ಸುಂಟಿಕೊಪ್ಪ, ಸೆ. ೩೦: ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ೧೩ ಸ್ಥಾನಗಳಲ್ಲಿ ೧೦ ಬಿಜೆಪಿ ಬೆಂಬಲಿತರು ಮತ್ತು ೩ ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತರು ಪಡೆದುಕೊಂಡರು. ಪೈಪೋಟಿಯಿಂದ ಕೂಡಿದ್ದ ಚುನಾವಣೆಯಲ್ಲಿ ಕಳೆದ ಬಾರಿಯ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಬೆಂಬಲಿತ ಡಿ.ಹೆಚ್. ವಿಶ್ವನಾಥ್ ಅರಸ್ ಮತ್ತೊಮ್ಮೆ ಜಯಗಳಿಸಿದರು. ಬಿಸಿಎಂ ಬಿ ಕ್ಷೇತ್ರದಲ್ಲಿ ಹೆಚ್.ಬಿ. ಶಿವಕುಮಾರ್, ಸಾಮಾನ್ಯ ಕ್ಷೇತ್ರದಿಂದ ಡಿ.ಎಸ್. ಚಂಗಪ್ಪ, ಕೆ.ಇ. ರೋಶನ್, ಎಲ್.ಎಂ. ರಾಜೇಶ, ಕೆ.ಇ. ಕುಟ್ಟಪ್ಪ, ಎಸ್.ಬಿ. ಸಂತೋಷ್, ಎಸ್.ಪಿ. ಪ್ರಸನ್ನ, ಮಹಿಳಾ ಕ್ಷೇತ್ರದಿಂದ ಸುನು ಕಿಶೋರ್, ಬಿ.ಕೆ. ದಾಕ್ಷಾಯಿಣಿ, ಪರಿಶಿಷ್ಟ ಜಾತಿಯಿಂದ ಹೆಚ್.ಜೆ. ಬಸಪ್ಪ, ಪರಿಶಿಷ್ಟ ಪಂಗಡದಿAದ ಲಕ್ಷö್ಮಣ, ಸಾಲಗಾರರಲ್ಲದ ಕ್ಷೇತ್ರದಿಂದ ಹೊನ್ನಪ್ಪ ಅವರುಗಳು ಆಯ್ಕೆಯಾಗಿದ್ದಾರೆ.