ಅನಿಲ್ ಎಚ್.ಟಿ.

ಬೆಂಗಳೂರು, ಸೆ. ೨೫: ಸುಸ್ಥಿರತೆ ಮತ್ತು ಪರಿಸರ ಸ್ನೇಹಿಯಾದ ಕಾಫಿ ಕೃಷಿಯು ಭವಿಷ್ಯದ ಚಿಂತನೆಯಾಗಿರಬೇಕು. ಹೊಸ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ವಿನೂತನ ಪ್ರಯೋಗಗಳನ್ನು ಕಾಫಿ ಉದ್ಯಮ ಯಶಸ್ವಿಯಾಗಿ ಜಾರಿಗೊಳಿಸಬೇಕಾದ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಕರೆ ನೀಡಿದರು.

ಏಷ್ಯಾದ ಮೊದಲ ಮತ್ತು ವಿಶ್ವದ ೫ನೇ ಕಾಫಿ ಸಮ್ಮೇಳನಕ್ಕೆ ಬೆಂಗಳೂರು ಅರಮನೆಯಲ್ಲಿನ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದ ಪಿಯೂಷ್ ಗೋಯಲ್, ಕಾಫಿ ಕೃಷಿಗೆ ಹಲವು ಶತಮಾನಗಳ ಇತಿಹಾಸ ಇದೆಯಾದರೂ ಇತ್ತೀಚಿನ ದಿನಗಳಲ್ಲಿ ಪರಂಪರಾಗತ ಕಾಫಿ ಕೃಷಿಯೊಂದಿಗೆ ಆಧುನಿಕ ತಂತ್ರಜ್ಞಾನಗಳನ್ನೂ ಕಾಫಿ ಕೃಷಿ ಹಾಗೂ ಉದ್ಯಮಕ್ಕೆ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಭಾರತ ಸೇರಿದಂತೆ ಜಗತ್ತಿನ ಕಾಫಿ ಉದ್ಯಮ ಚಿಂತನೆ ಹರಿಸಲು ಬೆಂಗಳೂರಿನಲ್ಲಿ ನಾಲ್ಕು ದಿನಗಳ ಕಾಲ ಆಯೋಜಿತ ವಿಶ್ವಕಾಫಿ ಸಮ್ಮೇಳನ ಮುಂದಾಗಲಿ ಎಂದು ಹಾರೈಸಿದರು.

ಇತ್ತೀಚಿಗಷ್ಟೇ ನವದೆಹಲಿಯಲ್ಲಿ ಜರುಗಿದ ಜಿ ೨೦ ವಿಶ್ವಸಮ್ಮೇಳನದ ಕಾರ್ಯಕ್ರಮಗಳು ಈ ವರ್ಷದ ನವೆಂಬರ್ ಅಂತ್ಯದವರೆಗೂ ಮುಂದುವರೆಯಲಿದೆ. ಈ ನಿಟ್ಟಿನಲ್ಲಿ ವಿಶ್ವಕಾಫಿ ಸಮ್ಮೇಳನ ಕೂಡ ಜಾಗತಿಕ ಕಾಫಿ ಉದ್ಯಮದ ಪ್ರಗತಿಯ ನಿಟ್ಟಿನಲ್ಲಿ ಜಿ. ೨೦ಯ ಮುಂದುವರೆದ ಕಾರ್ಯಕ್ರಮ ಎನಿಸಿಕೊಂಡಿದೆ ಎಂದು ಅಭಿಪ್ರಾಯಪಟ್ಟ ಅವರು, ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ ಎಂಬ ಚಿಂತನೆಗನುಗುಣವಾಗಿ ಕಾಫಿ ಕುಟುಂಬ ಎಂಬ ಪರಿಕಲ್ಪನೆಯೊಂದಿಗೆ ವಿಶ್ವದ ಕಾಫಿ ಬೆಳೆಗಾರ ದೇಶಗಳು ಒಂದಾಗಿ ಕಾಫಿ ಉದ್ಯಮದ ಹಿತಚಿಂತನೆ ಮತ್ತು ಸುಸ್ಥಿರತೆ ಬಗ್ಗೆ ಕಾಳಜಿ ವಹಿಸಿ ಮನುಕುಲಕ್ಕೆ ನೆರವಾಗಬೇಕಾದ ಅವಶ್ಯಕತೆ ಇದೆ ಎಂದು ಸಚಿವರು ಹೇಳಿದರು.

ಬೇರೆ ಉದ್ಯಮಗಳಂತೆ ಕಾಫಿ ಉದ್ಯಮ ಮತ್ತು ಕಾಫಿ ಕೃಷಿ ಕೂಡ ಹೊಸಚಿಂತನೆ, ಅವಕಾಶಗಳಿಗೆ ತೆರೆದುಕೊಳ್ಳಬೇಕಾಗಿದೆ. ಕಾಫಿ ಕೃಷಿಕರು, ಕಾಫಿ ಉದ್ಯಮಿಗಳಂತೆ ಕಾಫಿ ಕಾರ್ಮಿಕರ ಶ್ರೇಯೋಭಿವೃದ್ಧಿ ನಿಟ್ಟಿನಲ್ಲಿಯೂ ಉದ್ಯಮ ಸ್ಪಂದಿಸ ಬೇಕಾಗಿದ್ದು, ಯಂತ್ರೋಪಕರಣಗಳ ಬಳಕೆ ಹೆಚ್ಚಾಗುತ್ತಿರುವ ದಿನಗಳಲ್ಲಿ ಕಾರ್ಮಿಕರ ಹಿತಚಿಂತನೆಯ ನಿಟ್ಟಿನಲ್ಲಿಯೂ ಕಾಫಿ ಸಮ್ಮೇಳನ ಚರ್ಚಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಕಾಫಿಯ ಗುಣಮಟ್ಟ ಮತ್ತು ಸುಸ್ಥಿರತೆ ಕಾಯ್ದುಕೊಳ್ಳುವ ತುರ್ತು ಅಗತ್ಯವಿದ್ದು, ಈ ನಿಟ್ಟಿನಲ್ಲಿ ಜಾಗತಿಕವಾಗಿ ಕಾಫಿ ಬೆಳೆಗಾರ ದೇಶಗಳು ಒಮ್ಮತಕ್ಕೆ ಬರಬೇಕಾಗಿದೆ. ಕಾಫಿ ಗುಣಮಟ್ಟದೊಂದಿಗೆ ಪರಿಸರ ಸಂರಕ್ಷಣೆಯ ಕಾಳಜಿಯೂ ಬೆಳೆಗಾರರಲ್ಲಿ ಮುಖ್ಯವಾಗಿರಲಿ. ತ್ಯಾಜ್ಯ ವಿಲೇವಾರಿಯೇ ಜಾಗತಿಕ ಮಟ್ಟದಲ್ಲಿ ದೊಡ್ಡ ಸವಾಲಾಗಿದ್ದು, ಕಾಫಿ ಕೃಷಿ ರಂಗ ಈ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾಗಿದೆ.

ವಿಶ್ವಕಾಫಿ ಸಮ್ಮೇಳನ ಭಾರತೀಯ ಕಾಫಿಗೆ ವಿಶ್ವಮಟ್ಟದ ಮಾನ್ಯತೆ ದೊರಕಿಸಿಕೊಡಲಿದ್ದು, ಭವಿಷ್ಯದಲ್ಲಿ ಭಾರತೀಯ ಕಾಫಿ ಬೆಳೆಗಾರ ಗುಣಮಟ್ಟದ ಕಾಫಿ ಬೆಳೆಯುವ ನಿಟ್ಟಿನಲ್ಲಿ ಮತ್ತಷ್ಟು ಹೊಣೆಗಾರಿಕೆ ತೋರಬೇಕಾಗಿದೆ. ಭಾರತದ ಅದರಲ್ಲಿಯೂ ಭಾರತೀಯ ಕಾಫಿ ಉತ್ಪಾದನೆಯಲ್ಲಿ ಶೇ.೭೦ ರಷ್ಟು ಕೊಡುಗೆ ನೀಡುವ ಮೂಲಕ ದೇಶದಲ್ಲಿ ಕಾಫಿ ಸಂಸ್ಕೃತಿಯನ್ನು ಪಸರಿಸಿದ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಕಾಫಿ ಬೆಳೆಗಾರರ ಪಾತ್ರ ಮಹತ್ವದ್ದಾಗಿದೆ ಎಂದು ಪಿಯೂಷ್ ಗೋಯಲ್ ಶ್ಲಾಘಿಸಿದರು.

ಕಳೆದ ವಾರವಷ್ಟೇ ಲೋಕಸಭೆ ಯಲ್ಲಿ ಶೇ.೩೩ ರಷ್ಟು ಸಂಸತ್ ಸ್ಥಾನವನ್ನು ಮಹಿಳೆಯರಿಗೆ ನೀಡುವ ಐತಿಹಾಸಿಕ ಮಸೂದೆ ಅಂಗೀಕಾರ ವಾಗಿದೆ. ಭಾರತದಲ್ಲಿ ಮಹಿಳೆಯರಿಗೆ ಮಹತ್ವ ದೊರಕುತ್ತಿರುವ ಕಾಲಘಟ್ಟದಲ್ಲಿ ಕಾಫಿ ಉದ್ಯಮದಲ್ಲಿಯೂ ಮಹಿಳೆಯರು ಮತ್ತಷ್ಟು ಸಂಖ್ಯೆಯಲ್ಲಿ ಮುಂದೆ ಬರಬೇಕಾಗಿದೆ. ಕಾಫಿಯ ಆಂತರಿಕ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಪಿಯೂಷ್ ಗೋಯಲ್ ಅಭಿಪ್ರಾಯಿಸಿದರು.

ವಿಶ್ವಕಾಫಿ ಸಂಸ್ಥೆಯ ಅಧ್ಯಕ್ಷ ಮೆಸ್ಲಿ ಮಿಲಿಯಾನೋ ಫ್ಯಾಬ್ರಿಯಾನ್ ಮಾತನಾಡಿ, ವಿಶ್ವಮಟ್ಟದಲ್ಲಿ ಕಾಫಿ ಕೃಷಿಯ ಬಗ್ಗೆ ಕಾರ್ಯಚಟುವಟಿಕೆ ಹಮ್ಮಿಕೊಳ್ಳುತ್ತಾ ಬಂದಿರುವ ವಿಶ್ವಕಾಫಿ ಸಂಸ್ಥೆಗೆ ಈಗ ೬೦ ವರ್ಷಗಳಾಗಿದೆ. ಜಾಗತಿಕ ಮಟ್ಟದಲ್ಲಿ ಕಾಫಿ ಕೃಷಿ ಉದ್ಯಮ ಪರಿವರ್ತನೆ ಕಾಣಬೇಕಾದ ಜಿಲ್ಲೆಗಳ ಕಾಫಿ ಬೆಳೆಗಾರರ ಪಾತ್ರ ಮಹತ್ವದ್ದಾಗಿದೆ ಎಂದು ಪಿಯೂಷ್ ಗೋಯಲ್ ಶ್ಲಾಘಿಸಿದರು.

ಕಳೆದ ವಾರವಷ್ಟೇ ಲೋಕಸಭೆ ಯಲ್ಲಿ ಶೇ.೩೩ ರಷ್ಟು ಸಂಸತ್ ಸ್ಥಾನವನ್ನು ಮಹಿಳೆಯರಿಗೆ ನೀಡುವ ಐತಿಹಾಸಿಕ ಮಸೂದೆ ಅಂಗೀಕಾರ ವಾಗಿದೆ. ಭಾರತದಲ್ಲಿ ಮಹಿಳೆಯರಿಗೆ ಮಹತ್ವ ದೊರಕುತ್ತಿರುವ ಕಾಲಘಟ್ಟದಲ್ಲಿ ಕಾಫಿ ಉದ್ಯಮದಲ್ಲಿಯೂ ಮಹಿಳೆಯರು ಮತ್ತಷ್ಟು ಸಂಖ್ಯೆಯಲ್ಲಿ ಮುಂದೆ ಬರಬೇಕಾಗಿದೆ. ಕಾಫಿಯ ಆಂತರಿಕ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲೆಗಳ ಕಾಫಿ ಬೆಳೆಗಾರರ ಪಾತ್ರ ಮಹತ್ವದ್ದಾಗಿದೆ ಎಂದು ಪಿಯೂಷ್ ಗೋಯಲ್ ಶ್ಲಾಘಿಸಿದರು.

ಕಳೆದ ವಾರವಷ್ಟೇ ಲೋಕಸಭೆ ಯಲ್ಲಿ ಶೇ.೩೩ ರಷ್ಟು ಸಂಸತ್ ಸ್ಥಾನವನ್ನು ಮಹಿಳೆಯರಿಗೆ ನೀಡುವ ಐತಿಹಾಸಿಕ ಮಸೂದೆ ಅಂಗೀಕಾರ ವಾಗಿದೆ. ಭಾರತದಲ್ಲಿ ಮಹಿಳೆಯರಿಗೆ ಮಹತ್ವ ದೊರಕುತ್ತಿರುವ ಕಾಲಘಟ್ಟದಲ್ಲಿ ಕಾಫಿ ಉದ್ಯಮದಲ್ಲಿಯೂ ಮಹಿಳೆಯರು ಮತ್ತಷ್ಟು ಸಂಖ್ಯೆಯಲ್ಲಿ ಮುಂದೆ ಬರಬೇಕಾಗಿದೆ. ಕಾಫಿಯ ಆಂತರಿಕ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಪಿಯೂಷ್ ಗೋಯಲ್ ಅಭಿಪ್ರಾಯಿಸಿದರು.

ವಿಶ್ವಕಾಫಿ ಸಂಸ್ಥೆಯ ಅಧ್ಯಕ್ಷ ಮೆಸ್ಲಿ ಮಿಲಿಯಾನೋ ಫ್ಯಾಬ್ರಿಯಾನ್ ಮಾತನಾಡಿ, ವಿಶ್ವಮಟ್ಟದಲ್ಲಿ ಕಾಫಿ ಕೃಷಿಯ ಬಗ್ಗೆ ಕಾರ್ಯಚಟುವಟಿಕೆ ಹಮ್ಮಿಕೊಳ್ಳುತ್ತಾ ಬಂದಿರುವ ವಿಶ್ವಕಾಫಿ ಸಂಸ್ಥೆಗೆ ಈಗ ೬೦ ವರ್ಷಗಳಾಗಿದೆ. ಜಾಗತಿಕ ಮಟ್ಟದಲ್ಲಿ ಕಾಫಿ ಕೃಷಿ ಉದ್ಯಮ ಪರಿವರ್ತನೆ ಕಾಣಬೇಕಾದ ಜಿಲ್ಲೆಗಳ ಕಾಫಿ ಬೆಳೆಗಾರರ ಪಾತ್ರ ಮಹತ್ವದ್ದಾಗಿದೆ ಎಂದು ಪಿಯೂಷ್ ಗೋಯಲ್ ಶ್ಲಾಘಿಸಿದರು.

ಕಳೆದ ವಾರವಷ್ಟೇ ಲೋಕಸಭೆ ಯಲ್ಲಿ ಶೇ.೩೩ ರಷ್ಟು ಸಂಸತ್ ಸ್ಥಾನವನ್ನು ಮಹಿಳೆಯರಿಗೆ ನೀಡುವ ಐತಿಹಾಸಿಕ ಮಸೂದೆ ಅಂಗೀಕಾರ ವಾಗಿದೆ. ಭಾರತದಲ್ಲಿ ಮಹಿಳೆಯರಿಗೆ ಮಹತ್ವ ದೊರಕುತ್ತಿರುವ ಕಾಲಘಟ್ಟದಲ್ಲಿ ಕಾಫಿ ಉದ್ಯಮದಲ್ಲಿಯೂ ಮಹಿಳೆಯರು ಮತ್ತಷ್ಟು ಸಂಖ್ಯೆಯಲ್ಲಿ ಮುಂದೆ ಬರಬೇಕಾಗಿದೆ. ಕಾಫಿಯ ಆಂತರಿಕ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಪಿಯೂಷ್ ಗೋಯಲ್ ಅಭಿಪ್ರಾಯಿಸಿದರು.

ವಿಶ್ವಕಾಫಿ ಸಂಸ್ಥೆಯ ಅಧ್ಯಕ್ಷ ಮೆಸ್ಲಿ ಮಿಲಿಯಾನೋ ಫ್ಯಾಬ್ರಿಯಾನ್ ಮಾತನಾಡಿ, ವಿಶ್ವಮಟ್ಟದಲ್ಲಿ ಕಾಫಿ ಕೃಷಿಯ ಬಗ್ಗೆ ಕಾರ್ಯಚಟುವಟಿಕೆ ಹಮ್ಮಿಕೊಳ್ಳುತ್ತಾ ಬಂದಿರುವ ವಿಶ್ವಕಾಫಿ ಸಂಸ್ಥೆಗೆ ಈಗ ೬೦ ವರ್ಷಗಳಾಗಿದೆ. ಜಾಗತಿಕ ಮಟ್ಟದಲ್ಲಿ ಕಾಫಿ ಕೃಷಿ ಉದ್ಯಮ ಪರಿವರ್ತನೆ ಕಾಣಬೇಕಾದ ಪಿಯೂಷ್ ಗೋಯಲ್ ಅಭಿಪ್ರಾಯಿಸಿದರು.

ವಿಶ್ವಕಾಫಿ ಸಂಸ್ಥೆಯ ಅಧ್ಯಕ್ಷ ಮೆಸ್ಲಿ ಮಿಲಿಯಾನೋ ಫ್ಯಾಬ್ರಿಯಾನ್ ಮಾತನಾಡಿ, ವಿಶ್ವಮಟ್ಟದಲ್ಲಿ ಕಾಫಿ ಕೃಷಿಯ ಬಗ್ಗೆ ಕಾರ್ಯಚಟುವಟಿಕೆ ಹಮ್ಮಿಕೊಳ್ಳುತ್ತಾ ಬಂದಿರುವ ವಿಶ್ವಕಾಫಿ ಸಂಸ್ಥೆಗೆ ಈಗ ೬೦ ವರ್ಷಗಳಾಗಿದೆ. ಜಾಗತಿಕ ಮಟ್ಟದಲ್ಲಿ ಕಾಫಿ ಕೃಷಿ ಉದ್ಯಮ ಪರಿವರ್ತನೆ ಕಾಣಬೇಕಾದ ದಿನಗಳನ್ನು ನಾವು ಎದುರು ನೋಡುತ್ತಿದ್ದೇವೆ. ಹೊಸ ಸವಾಲುಗಳನ್ನೂ ಜಾಗತಿಕವಾಗಿ ಎದುರಿಸುವ ನಿಟ್ಟಿನಲ್ಲಿಯೂ ಕಾಫಿ ಬೆಳೆಗಾರರು ಒಗ್ಗಟ್ಟಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ನ್ಯೂಜಿನಿವಾ ದೇಶದ ಕಾಫಿ ಸಚಿವ ಜಾಯಿ ಕುಲಿ, ನೆಸ್ಲೆ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಸುರೇಶ್ ನಾರಾಯಣನ್, ಎಸ್.ಎಸ್.ಎನ್ ಸಂಸ್ಥೆಯ ಅಧ್ಯಕ್ಷ ಎನ್. ಸಾತಪ್ಪನ್, ವಿಶ್ವಕಾಫಿ ಸಂಸ್ಥೆಯ ನಿರ್ದೇಶಕರು, ವಿವಿಧ ಕಾಫಿ ಉದ್ಯಮ ಸಂಸ್ಥೆಯ ಅಧ್ಯಕ್ಷರು, ಸಮ್ಮೇಳನದ ಆಯೋಜಕರಾದ ಭಾರತೀಯ ಕಾಫಿ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಜಗದೀಶ್ ಹಾಜರಿದ್ದರು.

ಶಂಕರ್ ಪ್ರಸಾದ್ ನಿರೂಪಿಸಿದ ಕಾರ್ಯಕ್ರಮಕ್ಕೂ ಮುನ್ನ ವಿವಿಧ ದೇಶಗಳ ಸಂಸ್ಕೃತಿ ಬಿಂಬಿಸುವ ನೃತ್ಯ ಪ್ರದರ್ಶನ ಆಕರ್ಷಿಸಿತು. ಅಂತೆಯೇ ಕಾಫಿ ಮಂಡಳಿ ವತಿಯಿಂದ ನಿರ್ಮಿಸಲಾದ ಕಾಫಿ ಬೆಳೆದು ಬಂದ ರೀತಿಯ ಸಾಕ್ಷö್ಯಚಿತ್ರ ಪ್ರದರ್ಶನ ಕೂಡ ಕಾಫಿ ಪ್ರೇಮಿಗಳ ಗಮನ ಸೆಳೆಯಿತು.

ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಸಿ.ಟಿ.ರವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.