ಅನಿಲ್ ಎಚ್.ಟಿ.
ಬೆಂಗಳೂರು, ಸೆ. ೨೬ : ಕಾಫಿ ಕೃಷಿಯ ಪ್ರಗತಿ ಜೊತೆಜೊತೆಗೇ ತಾಂತ್ರಿಕವಾಗಿಯೂ ಅಭಿವೃದ್ಧಿ ಯಾಗುವ ನಿಟ್ಟಿನಲ್ಲಿ ಗಮನಾರ್ಹವಾಗಿ ಯೋಜನೆ ರೂಪಿಸಬೇಕಾಗಿದೆ. ಕಾಫಿ ಲೋಕದಲ್ಲಿ ನವನವೀನ ಸಂಶೋಧನೆ ಗಳಿಗೂ ಕಾಲ ಕೂಡಿ ಬರಬೇಕಾಗಿದೆ ಎಂದು ವಿಶ್ವದ ಹೆಸರಾಂತ ಕಾಫಿ ಕೆಫೆ ಸಂಸ್ಥೆಯಾದ ಸ್ಟಾರ್ ಬಕ್ಸ್ನ ಉಪಾ ಧ್ಯಕ್ಷೆ ಮಿಷೆಲ್ ಬರ್ನ್ಸ್ ಹೇಳಿದ್ದಾರೆ.
ವಿಶ್ವಕಾಫಿ ಸಮ್ಮೇಳನದ ಎರಡನೇ ದಿನದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಮಿಷೆಲ್ ಬರ್ನ್ಸ್ ಪರಿಸರ ಸ್ನೇಹಿಯಾದ ಕಲ್ಪನೆಯೊಂ ದಿಗೆ ಭವಿಷ್ಯದಲ್ಲಿ ಕಾಫಿ ಕೆಫೆೆಗಳು ವ್ಯಾಪಿಸಬೇಕಾಗಿದೆ. ನಾವು ಪಡೆದ ಲಾಭದಲ್ಲಿ ಬಹುಪಾಲನ್ನು ನಮ್ಮ ಲಾಭಕ್ಕೆ ಕಾರಣರಾದವರಿಗೆ ನೀಡ ಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಇದನ್ನು ಋಣಾತ್ಮಕವಾಗಿ ತೆಗೆದುಕೊಂ ಡಲ್ಲಿ ಮಾತ್ರ ಉದ್ಯಮದಲ್ಲಿ ಬಹುಕಾಲವರ್ಷಗಳ ಹಿಂದೆ ಪುಟ್ಟ ಸಂಸ್ಥೆಯಾಗಿ ಪ್ರಾರಂಭವಾದ ಸ್ಟಾರ್ ಬಕ್ಸ್ ಇದೀಗ ವಿಶ್ವವ್ಯಾಪಿ ೪ ಸಾವಿರಕ್ಕೂ ಅಧಿಕ ಕೆಫೆಗಳನ್ನು ಹೊಂದಿರುವ ಬೃಹತ್ ಕೆಫೆ ಜಾಲ ಹೊಂದುವAತಾಗಿದೆ ಎಂದರು.
ಆಸ್ಟೆçÃಲಿಯಾದ ಮಾಜಿ ಸಚಿವ, ಗ್ರೀನ್ ಲೀಡರ್ ಶಿಪ್ನ ಮುಖ್ಯಸ್ಥ ಡಾ. ಹೆರಾಲ್ಡ್ ಫ್ರೆಡಾಲ್ ಮಾತನಾಡಿ, ವಿಶ್ವಮಟ್ಟದಲ್ಲಿ ಕಾಫಿ ಉದ್ಯಮದ ನವಪಾಲುದಾರಿಕೆಗಳಿಗೆ ನವ ಚಿಂತನೆಗಳು ಹರಿದು ಬರಬೇಕು. ಜಗತ್ತಿನಾದ್ಯಂತಲಿನ ಕಾಫಿ ಉದ್ಯಮಿಗಳು ಒಂದೇ ವೇದಿಕೆಯಲ್ಲಿ ನೆಲೆಯೂರಲು ಸಾಧ್ಯವಿದೆ. ೨೫ ಚರ್ಚಿಸಿ ನವ ಚಿಂತನೆಗಳ ಮೂಲಕ ಕಾಫಿ ಭವಿಷ್ಯತ್ತಿಗೆ ನಾಂದಿ ಹಾಡುವಂತೆ ಸಲಹೆ ನೀಡಿದರು. ಕಾಫಿಗೆ ವಿಶ್ವಮಟ್ಟದಲ್ಲಿ ಪ್ರಾಕೃತಿಕ ವಿಕೋಪ, ದರ ಸಮಸ್ಯೆ ಸೇರಿದಂತೆ ವಿವಿಧ ಸಂಕಷ್ಟಗಳು ಕಾಡಿದಾಗ ಯಾರೋ ಒಬ್ಬರಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಲು ಅಸಾಧ್ಯ. ಈ ಸಂದರ್ಭ ಎಲ್ಲಾ ಉದ್ಯಮಿಗಳು, ಕಾಫಿ ಸಂಘಟನೆಗಳು ಒಮ್ಮತದಿಂದ ಸಮಸ್ಯೆ ಪರಿಹಾರ ಸೂತ್ರಕ್ಕೆ ಒಪ್ಪಿಗೆ ನೀಡಬೇಕೆಂದು ಸೂಚಿಸಿದರು.
ಜಗತ್ತಿನ ಕಾಫಿ ದಿಗ್ಗಜ ಸಂಸ್ಥೆ ಲವಾಝದ ಸಿಇಓ ಮಾರ್ಕೋ ಸಿಯೋರ್ಟಸ್ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಉಂಟಾಗುವ ಬದಲಾ ವಣೆಗಳನ್ನು ತಳಮಟ್ಟದಲ್ಲಿನ ಕೃಷಿಕರಿಗೆ ತಿಳಿಸುವ ಮೂಲಕ ಅವರಿಗೂ ಉದ್ಯಮ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಬದಲಾ ವಣೆಗಳು ತಿಳಿಯುವಂತಾಗಬೇಕೆAದು ಅಭಿಪ್ರಾಯಪಟ್ಟರು.
ಕೊಡಗು ಕಾಫಿ ನಿರ್ಲಕ್ಷö್ಯ
ಬೆಂಗಳೂರು ಕೃಷಿ ವಿ.ವಿ.ಯ ನಿವೃತ್ತ ಉಪಕುಲಪತಿ ಡಾ.ಪಿ.ಜಿ. ಚಂಗಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಸಮಾವೇಶದಲ್ಲಿ ಸಭಿಕರ ಪರವಾಗಿ ಪ್ರಶ್ನೆ ಕೇಳಿದ ಮಡಿಕೇರಿಯ ಕಾಫಿ ಬೆಳೆಗಾರ ಬಿ.ವಿ.ಮೋಹನ್ ದಾಸ್, ಕೊಡಗು ಜಿಲ್ಲೆಯ ಕಾಫಿ ಕೃಷಿಕರನ್ನು ಕೇಂದ್ರ ವಾಣಿಜ್ಯ ಸಚಿವಾಲಯ ನಿರ್ಲಕ್ಷಿಸುತ್ತಲೇ ಬಂದಿದೆ. ಪ್ರಧಾನಿ ಮೋದಿ ಅವರ ಕನಸಿನ ಯೋಜನೆಯಾದ ಒಂದು ಜಿಲ್ಲೆ - ಒಂದು ಉತ್ಪನ್ನದಲ್ಲಿ ಕಾಫಿಯನ್ನು ಕೊಡಗಿನ ಉತ್ಪನ್ನವಾಗಿ ಪರಿಗಣಿಸಲಾಗಿದ್ದರೂ ಇದು ನಿರೀಕ್ಷಿತ ರೀತಿಯಲ್ಲಿ ಜಾರಿಯಾಗಲೇ ಇಲ್ಲ. ಕೊಡಗಿನ ಕಾಫಿಯನ್ನು ಪ್ರೋತ್ಸಾಹಿಸುವ ಕಾರ್ಯವೇ ನಡೆದಿಲ್ಲ ಎಂದು ವಿಷಾದಿಸಿದರು. ಕರಿಮೆಣಸು, ಅಡಿಕೆಗೆ ವಿಮೆ ಲಭಿಸಿದರೂ ಕಾಫಿಗೆ ಮಾತ್ರ ವಿಮೆ ನೆರವು ದೊರಕಿಲ್ಲ. ಹೀಗಾಗಿ ಕಾಫಿಗೂ ಸೂಕ್ತ ವಿಮೆ ಸೌಲಭ್ಯ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಬಾರ್ಡ್ ರಾಜ್ಯ ಪ್ರಧಾನ ವ್ಯವಸ್ಥಾಪಕ ಡಾ.ಮಹೇಶ್ ಕುಮಾರ್, ಖಂಡಿತಾ ಕೊಡಗು ನಿರ್ಲಕ್ಷಕ್ಕೊಳಗಾಗಿಲ್ಲ. ದೇಶದಲ್ಲಿ ಒಂದೇ ನಿಯಮ ಜಾರಿಗೆ ಬಂದಿದೆ. ಆದರೂ ಬೇಡಿಕೆಯನ್ನು ಪರಿಶೀಲಿಸಲಾಗುತ್ತದೆ ಎಂದು ಭರವಸೆ ನೀಡಿದರು.