ಕಣಿವೆ, ಸೆ. ೨೭ : ಹೇಳಿ ಕೇಳಿ ಕಾಡಾನೆಗಳ ಆವಾಸ ತಾಣ... ಸಂಜೆಯಾಯಿತೆAದರೆ ಕಾಡಾನೆಗಳ ಹಾವಳಿ... ಪ್ಲಾಸ್ಟಿಕ್ ಹೊದಿಕೆಯೇ ಸೂರು, ಶೌಚಕ್ಕೆ ಕಾಡೇ ಗೂಡು.... ವಿದ್ಯುತ್ ಬೆಳಕನ್ನೇ ಕಾಣದ ಅಮಾಯಕ ಮಂದಿ....

ಇದು ಸ್ವಾತಂತ್ರö್ಯ ಪೂರ್ವದಲ್ಲಿನ ಜನಜೀವನದ ಚಿತ್ರಣವಲ್ಲ. ಸ್ವಾತಂತ್ರö್ಯ ಬಂದು ೮೦ ವರ್ಷ ಸಮೀಪಿಸುತ್ತಾ ಬಂದರೂ ಇನ್ನೂ ಕೂಡ ಸ್ವಾತಂತ್ರö್ಯವಾಗಲೀ, ಕನಿಷ್ಟ ಸೌಲಭ್ಯಗಳಾಗಲೀ ಇಲ್ಲದ ಜೇನು ಕುರುಬರ ಹಾಡಿ. ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹುಣಸೆಪಾರೆ ಎಂಬಲ್ಲಿದೆ ಎಂದರೆ ಆಶ್ಚರ್ಯವಾಗುತ್ತೆ ಅಲ್ಲಾ....! ಇದು ಅಚ್ಚರಿಯಾದರೂ ಸತ್ಯ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೆಪಾರೆ ಗಿರಿಜನ ಹಾಡಿಯಲ್ಲಿ ೧೨ ಜೇನುಕುರುಬರ ಕುಟುಂಬಗಳಿವೆ. ಈ ಮಂದಿಗೆ ಕಳೆದ ೩೦ ವರ್ಷಗಳ ಹಿಂದೆ ಅರಣ್ಯ ಸಚಿವರಾಗಿದ್ದ ಬಿ.ಎ.ಜೀವಿಜಯ ಅವರ ಆಸಕ್ತಿಯಿಂದಾಗಿ ಕೊಡಗು ಜಿಲ್ಲಾಡಳಿತ ನಿರ್ಮಿಸಿಕೊಟ್ಟ ಪುಟ್ಟದಾದ ೧೦ x ೧೫ ಅಳತೆಯ ಮನೆಗಳು ಇಂದು ಶಿಥಿಲಾವಸ್ಥೆಯಲ್ಲಿವೆ.

ಹಾಗಾಗಿ ಇಲ್ಲಿನ ಯಾವೊಂದು ಮಂದಿಯೂ ಕೂಡ ವಾಸ ಮಾಡಲು ಆಗುತ್ತಿಲ್ಲ. ಏಕೆಂದರೆ ಮೊದಲೇ ಹಾಳಾಗಿರುವ ಮನೆಗಳ ಕಿಟಕಿ ಬಾಗಿಲುಗಳೇ ಇಲ್ಲ. ಸೂರು ಮೊದಲೇ ಇಲ್ಲ. ಹಾಗಾಗಿ ಸೂರು, ಕಿಟಕಿ ಹಾಗೂ ಬಾಗಿಲುಗಳೆಲ್ಲವನ್ನು ಪ್ಲಾಸ್ಟಿಕ್‌ಗಳಿಂದ ಹೊದಿಕೆ ಮಾಡಲಾಗಿದೆ.

೩೦ ವರ್ಷಗಳಿಂದ ಕರೆಂಟ್ ಇಲ್ಲ

ಯಡವನಾಡು ಹಾಗೂ ಹುದುಗೂರು ಮೀಸಲು ಅರಣ್ಯದ ಸೀಗೆಹೊಸೂರಿನ ಹುಣಸೆಪಾರೆ ಹಾಡಿಯಲ್ಲಿ ನಿರ್ಮಿಸಿದ್ದ ಹರಕು ಮುರುಕು ಸೂರುಗಳಿಗೆ ಕಳೆದ ೩೦ ವರ್ಷಗಳಿಂದ ವಿದ್ಯುತ್ ಸಂಪರ್ಕವೇ ಇಲ್ಲ. ಇಲ್ಲಿನ ಮಂದಿ ನಾಗರಿಕ ಪ್ರಪಂಚ ಹಾಗೂ ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಶೌಚಾಲಯಗಳು ಮೊದಲೇ ಇಲ್ಲ

ಇಲ್ಲಿನ ಮಂದಿಗೆ ಮಲಗಲು ಸರಿಯಾದ ಸೂರೇ ಇಲ್ಲ. ಇನ್ನೂ ಶೌಚಾಲ ಯವಂತೂ ದೂರದ ಮಾತು. ಹಾಗಾಗಿ ಇಲ್ಲಿನ ಮಹಿಳೆಯರು - ಮಕ್ಕಳಾದಿಯಾಗಿ ಎಲ್ಲರೂ ಶೌಚಕ್ಕೆ ಕಾಡನ್ನೇ ಅವಲಂಬಿಸಿದ್ದಾರೆ.

(ಮೊದಲ ಪುಟದಿಂದ) ಮೊದಲೇ ಕಾಡಾನೆ ಹಾವಳಿ ಇರುವ ಈ ದಟ್ಟಡವಿಯಲ್ಲಿ ಕಾಡಾನೆಗಳ ಭೀತಿಯಿಂದ ಜೀವವನ್ನು ಪಣಕ್ಕಿಟ್ಟು ತಮ್ಮ ನಿಸರ್ಗ ಕರೆಗಳಿಗೆ ಓಗೊಡುತ್ತಿದ್ದಾರೆ.

ಅಂಗಡಿಗಳಲ್ಲಿ ಮೊಬೈಲ್ ಚಾರ್ಜ್

ಜೀವನವಿಡೀ ಕಂಡ ಕಂಡ ಕಡೆ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿರುವ ಇಲ್ಲಿನ ಶ್ರಮಿಕ ಮಂದಿ ತಾವು ಇಟ್ಟುಕೊಂಡಿರುವ ಮೊಬೈಲ್‌ಗಳಿಗೆ ದೂರದ ಅಂಗಡಿ ಮುಂಗಟ್ಟುಗಳಲ್ಲಿ ಹಾಗೂ ತೋಟ ಮಾಲೀಕರ ಮನೆಗಳಲ್ಲಿ ಚಾರ್ಜ್ ಮಾಡಿಕೊಳ್ಳುತ್ತಿದ್ದಾರೆ.

ಕನಸಾದ ಆರೋಗ್ಯ ಸೇವೆ

ಈ ಹುಣಸೆಪಾರೆಯ ಹಾಡಿಯಲ್ಲಿ ರಾಜು ಹಾಗೂ ಲಿಂಗಮ್ಮ, ತಿಮ್ಮ ಹಾಗೂ ಪೂವಮ್ಮ ದಂಪತಿಗಳಿಗೆ ಸೂರುಗಳಿಲ್ಲದೇ ಕಕ್ಕೆಹೊಳೆಯಂಚಿನಲ್ಲಿ ಕಪ್ಪು ಪ್ಲಾಸ್ಟಿಕ್ ತಂದು ಸೂರು ಕಟ್ಟಿಕೊಂಡು ಜೀವದ ಹಂಗು ತೊರೆದು ವಾಸವಿದ್ದಾರೆ. ಈ ಪೈಕಿ ರಾಜು ಎಂಬವರ ಪತ್ನಿ ಲಿಂಗಮ್ಮ ಎಂಬವರಿಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾನಸಿಕವಾದ ಆರೋಗ್ಯ ಸಮಸ್ಯೆ ಇದ್ದರೂ ಕೂಡ ಇವರಿಗಾಗಲೀ, ನಮ್ಮ ಆರೋಗ್ಯ ಸೌಕರ್ಯ ಒದಗಿಸುವಲ್ಲಿಯೂ ಆರೋಗ್ಯ ಹಾಗೂ ಗಿರಿಜನ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳಾದ ರಘು, ಯಶೋಧ, ಉಮೇಶ, ರಾಜು, ಗಣೇಶ, ಸಣ್ಣಕ್ಕ ಮೊದಲಾದವರು ದೂರಿದ್ದಾರೆ.

ಮನೆಗಳ ಕಾಮಗಾರಿ ಅಪೂರ್ಣ

ಇದೇ ಹಾಡಿಯಲ್ಲಿ ಕಳೆದ ಒಂದು ವರ್ಷದ ಹಿಂದೆ ನಿರ್ಮಿಸಲು ಯೋಜಿಸಿದ್ದ ರಘು ಹಾಗೂ ಸಣ್ಣಕ್ಕ, ರವಿ ಹಾಗೂ ಮಹೇಶ್ ಎಂಬವರ ಮನೆಗಳ ಕಾಮಗಾರಿಗಳು ಅಪೂರ್ಣವಾಗಿದ್ದರೂ ಕೂಡ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ ಎಂದು ದೂರುತ್ತಾರೆ.

ರೇಷನ್ ಕಾರ್ಡು ಹಾಗೂ ಆಧಾರ್ ಕಾರ್ಡುಗಳಿಲ್ಲ

ಈ ಹಾಡಿಯಲ್ಲಿ ಇರುವ ಮಂದಿಗೆ ಪಡಿತರ ಪಡೆಯಲು ಬೇಕಾದ ಪಡಿತರ ಚೀಟಿಗಳಾಗಲೀ, ಆಧಾರ್ ಕಾರ್ಡ್ಗಳಾಗಲೀ ಇಲ್ಲ. ಇಲ್ಲಿಂದ ಚುನಾಯಿತರಾಗಿರುವ ಸದಸ್ಯರ ಪೈಕಿ ಅನಂತು ಎಂಬವರು ನಮ್ಮ ಸಮಸ್ಯೆಗಳಿಗೆ ಒಂದಷ್ಟು ಸ್ಪಂದಿಸುತ್ತಿದ್ದಾರೆ. ಆದರೆ ಪಂಚಾಯಿತಿಯಿAದ ಅನುದಾನದ ಕೊರತೆ ಇರುವುದರಿಂದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಗಿರಿಜನ ಇಲಾಖೆಯವರು ಮನಸ್ಸು ಮಾಡುತ್ತಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.

ಈ ಮಂದಿಗೆ ಅಗತ್ಯವಾಗಿ ಬೇಕಾದ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡುಗಳಿಲ್ಲದ ಕಾರಣ ಸರ್ಕಾರದ ಯಾವುದೇ ಸೌಲಭ್ಯಗಳು ಇವರಿಗೆ ದೊರಕುತ್ತಿಲ್ಲ ಎಂದು ಕೂಡಿಗೆಯ ಸಮಾಜ ಸೇವಕ ಕೆ.ಸಿ.ಪ್ರದೀಪ್ ಸ್ಥಳಕ್ಕೆ ತೆರಳಿದ್ದ ‘ಶಕ್ತಿ’ಯೊಂದಿಗೆ ದೂರಿಕೊಂಡರು.