ಸೋಮವಾರಪೇಟೆ, ಸೆ. ೨೫: ಇಲ್ಲಿನ ಜಲಾಲಿಯ ಮಸೀದಿ, ಜಲಾಲಿಯ ಮಿಲಾದ್ ಕಮಿಟಿ ಹಾಗೂ ಕೊಡಗು ಜಿಲ್ಲಾ ರಕ್ತನಿಧಿ ಕೇಂದ್ರದ ಆಶ್ರಯದಲ್ಲಿ ಈದ್‌ಮಿಲಾದ್ ಅಂಗವಾಗಿ ಜಲಾಲಿಯ ಸಭಾಂಗಣದಲ್ಲಿ ಉಚಿತ ರಕ್ತದಾನ ಮತ್ತು ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸರ್ಕಾರಿ ಆಸ್ಪತ್ರೆಯ ಶಸ್ತç ಚಿಕಿತ್ಸಕ ಡಾ. ಸತೀಶ್ ಮಾತನಾಡಿ, ರಕ್ತಕ್ಕೆ ಪರ್ಯಾಯವಾಗಿ ಕೃತಕ ರಕ್ತ ಕಂಡು ಹಿಡಿಯಲು ಈವರೆಗೆ ಸಾಧ್ಯವಾಗಿಲ್ಲ. ಅದು ಇನ್ನೂ ಪ್ರಾಯೋಗಿಕ ಹಂತದಲ್ಲಿದ್ದು, ರಕ್ತದಾನ ಮಹತ್ವ ಪಡೆದಿದೆ. ಒಬ್ಬರ ರಕ್ತದಿಂದ ನಾಲ್ಕು ಜನರ ಪ್ರಾಣ ಉಳಿಸಲು ಸಹಕಾರಿಯಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಮುಂದೆ ಬರಬೇಕೆಂದರು.

ತಾಲೂಕು ಕೇಂದ್ರಗಳಲ್ಲೂ ಉಪ ರಕ್ತನಿಧಿ ಕೇಂದ್ರವನ್ನು ಪ್ರಾರಂಭಿಸಿರು ವುದರಿಂದ ತಿಂಗಳಿಗೆ ೩೦ ರಿಂದ ೪೦ ಯೂನಿಟ್ ರಕ್ತದ ಬೇಡಿಕೆ ಇದೆ. ಜಿಲ್ಲೆಗೆ ಸುಮಾರು ೨೦೦ ರಿಂದ ೩೦೦ ಯೂನಿಟ್ ರಕ್ತದ ಅವಶ್ಯಕತೆ ಇದ್ದು, ರಕ್ತದಾನ ಶಿಬಿರಗಳು ಹೆಚ್ಚಾಗಿ ಆಯೋಜನೆ ಮಾಡಬೇಕಿದೆ ಎಂದರು.

ಜಲಾಲಿಯ ಮಸೀದಿಯ ಕಮಿಟಿ ಕಾರ್ಯದರ್ಶಿ ಕಬೀರ್ ಮಾತನಾಡಿ, ಇಂದು ಸಮಾಜದಲ್ಲಿ ಪ್ರೀತಿ ವಿಶ್ವಾಸ ಕಡಿಮೆಯಾಗುತ್ತಿದೆ. ಜಾತಿ ಧರ್ಮದ ಹೆಸರಿನಲ್ಲಿ ಮನುಷ್ಯತ್ವ ಕಳೆದುಕೊಳ್ಳಲಾಗಿದೆ. ಆದರೆ, ರಕ್ತಕ್ಕೆ ಯಾವುದೇ ಜಾತಿ ಧರ್ಮದ ನಂಟಿಲ್ಲ. ತುರ್ತು ಸಂದರ್ಭ ಮತ್ತೊಬ್ಬರ ಜೀವ ಉಳಿಸಲು ರಕ್ತದ ಅವಶ್ಯಕತೆ ಇರುತ್ತದೆ. ದಾನಿಗಳು ರಕ್ತದಾನಕ್ಕೆ ಮುಂದಾಗಬೇಕೆAದರು.

ಕಾರ್ಯಕ್ರಮವನ್ನು ಜಲಾಲಿಯ ಮಸೀದಿಯ ಹಮೀದ್ ಸಖಾಫಿ ಉದ್ಘಾಟಿಸಿದರು. ವೇದಿಕೆಯಲ್ಲಿ ಮಸೀದಿ ಅಧ್ಯಕ್ಷರಾದ ಎಂ.ಬಿ. ಇಬ್ರಾಹಿಂ, ರಕ್ತ ನಿಧಿ ಕೇಂದ್ರ ವೈದ್ಯರಾದ ರಶ್ಮಿ ಇದ್ದರು.