ನಾಪೋಕ್ಲು, ಸೆ. ೨೮ : ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಐದನೇ ಬಾರಿಗೆ ಬಿಜೆಪಿ ಬೆಂಬಲಿತರು ಜಯಭೇರಿ ಗಳಿಸಿದ್ದಾರೆ.
೧೩ ನಿರ್ದೇಶಕರ ಸ್ಥಾನಕ್ಕೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಬೆಂಬಲಿತರೊAದಿಗೆ ಪಕ್ಷೇತರರು ಸೇರಿ ೨೬ ಮಂದಿ ಸ್ಪರ್ಧಿಸಿದ್ದರು. ಇದರಲ್ಲಿ ಎಲ್ಲಾ ೧೩ ಸ್ಥಾನಗಳೂ ಬಿಜೆಪಿ ಬೆಂಬಲಿತರಿಗೆ ಲಭಿಸಿದೆ.
ಕೇಟೋಳಿರ ಹರೀಶ್ ಪೂವಯ್ಯ ಸತತವಾಗಿ ಐದನೇ ಬಾರಿಗೆ ಜಯಗಳಿಸಿದರೆ, ಹೆಚ್.ಎ.ಬೊಳ್ಳು ನಾಲ್ಕು, ಕುಂಡ್ಯೋಳAಡ ಕವಿತಾ ಮುತ್ತಣ್ಣ ಮೂರು, ಕೇಲೇಟಿರ ಮಾಲಾ ಬೋಪಯ್ಯ ಮೂರನೇ ಬಾರಿಗೆ ಜಯಗಳಿಸಿದ್ದಾರೆ. ಚೋಕಿರ ಪ್ರಭು ಪೂವಪ್ಪ, ಚೀಯಕಪೂವಂಡ ಸತೀಶ್ ದೇವಯ್ಯ ಎರಡನೆ ಬಾರಿಗೆ ಆಯ್ಕೆಯಾದರೆ, ಕುಂಡ್ಯೋಳAಡ ವಿಶು ಪೂವಯ್ಯ, ಟಿ.ಎ.ಮಿಟ್ಟು, ಚೋಕಿರ ಸಜಿತ್ ಚಿಣ್ಣಪ್ಪ, ಅಪ್ಪಚ್ಚಿರ ರೀನಾ ನಾಣಯ್ಯ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಅರೆಯಡ ರತ್ನಾ ಪೆಮ್ಮಯ್ಯ, ಸುಶೀಲ ಕೃಷ್ಣಪ್ಪ ಮೊದಲ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.