ಮಡಿಕೇರಿ, ಸೆ. ೨೫: ದಕ್ಷಿಣ ಗಂಗೆ.. ನಾಡಿನ ಜೀವನದಿ ಕಾವೇರಿ ಪ್ರಸ್ತುತ ದೇಶವ್ಯಾಪಿ ಸುದ್ದಿಯಾಗು ತ್ತಿದೆ. ಕಾವೇರಿ ತವರು ಕೊಡಗು ಜಿಲ್ಲೆ ವಿರ್ಷಂಪ್ರತಿ ಧಾರಾಕಾರ ಮಳೆ ಯಾದರೆ ಕಾವೇರಿ ಕಾವೇರುವುದೇ ಇಲ್ಲ. ಆದರೆ ಪ್ರಾಕೃತಿಕತೆಯ ಪರಿಣಾಮವಾಗಿ ಜಿಲ್ಲೆಗೆ ಮಳೆ ಕ್ಷೀಣವಾದಲ್ಲಿ ಆ ವರ್ಷ ಕಾವೇರಿಯ ಕಿಚ್ಚು ಆರಂಭವಾಗುವುದು ಸಹಜ. ಇತ್ತೀಚಿನ ಕೆಲವು ವರ್ಷಗಳಿಂದ ಕಾವೇರಿ ವಿವಾದ ಸೃಷ್ಟಿಯಾಗಿರಲಿಲ್ಲ. ಆದರೆ ಪ್ರಸಕ್ತ ವರ್ಷ ಕಾವೇರಿ ತವರು ಕೊಡಗಿಗೇ ನಿರೀಕ್ಷಿತ ಮಳೆಯಾಗಿಲ್ಲ. ಇದರ ಪರಿಣಾಮವೆಂಬAತೆ ಕರ್ನಾಟಕ-ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ಜಲ ವಿವಾದ ಇದೀಗ ಬುಗಿಲೇಳುತ್ತಿದೆ. ರಾಜ್ಯಾ ದ್ಯಂತ ಅದರಲ್ಲೂ ವಿಶೇಷವಾಗಿ ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ಕಾವೇರಿ ನೀರನ್ನು ಅತಿ ಹೆಚ್ಚು ಅವಲಂಬಿಸಿರುವ ಪ್ರದೇಶ ಗಳಲ್ಲಿ ಹೋರಾಟದ ಕಿಚ್ಚು ಹೆಚ್ಚಾಗು ತ್ತಿದೆ. ಎರಡು ರಾಜ್ಯಗಳ ನಡುವೆ ಕಾನೂನಾತ್ಮಕ ಹೋರಾಟಗಳು ಆರಂಭಗೊAಡಿವೆ. ಇದು ಸದ್ಯದ ಮಟ್ಟಿಗೆ ರಾಜ್ಯದಲ್ಲಿ ಉಂಟಾಗಿರುವ ಸೂಕ್ಷö್ಮ ಪರಿಸ್ಥಿತಿಯಾದಂತಿದೆ.

ಕಾವೇರಿ ತವರು ಮಾತ್ರ ಯಾವತ್ತೂ ನಗಣ್ಯ...!

ಕೊಡಗಿಗೆ ಮಳೆ ಧಾರಾಕಾರವಾಗಿ ಸುರಿದಲ್ಲಿ ಕಾವೇರಿಯ ವಿಚಾರವೇ ಎಲ್ಲೂ - ಯಾವತ್ತೂ ಪ್ರಸ್ತಾಪವಾಗು ವುದೇ ಇಲ್ಲ. ಕೊಡಗಿನ ಜನರು ತಮ್ಮ ಆರಾಧ್ಯ ದೇವತೆಯಾಗಿ, ಇಲ್ಲಿನ ಮೂಲ ನಿವಾಸಿಗಳು ಕುಲದೇವರಾಗಿ ಮಾತೆಯನ್ನು ಆರಾಧಿಸುತ್ತಾರೆ. ಆದರೆ ಸೂಕ್ಷö್ಮವಾಗಿ ಅವಲೋಕಿಸಿದರೆ ಕಾವೇರಿಯ ಪ್ರಯೋಜನ ಹೆಚ್ಚಿರು ವುದು ಕೊಡಗಿಗಿಂತ ಹೆಚ್ಚಾಗಿ ಇತರ ಜಿಲ್ಲೆ ಹಾಗೂ ರಾಜ್ಯಗಳಿಗೆ.

ಧಾರಾಕಾರವಾಗಿ ಮಳೆ - ಗಾಳಿ ಯಿಂದ ಕೊಡಗು ತತ್ತರಿಸುವ ವರ್ಷಗಳಲ್ಲಿ ಬಹುಶಃ ಯಾರೂ ಯಾವ ಸರಕಾರಗಳೂ ಕೊಡಗಿನ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಳ್ಳುವುದೇ ಇಲ್ಲ... ಇದಕ್ಕೆ ಉದಾಹರಣೆ ಎಂಬAತೆ ಕೊಡಗು ೨೦೧೮ ರಿಂದ ಸತತ ವರ್ಷಗಳು ಭಾರೀ ಪ್ರಾಕೃತಿಕ ವಿಕೋ ಪಕ್ಕೆ ತುತ್ತಾಗಿತ್ತು. ಆ ಸಂದರ್ಭದಲ್ಲಿ ಆಗಿರುವ ಅಪಾರ ನಷ್ಟ - ಸಾವು - ನೋವುಗಳು ಇದೀಗ ಇತಿಹಾಸದ ಪುಟ ಸೇರಿ ಹೋಗಿವೆ. ಆದರೆ ನೈಜ ಸಂತ್ರಸ್ತರಾದ ಹಲವಾರು ಮಂದಿಗೆ ಇನ್ನೂ ಶಾಶ್ವತ ಪರಿಹಾರ ಲಭಿಸಿಲ್ಲ. ಜಿಲ್ಲೆಯ ರಸ್ತೆಗಳು, ಸೇತುವೆಗಳು, ಕಟ್ಟಡಗಳು ಮಳೆಗಾಲದಲ್ಲಿ ವರ್ಷಂ ಪ್ರತಿ ಹಾನಿಗೀಡಾಗುತ್ತಲೇ ಇರುತ್ತದೆ.

ಜಿಲ್ಲೆಗೆ ಈ ನಿಟ್ಟನಲ್ಲಿ ವರ್ಷಂಪ್ರತಿ ಒಂದಷ್ಟು ಕೋಟಿಗಳ ಯೋಜನೆಯ ಗಳನ್ನು ನೀಡಬೇಕೆಂಬ ಬೇಡಿಕೆಗಳೂ ಕೇವಲ ಒತ್ತಾಯಕ್ಕೆ ಮಾತ್ರ ಸೀಮಿತವಾಗುತ್ತಿವೆಯೇ ಹೊರತು ಬಜೆಟ್‌ನಲ್ಲಾಗಲಿ ಅಥವಾ ಇತರ ರೂಪದಲ್ಲಾಗಲಿ ಜಿಲ್ಲೆಗೆ ನೆರವಾಗುತ್ತಿಲ್ಲ. ಕೃಷಿ ಪ್ರಧಾನವಾದ, ಅದರಲ್ಲೂ ಕಾಫಿ ಬೆಳೆಯನ್ನೇ ಬಹುತೇಕ ಅವಲಂಬಿತವಾ ಗಿರುವ ಕೊಡಗು ಹಲವಾರು ವರ್ಷಗಳಿಂದ ನಿರಂತರವಾಗಿ ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಲೇ ಬರುತ್ತಿದೆ. ಆದರೆ ಜಿಲ್ಲೆಯ ಜನರ ಕೂಗು ಸರಕಾರಗಳಿಗೆ ತಲುಪುವುದೂ ಇಲ್ಲ - ಕಾಣುವುದೂ ಇಲ್ಲ. ಅರ್ಥವಾಗುವುದೂ ಇಲ್ಲ.

ಏನೇ ಇರಲಿ ಈಗಿನ ವಾಸ್ತವವನ್ನೊಮ್ಮೆ ಗಮನಿಸೋಣ...

ರಾಜ್ಯದಲ್ಲಿ ಕಾವೇರಿಯ ಕಿಚ್ಚು - ಹೋರಾಟಗಳು ನಡೆಯುತ್ತಿರುವುದು ಸದ್ಯದ ಬೆಳವಣಿಗೆ. ಆದರೆ ಇತ್ತ ಕಾವೇರಿ ತವರಿನಲ್ಲಿ ಕಾವೇರಿ ಮಾತೆಯ ಆರಾಧನೆಯ ಸಿದ್ಧತೆಗಳು ನಡೆಯುತ್ತಿವೆ. ತುಲಾಸಂಕ್ರಮಣದ ಸಂದರ್ಭ ಕಾವೇರಿ ತೀರ್ಥರೂಪಿ ಣಿಯಾಗಿ ಆವೀರ್ಭವಿಸಲಿದ್ದು, ಮಾತೆಯನ್ನು ಬರಮಾಡಿಕೊಳ್ಳಲು ಕೊಡಗಿನಲ್ಲಿ ತಯಾರಿ ನಡೆಯುತ್ತಿದೆ. ಸೆಪ್ಟೆಂಬರ್ ೨೬ ರಿಂದ ಕಾವೇರಿ ಸಂಕ್ರಮಣದ ಕೈಂಕರ್ಯಗಳಿಗೆ ಚಾಲನೆಯೂ ಸಿಗಲಿದೆ.

ಕೊಡಗು ಜಿಲ್ಲೆ ಅತಿವೃಷ್ಟಿಯನ್ನು ಎದುರಿಸಿದರೂ ಅನಾವೃಷ್ಟಿಗೆ ತುತ್ತಾದರೂ ಯಾವುದೇ ಸಂದರ್ಭದಲ್ಲಿ ಕಾವೇರಿಯ ಆರಾಧನೆಯನ್ನು ಕೈ ಬಿಡುವುದಿಲ್ಲ. ನಾಡಿನ ಸುಭಿಕ್ಷೆಗಾಗಿ ತಮ್ಮ ಆರಾಧ್ಯ ದೇವರ ಪೂಜೆ ಮುಂದು ವರಿಯುತ್ತಲೇ ಇರುತ್ತದೆ. ಬಹುಶಃ ಕೊಡಗಿನ ಅಗತ್ಯ ಸಂದರ್ಭಗಳಲ್ಲಿ ಜಿಲ್ಲೆಯನ್ನು ನಿರ್ಲಕ್ಷಿಸಲಾಗುತ್ತದೆ ಎಂಬ ಕಾರಣಕ್ಕಾಗಿ ಮಾತ್ರ ಕಾವೇರಿಯ ಹೋರಾಟದ ಸಂದರ್ಭದಲ್ಲಿ ಕೊಡಗಿನ ಜನರು ಹೆಚ್ಚು ತಲೆ ಕೆಡಿಸಿಕೊಳ್ಳಲಾರರು ಎಂಬದು ಮಾತ್ರ ವಾಸ್ತವವೇನೋ.. - ಕಾಯಪಂಡ ಶಶಿ ಸೋಮಯ್ಯ