ಮಡಿಕೇರಿ, ಸೆ. ೨೯ : ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ನಡೆಸುತ್ತಿರುವ ಎರಡನೇ ಹಂತದ ೨ನೇ ದಿನದ ಪಾದಯಾತ್ರೆ ಪಾಂಡಾಣೆ ನಾಡ್ ಮಂದ್, ಕಾಣತ್ತ್ ಮಂದ್ (ಮೂರ್ನಾಡ್-ಐಕೊಳ) ನಲ್ಲಿ ನಡೆಯಿತು.

ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕೊಡವ ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಿಎನ್ ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು, ಕೊಡವರ ಪರವಾದ ಹಕ್ಕೊತ್ತಾಯಗಳ ಕುರಿತು ಪ್ರತಿಪಾದಿಸಿದರು.

ಜಿಲ್ಲೆಯ ಎಲ್ಲಾ ಕಡೆ ಪಾದಯಾತ್ರೆಗೆ ಉತ್ತಮ ಸ್ಪಂದನ ದೊರೆಯುತ್ತಿದೆ. ಎಲ್ಲರೂ ಒಗ್ಗಟ್ಟಿನಿಂದ ಶಾಂತಿಯುತ ಹೋರಾಟದಲ್ಲಿ ತೊಡಗಿಸಿಕೊಂಡರೆ ನ್ಯಾಯಯುತ ಬೇಡಿಕೆಗಳು ಈಡೇರಲಿವೆ. ಎರಡು ಹಂತಗಳ ಪಾದಯಾತ್ರೆ ಪೂರ್ಣಗೊಳ್ಳುತ್ತಿದ್ದು, ಉಳಿದಿರುವ ಮೂರು ಹಂತಗಳ ಪಾದಯಾತ್ರೆಯಲ್ಲಿ ಸರ್ವ ಕೊಡವರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಪುದಿಯೊಕ್ಕಡ ಕಾಶಿ, ಬಡುವಂಡ ವಿಜಯ, ಪುದಿಯೊಕ್ಕಡ ಪೃಥ್ವಿ, ಅವರೆಮಾದಂಡ ದೇವಮ್ಮಾಜಿ, ಪುದಿಯೊಕ್ಕಡ ರಮ್ಯ, ಮಾದೆಯಂಡ ರಶ್ಮಿ ಪೆಮ್ಮಯ್ಯ, ಪಳಂಗAಡ ರೇಖಾ, ಚೋಳಪಂಡ ಜ್ಯೋತಿ ನಾಣಯ್ಯ, ಎಂ.ಎ.ಬೊಳ್ಳಿಯಪ್ಪ, ದೇವಯ್ಯ ಎನ್.ಪಿ.ಸುಬ್ಬಯ್ಯ, ಚಂಬAಡ ಜನತ್, ಮುಕ್ಕಾಟಿರ ಪ್ರವೀಣ್, ಪುದಿಯೊಕ್ಕಡ ಹರೀಶ್, ಪುದಿಯೊಕ್ಕಡ ಮಧು, ಪುದಿಯೊಕ್ಕಡ ಉದಯ, ಪಳಂಗAಡ ಪ್ರಕಾಶ್, ಮುಂಡAಡ ಪವಿ, ಅಮ್ಮಾಟಂಡ ಮನು, ಅಮ್ಮಾಟಂಡ ಗೋಪಾಲ್, ಪುದಿಯೊಕ್ಕಡ ಬೋಪಣ್ಣ, ಅವರೆಮಾದಂಡ ಕುಶಾಲಪ್ಪ, ಕೋಟೆರ ಮುತ್ತಣ್ಣ, ಚೊಟ್ಟೇರ ಮಾದಪ್ಪ, ಮುಂಡAಡ ಭವನ, ನೆರವಂಡ ಗಿರೀಶ್, ಅವರೆಮಾದಂಡ ಚೆಂಗಪ್ಪ, ಬಾರಿಯಂಡ ತಮ್ಮಯ್ಯ, ಬಾರಿಯಂಡ ಸುಬ್ರಮಣಿ, ಕೋಟೆರ ಹರೀಶ್, ದೇವಂಡಿರ ಕೆ.ಧನು, ಮುಕ್ಕಾಟಿರ ಬೆಳ್ಯಪ್ಪ, ಬಾರಿಯಂಡ ಗಗನ್, ಬಾರಿಯಂಡ ಕಿಶನ್, ಮಂಡೀರ ಮನೋಜ್, ಕಂಬೀರAಡ ಗೌತಮ್, ಬಾರಿಯಂಡ ಸೂರಿ, ನೆರವಂಡ ಅನೂಪ್, ಪಳಂಗAಡ ಮೊಣ್ಣಪ್ಪ, ಪಳಂಗAಡ ಈಶ್ವರ, ಚೇನಂಡ ಅಯ್ಯಣ್ಣ, ಕ್ಯಾತಂಡ ರಂಜು, ಪುದಿಯೊಕ್ಕಡ ಮಾದಪ್ಪ, ಮಾದೆಯಂಡ ದಾದ, ಪಳಂಗAಡ ಗಣೇಶ್ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಕೊಡವ ಲ್ಯಾಂಡ್ ಪರ ಘೋಷಣೆಗಳನ್ನು ಕೂಗಿದರು.