ಗೋಣಿಕೊಪ್ಪ ವರದಿ, ಸೆ. ೨೯: ಮಾಯಮುಡಿ ಗ್ರಾಮದಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದ್ದು, ಹಸು ಜೀವಪಾಯದಿಂದ ಪಾರಾಗಿದೆ. ಸ್ಥಳಕ್ಕೆ ತಿತಿಮತಿ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದ ಮನೋಜ್ ಚನ್ನರಾಜ್ ಎಂಬವರಿಗೆ ಸೇರಿದ ಹಸುವನ್ನು ಗದ್ದೆಯಲ್ಲಿ ಮೇಯಲು ಬಿಟ್ಟಿದ್ದಾಗ ಬೆಳಿಗ್ಗೆ ೯ ಗಂಟೆ ಸುಮಾರಿಗೆ ದಾಳಿ ನಡೆಸಿದೆ. ಹಸುವಿನ ಮೇಲೆ ಪರಚಿದ ಗಾಯವಿದ್ದು, ಕತ್ತಿನ ಭಾಗಕ್ಕೆ ಕೂಡ ಗಾಯವಾಗಿದೆ. ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.