ಮಡಿಕೇರಿ, ಸೆ. ೨೫: ದೇವಣಗೇರಿ ಬಿ.ಸಿ. ಪ್ರೌಢಶಾಲೆಯ ೨೦೨೩-೨೪ನೇ ಸಾಲಿನ ಶಾಲಾ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ೨೦೨೨-೨೩ನೇ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಮುಕ್ಕಾಟಿರ ಐ. ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಗಣಿತ ಪ್ರಯೋಗಾಲ ಯವನ್ನು ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಅಜ್ಜಿನಿಕಂಡ ಸೌಮ್ಯ ಪೊನ್ನಪ್ಪ ಉದ್ಘಾಟಿಸಿದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಕ್ಷೇತ್ರದ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಪ್ರಕಾಶ್ ಮಾತ ನಾಡಿ, ಶಾಲೆಯ ವಿದ್ಯಾರ್ಥಿಗಳ ಶಿಸ್ತು ಮತ್ತು ಆಡಳಿತ ಮಂಡಳಿಯವರ ಸೌಹಾರ್ದತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಫಲಿತಾಂಶ ಪ್ರತಿ ವರ್ಷ ಶೇಕಡ ೧೦೦ ಬರುತ್ತಿದ್ದು, ಈ ವರ್ಷ ಕೂಡ ಶೇಕಡ ೧೦೦ ಫಲಿತಾಂಶ ಬರಲಿ ಎಂದು ಶುಭ ಹಾರೈಸಿದರು.

ಪ್ರಯೋಗಾಲಯ ಉದ್ಘಾಟಕ ರಾದ ಅಜ್ಜಿನಿಕಂಡ ಸೌಮ್ಯ ಅವರು ಕೂಡ ಮಾತನಾಡಿದರು. ನಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ಬಹುಮಾನವನ್ನು ವಿತರಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಕ್ಕಾಟಿರ ಐ. ನಾಣಯ್ಯ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಗುರಿಯನ್ನು ಇಟ್ಟುಕೊಳ್ಳಬೇಕು. ೧೦ನೇ ತರಗತಿಯ ನಂತರ ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸದೆ ಉನ್ನತ ವಿದ್ಯಾಭ್ಯಾಸಕ್ಕೆ ಹೋಗುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಚೇಂದAಡ ಜಿ. ಪೊನ್ನಪ್ಪ, ಖಜಾಂಚಿ ಅಲ್ಲಪಂಡ ಎ. ಉತ್ತಪ್ಪ, ಕಾರ್ಯ ನಿರ್ವಾಹಕಿ ಕರ್ನಂಡ ಎನ್. ಬೊಳ್ಳಮ್ಮ, ಆಡಳಿತಾಧಿಕಾರಿ ಪಿ.ಎ. ಲಕ್ಷಿö್ಮ ನಾರಾ ಯಣ, ಸದಸ್ಯರಾದ ಬೀನಂಡ ಎಸ್. ಪೂಣಚ್ಚ, ಮೂಕೋಂಡ ಸಾಬು ನಂಜಪ್ಪ, ಚಾರಿಮಂಡ ಎಂ. ಮುತ್ತಪ್ಪ, ಪಂದಿಕAಡ ಸಿ. ಸೋಮಣ್ಣ, ಮುಖ್ಯ ಶಿಕ್ಷಕ ಹೆಚ್.ಡಿ. ಲೋಕೇಶ, ಶಾಲಾ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಜರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದ ಸ್ವಾಗತವನ್ನು ಶಾಲಾ ಮುಖ್ಯ ಶಿಕ್ಷಕ ಹೆಚ್.ಡಿ. ಲೋಕೇಶ್ ನೆರವೇರಿಸಿದರು. ನಿರೂಪಣೆಯನ್ನು ಶಿಕ್ಷಕಿ ವೈ. ಪ್ರಮೀಳಾಕುಮಾರಿ ಮಾಡಿದರೆ, ಶಿಕ್ಷಕಿ ಎಸ್. ನಂದಿನಿ ವಂದಿಸಿದರು.