*ಗೋಣಿಕೊಪ್ಪ, ಸೆ. ೨೮: ಕಾವೇರಿ ದಸರಾ ಸಮಿತಿ ವತಿಯಿಂದ ನಡೆಸುವ ೪೫ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವ- ೨೦೨೩ ಸಮಿತಿ ರಚಿಸಿದ್ದು, ಆಯಾಯ ಸಮಿತಿಯ ವತಿಯಿಂದ ಕಾರ್ಯಕ್ರಮದ ರೂಪುರೇಷೆ ತಯಾರಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗೌರವ ಅಧ್ಯಕ್ಷರಾಗಿ ಶಾಸಕ ಎ.ಎಸ್. ಪೊನ್ನಣ್ಣ, ಕಾರ್ಯಾಧ್ಯಕ್ಷರಾಗಿ ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ಸಂಯೋಜಕರಾಗಿ ಚಂದನ್ಕಾಮತ್, ಉಪಾಧ್ಯಕ್ಷರಾಗಿ ಎಂ. ಮಂಜುಳ, ನಾಯಂದರ ಶಿವಾಜಿ, ಪಿ.ಎಸ್. ಶರತ್ಕಾಂತ್, ಪ್ರಧಾನ ಕಾರ್ಯದರ್ಶಿಯಾಗಿ ಎನ್. ಎಸ್. ಕಂದಾ ದೇವಯ್ಯ, ಖಜಾಂಚಿಯಾಗಿ ಚೆಪ್ಪುಡಿರ ಧ್ಯಾನ್ ಸುಬ್ಬಯ್ಯ, ಕಾರ್ಯದರ್ಶಿಯಾಗಿ ಎಚ್. ಡಿ. ರಾಮದಾಸ್, ವರಲಕ್ಷಿö್ಮ, ನಿರ್ದೇಶಕರಾಗಿ ಕಡೇಮಾಡ ಕುಸುಮ ಜೋಯಪ್ಪ, ನೂರೇರ ಧನ್ಯ ಅವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ದಶಮಂಟಪ ಸಮಿತಿ ಅಧ್ಯಕ್ಷರಾಗಿ ಜಮ್ಮಡ ಅರಸು ಅಪ್ಪಣ್ಣ ಆಯ್ಕೆಯಾಗಿದ್ದು, ವಿವಿಧ ಉಪ ಸಮಿತಿಗೆ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ. ಪ್ರಚಾರ ಸಮಿತಿಗೆ ಸಣ್ಣುವಂಡ ಕಿಶೋರ್ ನಾಚಪ್ಪ, ಮಹಿಳಾ ದಸರಾಕ್ಕೆ ಮನ್ನಕಮನೆ ಸೌಮ್ಯ ಬಾಲು, ಮಕ್ಕಳ ದಸರಾಕ್ಕೆ ತಿರುನೆಲ್ಲಿಮಾಡ ಜೀವನ್, ಯುವ ದಸರಾಕ್ಕೆ ನಾಮೇರ ಅಂಕಿತ್ ಪೊನ್ನಪ್ಪ, ಪೂಜಾ ಸಮಿತಿ ಸಂಚಾಲಕರಾಗಿ ಪಿ. ಜಿ. ರಾಜಶೇಖರ್, ಸ್ವಾಗತ ಸಮಿತಿಗೆ ಎಂ. ಮಂಜುಳ, ವೇದಿಕೆ ಸಮಿತಿಗೆ ಸನತ್ ಗುರುರಾಜ್, ಸಾಂಸ್ಕೃತಿಕ ಸಮಿತಿಗೆ ದಿಲನ್ ಚಂಗಪ್ಪ, ಆಹಾರ ಸಮಿತಿಗೆ ಡಾಡುಜೋಸೆಫ್, ಸ್ವಚ್ಛತಾ ಸಮಿತಿಗೆ ನೌಶದ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎನ್. ಎಸ್. ಕಂದಾ ದೇವಯ್ಯ, ಖಜಾಂಚಿ ಚೆಪ್ಪುಡಿರ ಧ್ಯಾನ್ ಸುಬ್ಬಯ್ಯ, ಉಪಾಧ್ಯಕ್ಷ ನಾಯಂದರ ಶಿವಾಜಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ದಿಲನ್ ಚಂಗಪ್ಪ ಇದ್ದರು.