, ಸೆ.೨೭ : ಕಾಫಿ ಸೇವನೆಯು ಆರೋಗ್ಯಕ್ಕೆ ಉತ್ತಮ ವಾಗಿದ್ದು ಈ ಅಂಶವನ್ನು ಆಯಾ ದೇಶಗಳ ಸರ್ಕಾರಗಳು ಸಾರ್ವಜನಿಕ ವಾಗಿ ತಿಳಿಸುವ ಮೂಲಕ ಕಾಫಿಯ ಆಂತರಿಕ ಬಳಕೆಯನ್ನು ವೃದ್ಧಿ ಗೊಳಿಸಲು ಮುಂದಾಗಬೇಕು ಎಂಬ ಸಲಹೆಯನ್ನು ಬ್ರೆಜಿಲ್ ದೇಶದ ಆರೋಗ್ಯ ಸಚಿವಾಲಯದಲ್ಲಿ ಕಾಫಿ ಮತ್ತು ಹೃದಯ ಕೇಂದ್ರದ ಮುಖ್ಯಸ್ಥ ರಾಗಿರುವ ಡಾ. ಬ್ರುನೋ ಮಿಯಾಟೋ ಮುಂದಿಟ್ಟರು.

ಬೆAಗಳೂರಿನ ಐತಿಹಾಸಿಕ ಅರಮನೆ ಆವರಣದಲ್ಲಿ ಆಯೋಜಿತ ೫ ನೇ ಕಾಫಿ ವಿಶ್ವ ಸಮ್ಮೇಳನದ ಮೂರನೇ ದಿನ ಕಾಫಿ ಮತ್ತು ಆರೋಗ್ಯ ಸಂಬAಧಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಡಾ. ಬ್ರುನೋ ಮಿಯಾಟೋ, ಹೃದ್ರೋಗ ಬಾರದಂತೆ ತಪ್ಪಿಸಲು ದಿನಕ್ಕೆ ೪ ಲೋಟವಾದರೂ ಕಾಫಿ ಸೇವನೆ ಮಾಡಬೇಕು. ಕೆಫೇನ್ ಅಂಶ ಇರುವು ದರಿಂದ ಕಾಫಿ ಸೇವನೆ ಆರೋಗ್ಯದ ಮಲೆ ದುಷ್ಪರಿಣಾಮ ಬೀರುತ್ತದೆ ಎಂಬ ವಾದದಲ್ಲಿ ಸತ್ಯವಿಲ್ಲ. ಹೀಗಾಗಿ ದಿನಕ್ಕೆ ಕನಿಷ್ಟ ೪ ಕಪ್ ಕಾಫಿಯನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ, ಪ್ರತಿನಿತ್ಯ ೧೫೦ ಮಿಲಿ ಲೀಟರ್ ಕಾಫಿ ಸೇವನೆ ಮಾಡುವುದರಿಂದ ಮನುಷ್ಯನ ಆರೋಗ್ಯದಲ್ಲಿ ಶೇ. ೭ ರಷ್ಟು ಸುಧಾರಣೆ ಕಾಣಬಹುದಾಗಿದೆ ಎಂದು ಅವರು ಹೇಳಿದರು. ತನ್ನ ದೇಶದಲ್ಲಿನ ೫೨ ಸಾವಿರ ಮಹಿಳೆಯರಿಗೆ ಪ್ರತೀ ನಿತ್ಯ ೪ ಕಪ್ ಕಾಫಿ ಕುಡಿಸುವ ಮೂಲಕ ಕೆಲವಾರು ವರ್ಷ ಕೈಗೊಂಡ ಪ್ರಯೋಗದ ಆಧಾರದ ಮೇಲೆ ತಾನು ಇಷ್ಟೊಂದು ಪರಿಣಾಮಕಾರಿಯಾಗಿ ಕಾಫಿ ಸೇವನೆ ಬಗ್ಗೆ ವಾದ ಮಂಡಿಸುತ್ತಿರುವು ದಾಗಿಯೂ ಅವರು ನುಡಿದರು.

(ಮೊದಲ ಪುಟದಿಂದ) ಹೀಗಿದ್ದರೂ ಧೂಮಪಾನ ಮತ್ತು ಮದ್ಯಪಾನ ಮಾಡುವವರು ಕಾಫಿ ಸೇವಿಸುತ್ತಿದ್ದರೆ ಕಾಫಿಯಿಂದಾಗಿ ಅವರ ಆರೋಗ್ಯ ಸುಧಾರಿಸುವುದಿಲ್ಲ ಎಂದು ಡಾ. ಎಚ್ಚರಿಕೆಯ ಸಲಹೆ ನೀಡಿದರು. ಮಹಿಳೆಯರಲ್ಲಿ, ಉದ್ಯೋಗಸ್ಥರಲ್ಲಿ ಇತ್ತೀಚಿಗೆ ಹೆಚ್ಚು ಕಂಡು ಬರುತ್ತಿರುವ ಮಾನಸಿಕ ಒತ್ತಡ ಮತ್ತು ರಕ್ತದೊತ್ತಡ ಕಡಿಮೆ ಮಾಡಲೂ ಕಾಫಿ ಸೇವನೆ ಸೂಕ್ತ ಎಂದು ತಿಳಿಸಿದ ಅವರು, ನೀರನ್ನು ಹೊರತುಪಡಿಸಿದಂತೆ ವಿಶ್ವವ್ಯಾಪಿ ಕಾಫಿಯೇ ಜನಪ್ರಿಯವಾದ ಪಾನೀಯ ಎಂದು ಶ್ಲಾಘಿಸಿದರು.

ಸ್ಟಾರ್ ಬಕ್ಸ್ ಕಾಫಿ ಸಂಸ್ಥೆಯ ಮಾರುಕಟ್ಟೆ ಮುಖ್ಯಸ್ಥೆ ಕೆಲ್ಲಿ ಗೋಡ್ ಬಾನ್ ಮಾತನಾಡಿ, ಕಾಫಿಯ ಆಂತರಿಕ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಸ್ಟಾರ್ ಬಕ್ಸ್ ಸಂಸ್ಥೆಯು ಎಲ್ಲಾ ದೇಶಗಳಲ್ಲಿ ತನ್ನದೇ ಪ್ರಯತ್ನ ಮುಂದುವರೆಸಿದೆ. ೨೦೧೨ ರಲ್ಲಿ ಭಾರತದಲ್ಲಿ ಕೆಫೆ ಪ್ರಾರಂಭಿಸಿದ ತನ್ನ ಸಂಸ್ಥೆಯು ಇದೀಗ ದೀಪಾವಳಿ ಬ್ಲೆಂಡ್ ಕಾಫಿ ಎಂಬ ಉತ್ಪನ್ನದ ಮೂಲಕ ವಿಶ್ವವ್ಯಾಪಿ ಭಾರತೀಯ ಕಾಫಿಗೆ ಮಾರುಕಟ್ಟೆ ಒದಗಿಸುತ್ತಿದೆ ಎಂದು ಮಾಹಿತಿ ನೀಡಿದರು. ಕೋವಿಡ್ ನಂತರದ ದಿನಗಳಲ್ಲಿ ಜನರ ಮನೋಭಾವನೆಯಲ್ಲಿ ಸಾಕಷ್ಟು ಬದಲಾವಣೆ ಕಂಡುಬAದಿದ್ದು ಮನೆ ಬಾಗಿಲಿಗೆ ಕಾಫಿ ನೀಡುವ ವ್ಯವಸ್ಥೆಯೊಂದಿಗೆ ಅನೇಕ ದೇಶಗಳು ಕಾಫಿಯ ಮಾರುಕಟ್ಟೆ ವೃದ್ಧಿಸಿಕೊಂಡಿದೆ ಎಂದು ಅವರು ಹೇಳಿದರು.

ಕೀನ್ಯಾ ದೇಶದ ಆಹಾರ ಘಟಕದ ಕಾಫಿ ವಿಭಾಗದ ಮುಖ್ಯಸ್ಥ ಡಾ. ಬರ್ನಾಡ್ ಗಿಚೋವಿ ಮಾತನಾಡಿ, ಕಾಫಿ ಸೇವನೆಯಿಂದ ಉಂಟಾಗುವ ಅನುಕೂಲತೆಗಳ ಬಗ್ಗೆ ಮಧ್ಯಮ ವರ್ಗದ ಜನತೆಯಲ್ಲಿ ಅರಿವು ಮೂಡಿಸುವ ಆಂದೋಲನ ಕೈಗೊಳ್ಳಲು ಜಗತ್ತಿನ ಕಾಫಿ ದೇಶಗಳು ಒಂದಾಗಬೇಕು ಎಂದರು.

ಕಾಫಿ ಮಂಡಳಿ ಮಾಜಿ ಅಧ್ಯಕ್ಷ ಜಿ.ವಿ. ಕೃಷ್ಣನ್ ರಾವ್ ಮಾತನಾಡಿ, ಯಾವ ದೇಶಗಳಲ್ಲಿ ಕಾಫಿಯ ಉತ್ಪಾದನೆ ಹೆಚ್ಚುತ್ತಲೇ ಇದೆಯೋ ಅಂಥ ದೇಶಗಳಲ್ಲಿ ಕಾಫಿಯ ಆಂತರಿಕೆ ಬಳಕೆ ಕೂಡ ಹೆಚ್ಚಾಗುತ್ತಿದೆ. ಗುಣಮಟ್ಟದ ಕಾಫಿ ಉತ್ಪಾದನೆಯೊಂದಿಗೆ ತಮ್ಮ ದೇಶದ ಕಾಫಿಯನ್ನು ತಮ್ಮ ದೇಶದಲ್ಲಿಯೇ ಬಳಕೆ ಮಾಡುವ ಬಗ್ಗೆಯೂ ಹೊಸ ಚಿಂತನೆಗಳು ಸೃಷ್ಟಿಯಾಗಲೇಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ತಳಿಗಳಿದ್ದರೂ ಅರೇಬಿಕಾ ಮತ್ತು ರೋಬಸ್ಟಾ ತಳಿಗಳೇ ಕಾಫಿ ಪ್ರಪಂಚದಲ್ಲಿ ಶೇ.೯೯ ರಷ್ಟು ಪಾಲು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದೆ. ಉಳಿದ ೧೨೮ ತಳಿಗಳು ಶೇ.೧ ರ ಪಾಲನ್ನಷ್ಟೇ ಪಡೆಯಲು ಶಕ್ತವಾಗಿವೆ ಎಂದು ಅವರು ವಿಶ್ಲೇಷಿಸಿದರು.