ಪೊನ್ನಂಪೇಟೆ, ಸೆ. ೩೦: ಗೋಣಿಕೊಪ್ಪಲು ಕಾವೇರಿ ಕಾಲೇಜು ಬಿಸಿಎ ವಿಭಾಗದ ವತಿಯಿಂದ ೨೦೨೩-೨೪ನೇ ಸಾಲಿನ ಕಂಪ್ಯೂಟರ್ ಸೈನ್ಸ್ ವಿಭಾಗ ಮತ್ತು ಐ.ಟಿ. ಸೆಲ್‌ನ ಉದ್ಘಾಟನಾ ಕಾರ್ಯಕ್ರಮ ಮತ್ತು ಪ್ರಥಮ ವರ್ಷದ ಬಿಸಿಎ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಿಯಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಸ್ತುತ ಸನ್ನಿವೇಶದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗೆ, ವಿವಿಧ ಕಂಪೆನಿಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭ ೨೦೨೨-೨೩ನೇ ಸಾಲಿನಲ್ಲಿ ೧೫ ವಿವಿಧ ಕಂಪೆನಿಗಳ ಸಂದರ್ಶನದಲ್ಲಿ ಭಾಗವಹಿಸಿ ಎಲ್ಲಾ ೧೫ ಕಂಪೆನಿಗಳಿಗೂ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ ವಿದ್ಯಾರ್ಥಿನಿ ಆರಾಧನಾ ಶರ್ಮ, ಕಾವೇರಿ ಕಾಲೇಜಿನ ಆಡಳಿತಾತ್ಮಕ ಸಿಬ್ಬಂದಿಗಳಾದ ಚೋಕಿರ ಹ್ಯಾರಿ ಹಾಗೂ ಎಂ.ಎA. ಚನ್ನನಾಯಕ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ, ಬಿಸಿಎ ವಿಭಾಗ ಮುಖ್ಯಸ್ಥ ಯು.ಟಿ. ಪೆಮ್ಮಯ್ಯ, ಬಿಸಿಎ ವಿಭಾಗದ ಉಪನ್ಯಾಸಕರಾದ ಎ.ಕೆ. ಕೃತಿ, ಕೆ.ಕೆ. ಬೋಜಮ್ಮ, ಆರ್.ಆರ್. ನೌಮ್ಯ, ಕೆ.ಎಸ್. ಪಲ್ಲವಿ, ಎಸ್.ಎ. ತೀರ್ಥೇಶ್, ಕೆ.ಸಿ. ರಂಜಿತ್, ಹಳೆ ವಿದ್ಯಾರ್ಥಿ ಸಿ.ಪಿ. ನಿರ್ಷಿತ, ಕಾರ್ಯಕ್ರಮ ಸಂಚಾಲಕರುಗಳಾದ ಅರ್ಚನ ಸುರೇಶ್, ಸ್ವರಾಂತ್, ಸ್ಫೂರ್ತಿ ಕಾವೇರಮ್ಮ, ಫೈಝಲ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳಿಂದ ನೃತ್ಯ ಮತ್ತು ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು.