ಶ್ರೀಮಂಗಲ, ಸೆ. ೨೯ : ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆಯುವ ಮದುವೆ ಸಮಾರಂಭದ ಮುಹೂರ್ತದ ದಿನ ಮಧ್ಯಾಹ್ನದ ವೇಳೆ ಮದ್ಯ ಬಳಕೆಯನ್ನು ನಿರ್ಬಂಧಿಸಿ ಕಳೆದ ಮಹಾಸಭೆಯಲ್ಲಿ ಜನಾಂಗದ ಹಿತದೃಷ್ಟಿಯಿಂದ ಕೈಗೊಂಡಿದ್ದ ನಿರ್ಣಯವನ್ನು ಮರುಪರಿಶೀಲಿಸಿ ಮತ್ತೆ ಮದ್ಯ ಬಳಕೆಗೆ ಅನುವು ಮಾಡಲು ಕೆಲವು ಸದಸ್ಯರ ಒತ್ತಾಯಕ್ಕೆ ಮಹಾಸಭೆಯಲ್ಲಿ ತೀವ್ರ ವಿರೋಧ ಉಂಟಾದ ಹಿನ್ನಲೆ ಬಹುಮತದಿಂದ ಮದ್ಯ ನಿರ್ಬಂಧ ನಿರ್ಣಯವನ್ನು ಎತ್ತಿ ಹಿಡಿಯಲಾಯಿತು.

ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಾಜದ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ಬಹುಮತದಲ್ಲಿ ನಿರ್ಣಯ ಪರ ಬೆಂಬಲ ದೊರೆಯಿತು. ಕಳೆದ ವರ್ಷದ ಈ ನಿರ್ಣಯವನ್ನು ಮರುಪರಿಶೀಲಿಸಿ ಮದ್ಯ ಬಳಕೆ ನಿಷೇಧ ತೆರವುಗೊಳಿಸಲು ಕೆಲವು ಸದಸ್ಯರು ಈ ಮಹಾಸಭೆಯಲ್ಲಿ ಒತ್ತಾಯಿಸಿದರೂ, ಮಹಾಸಭೆಯಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನೆÀ್ನಲೆ ಮದ್ಯ ನಿರ್ಬಂಧವನ್ನು ಯಥಾ ಸ್ಥಿತಿ ಮುಂದುವರೆಸಲು ನಿರ್ಣಯ ಕೈಗೊಳ್ಳಲಾಯಿತು.

ಕೊಡವ ಸಮಾಜದ ಸದಸ್ಯ ಬಯವಂಡ ನವನೀತ ಅವರು ಸಲ್ಲಿಸಿದ್ದ ಠರಾವು ಬಗ್ಗೆ ಚರ್ಚೆ ನಡೆದು ಪೊನ್ನಂಪೇಟೆ ಕೊಡವ ಸಮಾಜದ ಮೂರು ಮಕ್ಕಳಿರುವ ಸದಸ್ಯರ ಮೂರನೇ ಮಗುವಿನ ಮದುವೆ ಸಮಾರಂಭಕ್ಕೆ ಪೊನ್ನಂಪೇಟೆ ಕೊಡವ ಸಮಾಜದ ಮಂಟಪ ಬಾಡಿಗೆಯಲ್ಲಿ ವಿನಾಯಿತಿ ನೀಡಲು ಮಹಾಸಭೆಯಲ್ಲಿ ನಿರ್ಧರಿಸಲಾಯಿತು.

ಜನಾಂಗದ ಯುವಕರು ಸೇನೆಗೆ ಸೇರಿ ಸೇವೆ ಸಲ್ಲಿಸಲು ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ಸೇನೆಯಲ್ಲಿ ಹಾಲಿ ಸೇವೆ ಸಲ್ಲಿಸುತ್ತಿರುವ ಕೊಡವ ಸಮಾಜದ ಸದಸ್ಯರ ಮದುವೆಗೆ ಮಂಟಪ ಬಾಡಿಗೆಯಲ್ಲಿ ವಿನಾಯಿತಿ ನೀಡಲು ನಿರ್ಣಯ ಕೈಗೊಳ್ಳಲಾಯಿತು.

ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವುದು, ಸಮಾಜದ ಅಭಿವೃದ್ಧಿಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವ ಉದ್ದೇಶದಿಂದ ಪೊನ್ನಂಪೇಟೆ ಕೊಡವ ಸಮಾಜದ ಅಧೀನದಲ್ಲಿ ಪೊಮ್ಮಕ್ಕಡ ಕೂಟ (ಮಹಿಳೆಯರ ಕೂಟ) ವನ್ನು ರಚಿಸಲು ನಿರ್ಧರಿಸಲಾಯಿತು. ಇದಲ್ಲದೆ ಡಾ. ಕಾಳಿಮಾಡ ಶಿವಪ್ಪ ಸಲ್ಲಿಸಿದ್ದ ಠರಾವುಗಳನ್ನು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲು ಜಾಗೃತಿ ಸಭೆ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.

ವೇದಿಕೆಯಲ್ಲಿ ಕೊಡವ ಸಮಾಜ ನ್ಯಾಯ ಪೀಠ ಅಧ್ಯಕ್ಷ ಚಿರಿಯಪಂಡ ಉಮೇಶ್, ಕೊಡವ ಸಮಾಜ ಅಂಗಸAಸ್ಥೆ ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಸಂಸ್ಥೆ ಅಧ್ಯಕ್ಷ ಮಂಡಚAಡ ದಿನೇಶ್ ಚಿಟ್ಯಪ್ಪ, ಕೊಡವ ಸಮಾಜ ರಿಕ್ರಿಯಶನ್ ಕ್ಲಬ್ ಅಧ್ಯಕ್ಷ ಚೆಪ್ಪುಡೀರ ಎಂ. ಪೊನ್ನಪ್ಪ, ಕೊಡವ ಸಮಾಜದ ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ, ಗೌ. ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ಖಜಾಂಚಿ ಕಳ್ಳಿಚಂಡ ಕಟ್ಟಿ ಪೂಣಚ್ಚ, ಸಹಕಾರ್ಯದರ್ಶಿ ಆಲೇಮಾಡ ಸುಧೀರ್, ಆಡಳಿತ ಮಂಡಳಿ ನಿರ್ದೇಶಕರಾದ ಮೂಕಳೇರ ಕಾವ್ಯ ಕಾವೇರಮ್ಮ, ಕೊಣಿಯಂಡ ಸಂಜು ಸೋಮಯ್ಯ, ಅಡ್ಡಂಡ ಸುನಿಲ್ ಸೋಮಯ್ಯ, ಮೂಕಳಮಾಡ ಅರಸು ನಂಜಪ್ಪ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್, ಚೆಪ್ಪುಡೀರ ರಾಕೇಶ್ ದೇವಯ್ಯ, ಚೀರಂಡ ಕಂದಾ ಸುಬ್ಬಯ್ಯ ಹಾಗೂ ಖಾಯಂ ಆಹ್ವಾನಿತರಾದ ಚೆಪ್ಪುಡೀರ ಕಿಟ್ಟು ಅಯ್ಯಪ್ಪ ವೇದಿಕೆಯಲ್ಲಿ ಹಾಜರಿದ್ದರು.