ಸೋಮವಾರಪೇಟೆ, ಸೆ. ೨೫: ಪದವಿ ಪೂರ್ವ ಕಾಲೇಜು ಮಹಿಳಾ ವಿಭಾಗದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಐವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮಡಿಕೇರಿ ಸಂತ ಜೋಸೆಫರ ಕಾಲೇಜಿನ ವಿದ್ಯಾರ್ಥಿನಿಯರಾದ ಚಂಬAಡ ತಷ್ಮಾ ಮುತ್ತಮ್ಮ ಮತ್ತು ಯುಕ್ತ, ಸಂತ ಮೈಕಲರ ಕಾಲೇಜಿನ ಕೆ.ಎಂ. ಪ್ರತೀಕ್ಷಾ, ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ಬಿಟಿಸಿಜಿ ಕಾಲೇಜಿನ ಧನ್ಯ ಯಡೂರು, ಪುಷ್ಪಾಂಜಲಿ ಯಡೂರು, ಅವರುಗಳು ಆಯ್ಕೆಯಾಗುವ ಮೂಲಕ ರಾಜ್ಯಮಟ್ಟದಲ್ಲಿ ಕೊಡಗು ತಂಡವನ್ನು ಪ್ರತಿನಿಧಿಸಲಿದ್ದಾರೆ.

ಸೋಮವಾರಪೇಟೆ ತಾಲೂಕಿನ ಮಾದಾಪುರ ಡಿ.ಚನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜಿನ ಕ್ರೀಡಾಕೂಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಅಲ್ಲಿನ ಸ್ಪೋರ್ಟ್ಸ್ ಕ್ಲಬ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ರೋಚಕ ಫೈನಲ್‌ನ ಸಿಂಗಲ್ಸ್ನಲ್ಲಿ ಮಡಿಕೇರಿಯ ತಷ್ಮಾ ಮುತ್ತಮ್ಮ, ಬಿಟಿಸಿಜಿಯ ಧನ್ಯ ಅವರ ವಿರುದ್ಧ ಗೆಲುವು ಸಾಧಿಸಿದರು. ನಂತರ ನಡೆದ ಡಬಲ್ಸ್ನಲ್ಲಿ ಬಿಟಿಸಿಜಿ ಕಾಲೇಜಿನ ಧನ್ಯ ಹಾಗೂ ಪುಷ್ಪಾಂಜಲಿ ತಂಡ, ಸಂತ ಜೋಸೆಫರ ಕಾಲೇಜಿನ ತಷ್ಮಾ ಮತ್ತು ಪ್ರತೀಕ್ಷಾ ತಂಡದ ವಿರುದ್ಧ ಗೆಲುವು ಸಾಧಿಸಿತು. ನಂತರ ಪ್ರಶಸ್ತಿಗಾಗಿ ನಡೆದ ನಿರ್ಣಯಕ ರಿರ‍್ಸ್ ಸಿಂಗಲ್ಸ್ನ ತೀವ್ರ ಪೈಪೋಟಿಯ ಪಂದ್ಯಾಟದಲ್ಲಿ ಸಂತ ಮೈಕಲರ ಕಾಲೇಜಿನ ಪ್ರತೀಕ್ಷಾ, ಬಿಟಿಸಿಜಿ ಕಾಲೇಜಿನ ಪುಷ್ಪಾಂಜಲಿಯ ವಿರುದ್ಧ ಒಂದು ಅಂಕದ ಮುನ್ನಡೆಯೊಂದಿಗೆ ಗೆಲುವಿನ ನಗೆ ಬೀರಿ ತಂಡ ಪ್ರಶಸ್ತಿಗೆ ಭಾಜನವಾಯಿತು. ಬಿಟಿಸಿಜಿ ರನ್ನರ್ ಅಫ್ ಆಯಿತು.

ಕಾಲೇಜಿನ ಪ್ರಾಂಶುಪಾಲರಾದ ಚೈಯಂಡ ಮಂದಪ್ಪ ಅವರು ಟ್ರೋಫಿ ವಿತರಿಸಿದರು. ಮಡಿಕೇರಿ ಸಂತ ಜೋಸೆಫರ ಕಾಲೇಜಿನ ಉಪನ್ಯಾಸಕರಾದ ಕೆ.ಕೆ. ಸಚಿನ್, ಸಂತ ಮೈಕಲರ ಕಾಲೇಜಿನ ಜಾನಕಿ, ಸೋಮವಾರಪೇಟೆ ಬಿಟಿಸಿಜಿ ಕಾಲೇಜಿನ ಪ್ರಾಂಶುಪಾಲರಾದ ಮಿಲ್‌ಡ್ರೆಡ್ ಗೋನ್ಸಾಲ್ವೆಸ್, ದೈಹಿಕ ಶಿಕ್ಷಣ ಶಿಕ್ಷಕಿ ಇಂದಿರಾ ತರಬೇತಿ ನೀಡಿದ್ದರು.