ಸುಂಟಿಕೊಪ್ಪ, ಸೆ. ೩೦: ಟ್ಯಾಂಕರ್ನಿAದ ಡೀಸೆಲ್ ಸೋರಿಕೆಯಾಗಿ ರಾಷ್ಟಿçÃಯ ಹೆದ್ದಾರಿಯ ಮೇಲೆ ಚೆಲ್ಲಿದ ಪರಿಣಾಮ ಕೆಲ ವಾಹನಗಳು ಪಲ್ಟಿಯಾದ ಘಟನೆ ಶನಿವಾರ ಬೆಳಗ್ಗೆ ಸುಂಟಿಕೊಪ್ಪ -ಮಡಿಕೇರಿ ನಡುವಿನ ಬೋಯಿಕೇರಿಯಲ್ಲಿ ನಡೆದಿದೆ.
ಕುಶಾಲನಗರ ಕಡೆಯಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಡಿಸೇಲ್ ತುಂಬಿಸಿದ್ದ ಟ್ಯಾಂಕರ್ನಿAದ ಬಲ್ಯಾಂಡ್ರಿ ತೋಟದ ತಿರುವಿನಿಂದ ಬೋಯಿಕೇರಿ ಶಾಲೆಯ ಮುಂಭಾಗದವರೆಗೂ ಸೋರಿಕೆಯಾಗಿದೆ. ಈ ಸಮಯದಲ್ಲಿ ಅದೇ ರಾಷ್ಟಿçÃಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬೈಕ್ಗಳು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕಡಗದಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಟಿ. ಜಯಣ್ಣ ಹಾಗೂ ಸ್ಥಳೀಯರು ಟ್ಯಾಂಕರ್ ಅನ್ನು ತಡೆದು ನಿಲ್ಲಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಿದರು. ನಂತರ ಡೀಸೆಲ್ ಸೋರಿಕೆಯಾಗಿದ್ದ ರಸ್ತೆಯುದ್ದಕ್ಕೂ ಗಿಡಗಳನ್ನು ಹಾಕಿ ಮಣ್ಣಿನಿಂದ ಮುಚ್ಚುವ ಮೂಲಕ ಸಂಭವಿಸಲಿದ್ದ ಹೆಚ್ಚಿನ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.