರ್ ಗೌಡ ಅವರನ್ನು ಸನ್ಮಾನಿಸಲಾಯಿತು. ದಶಮಂಟಪ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ್ ನಿರೂಪಿಸಿ, ಸ್ವಾಗತಿಸಿದರು.