ಮಡಿಕೇರಿ, ಸೆ. ೨೫: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೇರಿ ರೋಟರಿ ವುಡ್ಸ್ ಹಾಗೂ ಭಾರ ತೀಯ ರೆಡ್‌ಕ್ರಾಸ್ ಸಂಸ್ಥೆ ಸಹಯೋ ಗದೊಂದಿಗೆ ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮದ ಅಂಗವಾಗಿ ಮ್ಯಾರಥಾನ್ ಸ್ಪರ್ಧೆಯು (೫ ಕಿ.ಮೀ) ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಚಾಲನೆ ದೊರೆಯಿತು.

ಮ್ಯಾರಥಾನ್ ಸ್ಪರ್ಧೆಯನ್ನು ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ಉದ್ಘಾಟಿಸಿದರು. ಪ್ರಸಕ್ತ (೨೦೨೩-೨೪) ಸಾಲಿನ ಯುವ ಜನೋತ್ಸವ-ಕಾರ್ಯಕ್ರಮದ ಅಂಗವಾಗಿ (ರೆಡ್ ರಿಬ್ಬನ್ ಓಟ, ಹೆಚ್‌ಐವಿ/ಏಡ್ಸ್ ನಿಯಂತ್ರಣಕ್ಕಾಗಿ ಯುವಕರು) ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ ಹಮ್ಮಿಕೊಳ್ಳುವಂತೆ, ಕರ್ನಾಟಕ ಏಡ್ಸ್ ನಿಯಂತ್ರಣ ಸಂಸ್ಥೆ ವತಿಯಿಂದ ಏರ್ಪಡಿಸಲಾಗಿದೆ ಎಂದರು.

ಎಚ್‌ಐವಿ/ಏಡ್ಸ್ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯವನ್ನು ತಡೆಗಟ್ಟು ವುದು, ಉಚಿತ ರಾಷ್ಟಿçÃಯ ಸಹಾಯ ವಾಣಿ ೧೦೯೭, ಎಚ್‌ಐವಿ/ಎಡ್ಸ್ (ತಡೆಗಟ್ಟುವಿಕೆ ಹಾಗೂ ನಿಯಂತ್ರಣ) ಕಾಯಿದೆ ೨೦೧೭ ಮತ್ತಿತರ ಕುರಿತು ಅರಿವು ಮೂಡಿಸುವುದು ಈ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ ಎಂದು ಅನಿತಾ ಪೂವಯ್ಯ ಅವರು ಹೇಳಿದರು.

ಮ್ಯಾರಥಾನ್ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ೧೭ ರಿಂದ ೨೫ ವರ್ಷದ ಒಟ್ಟು ೭೧ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮ್ಯಾರಥಾನ್ ಸ್ಪರ್ಧೆಯು ಬುಧವಾರ ಜನರಲ್ ತಿಮ್ಮಯ್ಯ ಕ್ರೀಡಾಂ ಗಣ, ಮಾನ್ಸ್ ಕಾಂಪೌAಡ್, ಮಡಿಕೇರಿಯಿಂದ ಪ್ರಾರಂಭವಾಗಿ, ನಗರದ ಪ್ರಮುಖ ಬೀದಿಗಳಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ, ಜನರಲ್ ತಿಮ್ಮಯ್ಯ ವೃತ್ತ, ಮುಖಾಂ ತರ ಹಾದು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ತಲುಪಿತು.

ಮ್ಯಾರಥಾನ್ ಸಂಚರಿಸುವ ಮಾರ್ಗದಲ್ಲಿ, ಆಟೋ ಪ್ರಚಾರದ ಮುಖಾಂತರ ಎಚ್.ಐ.ವಿ/ಏಡ್ಸ್ ಬಗ್ಗೆ ಅರಿವು ಮೂಡಿಸಲಾಯಿತು.

ವಿಜೇತರ ವಿವರ:

ಮ್ಯಾರಥಾನ್ ಸ್ಪರ್ಧೆ ಬಾಲಕರ ವಿಭಾಗ: ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗೌತಮ್ ಎಸ್.(ಪ್ರಥಮ), ಸೋಮವಾರಪೇಟೆ ಸರ್ಕಾರಿ ಪ್ರಥಮ ದರ್ಜೆ ಬಿಟಿಸಿಜಿ ಕಾಲೇಜಿನ ಗಗನ್ ವೈ.ಪಿ(ದ್ವಿತೀಯ), ಗೋಣಿಕೊಪ್ಪ ಕಾವೇರಿ ಕಾಲೇಜಿನ ಗೌತಮ್ ಪಿ.ಸಿ (ತೃತೀಯ), ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಾಜುದ್ದೀನ್ ಪಿ.ಯು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬಿಎಸ್ಸಿ ನರ್ಸಿಂಗ್‌ನ ಕಿರಣ್ ಮಾಡರ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಎಂಬಿಬಿಎಸ್ ವಿದ್ಯಾರ್ಥಿ ಸಿದ್ದಾಪ್ರಭು ಹಾಗೂ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶರಣು ಪಿ.ಜಿ. ಅವರು ಸಮಾಧಾ ನಕರ ಬಹುಮಾನ ಪಡೆದಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಪೊನ್ನಂಪೇಟೆ ಕೂರ್ಗ್ ಇನ್ಸ್ಟ್ಯೂಟ್ ಆಪ್ ಟೆಕ್ನಾಲಜಿಯ ಚೋಂದಮ್ಮ ಕೆ.ಟಿ. (ಪ್ರಥಮ), ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತ್ರಿಶಾ ಕೆ.(ದ್ವಿತೀಯ), ಮಡಿಕೇರಿ ಎಫ್‌ಎಂಕೆಎAಸಿ ಭೂಮಿಕಾ ಕೆ.ಆರ್. (ತೃತೀಯ), ಹಾಗೂ ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭವಾನಿ ಎಸ್., ವೀರಾಜಪೇಟೆ ಕಾವೇರಿ ಕಾಲೇಜಿನ ದೇಚಮ್ಮ ಸಿ.ಸಿ., ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ಯಾರಾ ಮೆಡಿಕಲ್‌ನ ಮೇಘನಾ ಮುತ್ತಮ್ಮ ಅವರು ಸಮಾಧಾನಕರ ಬಹುಮಾನ ಪಡೆದಿದ್ದಾರೆ.

ವಿಜೇತರು ಹಾಗೂ ಭಾಗವ ಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿ ಸಲಾಯಿತು. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾದ ವಿಸ್ಮಯಿ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಆನಂದ್, ಮಡಿಕೇರಿ ರೋಟರಿ ವುಡ್ಸ್ನ ಅಧ್ಯಕ್ಷ ವಸಂತ್ ಕುಮಾರ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರವೀಂದ್ರ ರೈ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ತರಬೇತುದಾರರಾದ ಅಂಥೋನಿ ಡಿಸೋಜ, ಮಹಾಬಲ, ಬಿಂದ್ಯಾ ಹಾಗೂ ವಿವಿಧ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸ ಕರು ಇತರರು ಇದ್ದರು.