ಚೆಟ್ಟಳ್ಳಿ, ಸೆ. ೨೫: ಹಿಂದೂ ಮಲಯಾಳ ಸಮಾಜಂ ಚೆಟ್ಟಳ್ಳಿ ವತಿಯಿಂದ ಚೆಟ್ಟಳ್ಳಿಯಲ್ಲಿ ೧೫ನೇ ವರ್ಷದ ಓಣಂ ಆಚರಣೆ ಚೆಟ್ಟಳ್ಳಿ ಮಂಗಳ ಸಂಭಾAಗಣದಲ್ಲಿ ನಡೆಯಿತು.

ಪೂರ್ವಾಹ್ನ ಮಹಿಳೆಯರಿಂದ ಪೂಕಳಂ (ಹೂವಿನ ರಂಗೋಲಿ) ಸ್ಪರ್ಧೆ ನಡೆಯಿತು. ಚಂಡೆ ಮೇಳಗಳೊಂದಿಗೆ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾದ ಮಹಾಬಲಿ ಚಕ್ರವರ್ತಿ (ಮಾವೇಲಿ)ಯನ್ನು ಸಾಂಪ್ರದಾಯಿಕವಾಗಿ ವೇದಿಕೆಗೆ ಕರೆತರಲಾಯಿತು. ಚೆಟ್ಟಳ್ಳಿ ಹಿಂದೂ ಮಲೆಯಾಳಿ ಸಮಾಜಂನ ಗೌರವ ಅಧ್ಯಕ್ಷ ಎಸ್. ಕುಟ್ಟನ್ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜದ ಉಪಾಧ್ಯಕ್ಷ ಪಿ.ಕೆ. ವಿನಿಶ್, ಸದಸ್ಯೆ ಸುಲೋಚನಾರಾಯಣ ಅವರು ಮುಖ್ಯ ಅತಿಥಿಗಳಾಗಿದ್ದರು. ನಂತರದಲ್ಲಿ ಮಂಗಳ ಸಭಾಂಗಣದಿAದ ಚೆಟ್ಟಳ್ಳಿ ಪಟ್ಟಣದವರೆಗೆ ಚಂಡೆ ಮೇಳಗಳೊಂದಿಗೆ ಶೋಭಾಯಾತ್ರೆಯೊಂದಿಗೆ ಪಟ್ಟಣದಲ್ಲಿ ಚಂಡೆಮೇಳ ಪ್ರದರ್ಶನ ನಡೆಯಿತು. ನಂತರ ಕ್ರೀಡಾ ಕಾರ್ಯಕ್ರಮ, ಮಧ್ಯಾಹ್ನ ೧೨.೩೦ಕ್ಕೆ ಓಣಂ ಸದ್ಯ (ಓಣಂ ವಿಶೇಷ ಭೋÃಜನ) ನೆರವೇರಿತು.

ಅಪರಾಹ್ನ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಚೆಟ್ಟಳ್ಳಿ ಹಿಂದೂ ಮಲಯಾಳ ಸಮಾಜಂ ಅಧ್ಯಕ್ಷರಾದ ಕೆ.ಕೆ. ಸುರೇಶ್ ಬಾಬುರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಡಿಕೇರಿ ವಿಧಾನಸಭಾ ಕೇತ್ರದ ಶಾಸಕ ಡಾ. ಮಂಥರ್‌ಗೌಡ, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿಂದುರಾಜನ್, ಸಮಾಜದ ಮಾಜಿ ಅಧ್ಯಕ್ಷರುಗಳಾದ ವಿ.ಕೆ. ವಿನು, ಎನ್. ಚಂದ್ರನ್, ಒ.ಕೆ. ಶ್ರೀನಿವಾಸ್ ಹಾಗೂ ಎಸ್‌ಎಲ್‌ಎನ್ ಪ್ಲಾಂಟೇಶನ್ನ ವ್ಯವಸ್ಥಾಪಕರಾದ ಪಿ. ಕಣ್ಣನ್‌ರವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.

ಮಡಿಕೇರಿ ವಿಧಾನಸಭಾ ಕೇತ್ರದ ಶಾಸಕ ಡಾ. ಮಂಥರ್‌ಗೌಡ ಅವರಿಗೆ ಪಿ. ಕಣ್ಣನ್‌ರವರು ಸನ್ಮಾನಿಸಿ ಗೌರವಿಸಿದರು. ಸಮಾಜದ ಅಭಿವೃದ್ಧಿಗೆ ಶ್ರಮಿಸುವುದಾಗಿ ಮಂಥರ್‌ಗೌಡ ತಿಳಿಸಿದರು. ಸಿಂಧುರಾಜನ್ ಅವರಿಗೆ ಸಮಾಜದ ಹಿರಿಯ ಸಲಹೆಗಾರರಾದ ಸುನಿತ ಮಂಜುನಾಥ್, ಸಮಾಜದ ಮಾಜಿ ಅಧ್ಯಕ್ಷರುಗಳಾದ ವಿ.ಕೆ. ವಿನು, ಎನ್. ಚಂದ್ರನ್, ಒ.ಕೆ. ಶ್ರೀನಿವಾಸ್ ಅವರಿಗೆ ಶಾಸಕರಾದ ಡಾ.ಮಂಥÀರ್‌ಗೌಡ ಅವರು ಸನ್ಮಾನಿಸಿದರು. ೨೦೨೩ರಲ್ಲಿ ಥೈಲ್ಯಾಂಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ಲೋಬಲ್ ಸ್ಟಾರ್ ಪ್ರಶಸ್ತಿ ಪಡೆದ ತನುಕ್ಷ ಕೆ.ಆರ್, ಆರ್ಯ.ಪಿ.ಎಎಸ್ ಅವರಿಗೆ ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ, ಹತ್ತನೆ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕಪಡೆದ ಸಮಾಜದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ, ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಈ ಕಾರ್ಯ ಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಉಷಾಕುಮಾರಿ, ಖಜಾಂಜಿ ಕೆ.ಬಿ.ವಿಜಯನ್, ಕಾರ್ಯಕ್ರಮದ ಮೇಲ್ವಿಚಾರಕರಾದ ಪ್ರವೀಣ್‌ಕುಮಾರ್, ಎನ್.ಕೆ. ರಾಜನ್, ಮನೋಜ್, ಧನಲಕ್ಷಿö್ಮ ಸಮಾಜದ ಪದಾಧಿಕಾರಿಗಳು ಹಾಗೂ ಸದಸ್ಯರುಗಳ ಕುಟುಂಬಸ್ಥರು ಭಾಗವಹಿಸಿದರು. -ಕರುಣ್ ಕಾಳಯ್ಯ