ವೀರಾಜಪೇಟೆ, ಸೆ. ೨೬: ಕ್ಷÄಲ್ಲಕ ವಿಚಾರಕ್ಕೆ ಪತ್ನಿಯ ತಾಯಿಯನ್ನು ಕತ್ತಿಯಿಂದ ಹಲ್ಲೆ ಮಾಡಿದ ಅಳಿಯನನ್ನು ಪೊಲೀಸರು ಬಂಧಿಸಿದ್ದಾರೆ.
ಅಮ್ಮತ್ತಿ ನಿವಾಸಿ ಹೆಚ್.ಜಿ. ಗಣೇಶ್ ಎಂಬವರ ಪತ್ನಿ ರಾಣಿ ಹಲ್ಲೆಗೆ ಒಳಗಾಗಿ ಗಂಭೀರ ಸ್ಪರೂಪದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಆರೋಪಿ ತಿರುಮಲೇಶ್ನನ್ನು ಬಂಧಿಸಲಾಗಿದೆ.
ಅಮ್ಮತ್ತಿ ನಗರದಲ್ಲಿ ವಾಸವಾಗಿರುವ ಹೆಚ್.ಜಿ. ಗಣೇಶ್ ಮತ್ತು ರಾಣಿ ದಂಪತಿಯ ಪುತ್ರಿ ಐಶ್ವರ್ಯಳನ್ನು ಬೆಂಗಳೂರು ನಿವಾಸಿ ಚಾಲಕ ವೃತ್ತಿಯಲ್ಲಿ ರುವ ತಿರುಮಲೇಶ್ ಮದುವೆಯಾಗಿದ್ದು, ಅಳಿಯ ಮತ್ತು ಅತ್ತೆ ನಡುವೆ ಕೆಲವು ಭಿನ್ನಾಭಿಪ್ರಾಯವಿತ್ತು. ೨೦೨೦ರಲ್ಲಿಯೂ ಅತ್ತೆಯನ್ನು ಚೂರಿಯಿಂದ ಇರಿಯಲು ಮುಂದಾಗಿ ತಿರುಮಲೇಶ್ ಬಂಧನವಾಗಿದ್ದ. ನಂತರ ಮನಸ್ತಾಪ ದೂರವಾಗಿ ಪತ್ನಿಯನ್ನು ನೋಡಲು ಬೆಂಗಳೂರಿನಿAದ ಆಗಾಗ್ಗೆ ಬರುತ್ತಿದ್ದ.
ತಾ. ೨೫ ರಂದು ಮುಂಜಾನೆ ೪ ಗಂಟೆ ವೇಳೆಗೆ ಮನೆಗೆ ಬಂದ ಸಂದರ್ಭ ಅತ್ತೆ-ಅಳಿಯನ ನಡುವೆ ವಾಗ್ವಾದ ಉಂಟಾಗಿ ಮನೆಯಲ್ಲಿದ್ದ ಕತ್ತಿಯಿಂದ ಅತ್ತೆ ರಾಣಿ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ತಲೆ ಭಾಗಕ್ಕೆ ತೀವ್ರ ಗಾಯಗೊಂಡು ರಕ್ತಸ್ರಾವವಾಗಿದೆ. ಗಾಯಾಳುವನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಿರುಮಲೇಶ್ ಪತ್ನಿ ಐಶ್ವರ್ಯ ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಯತ್ನ ೩೦೭ ಐ.ಪಿ.ಸಿ ಅಡಿ ಪ್ರಕರಣ ದಾಖಲಾ ಗಿದ್ದು. ಆರೋಪಿತ ತಿರುಮಲೇಶ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ. -ಕಿಶೋರ್ ಕುಮಾರ್ ಶೆಟ್ಟಿ