ಮಡಿಕೇರಿ, ಸೆ. ೨೭: ಚೈನಾದ ಹ್ಯಾಂಗ್‌ಝಾದಲ್ಲಿ ಪ್ರಸ್ತುತ ನಡೆಯುತ್ತಿರುವ ೧೯ನೇ ಏಷ್ಯನ್ ಗೇಮ್ಸ್ನಲ್ಲಿ ಇದೀಗ ಕೊಡಗಿನ ಮತ್ತೊಬ್ಬರು ಪಾಲ್ಗೊಂಡಿದ್ದಾರೆ.

ಗಾಲ್ಫ್ ಕ್ರೀಡೆಗೆ ಸಂಬAಧಿಸಿದAತೆ ಟೆಕ್ನಿಕಲ್ ರೂಲ್ಸ್ ಅಫಿಷಿಯಲ್ ಆಗಿ ಜಿಲ್ಲೆಯವರಾದ ಮುಕ್ಕಾಟಿರ ಕಾವೇರಿ ಮುತ್ತಣ್ಣ ಅವರು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಮುಕ್ಕಾಟಿರ ಮಂಜು ಮುತ್ತಣ್ಣ ಅವರ ಪತ್ನಿ ಹಾಗೂ ಗುಡ್ಡಂಡ ಕಾಂತಿ ಹಾಗೂ ನಂದ ಗಣಪತಿ ಅವರ ಪುತ್ರಿ. ಏಷ್ಯನ್ ಗೇಮ್ಸ್ನಲ್ಲಿ ಕೊಡಗಿನವರಾದ ಒಟ್ಟು ಆರು ಕ್ರೀಡಾಪಟುಗಳು ಸೇರಿದಂತೆ ಭಾರತ ಬಾಕ್ಸಿಂಗ್ ತಂಡದ ಮುಖ್ಯಕೋಚ್, ಮಹಿಳಾ ಹಾಕಿ ತಂಡದ ಟೆಕ್ನಿಕಲ್ ಅಫಿಷಿಯಲ್ ಆಗಿ ಒಬ್ಬರು, ಕೋಚ್ ಆಗಿ ಒಬ್ಬರು ಕೂಡ ಭಾರತದ ಪರ ಪಾಲ್ಗೊಂಡಿದ್ದಾರೆ. ಇದೀಗ ಕಾವೇರಿ ಸೇರಿದಂತೆ ಜಿಲ್ಲೆಯ ಒಟ್ಟು ೧೦ ಮಂದಿ ಕೊಡಗಿನ ಪ್ರತಿನಿಧಿಗಳಾಗಿರುವುದು ಕೊಡಗಿಗೆ ಹಿರಿಮೆಯಾಗಿದೆ.