ಗೋಣಿಕೊಪ್ಪ ವರದಿ, ಸೆ. ೨೫: ಕರುಂಬಯ್ಯಾಸ್ ಅಕಾಡೆಮಿ ಫಾರ್ ಲರ್ನಿಂಗ್ ಆಂಡ್ ಸ್ಪೋರ್ಟ್ಸ್ ಹಾಗೂ ಎನ್‌ಇಬಿ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟçಮಟ್ಟದ ಕೊಡಗು ಮಾನ್ಸೂನ್ ಹಾಫ್ ಮ್ಯಾರಥಾನ್‌ನಲ್ಲಿ ೨ ಸಾವಿರಕ್ಕೂ ಅಧಿಕ ಓಟಗಾರರು ಭಾಗವಹಿಸಿ ಗಮನ ಸೆಳೆದರು.
ಕ್ಯಾಲ್ಸ್ ಆವರಣದಿಂದ ಕೈಕೇರಿ, ಕಳತ್ಮಾಡ್, ಅಮ್ಮತ್ತಿ ರಸ್ತೆ, ಅತ್ತೂರು, ಪಾಲಿಬೆಟ್ಟ ಗಾಲ್ಫ್ ಮೈದಾನದವರೆಗೆ ನಡೆಯಿತು. ೨೧ ಕಿಲೋ ಮೀಟರ್, ೧೦ ಕಿ. ಮೀ. ಮತ್ತು ೫ ಕಿ. ಮೀ. ಓಟ ನಡೆಯಿತು. ಮುಂಬೈ, ಕೊಲ್ಕತಾ, ದೆಹಲಿ ಸೇರಿದಂತೆ ವಿವಿಧ ಭಾಗಗಳಿಂದ ಸ್ಪರ್ಧಿಗಳು, ಕಿರಿಯರು, ಹಿರಿಯರು ಪಾಲ್ಗೊಂಡರು. ೯ ಪೊಲೀಸ್ ಸಿಬ್ಬಂದಿ ಓಟದಲ್ಲಿ ಪಾಲ್ಗೊಂಡು ಉತ್ಸಾಹ ಹೆಚ್ಚಿಸಿದರು. ಎಲ್ಲ ಸ್ಪರ್ಧಿಗಳಿಗೂ ಮಾನ್ಸೂನ್ ಹಾಫ್ ಮ್ಯಾರಥಾನ್ ಜೆರ್ಸಿ ನೀಡುವ ಮೂಲಕ ಪ್ರೋತ್ಸಾಹಿಸಲಾಯಿತು. ಕ್ಯಾಲ್ಸ್ ಶಾಲಾ ವಿದ್ಯಾರ್ಥಿಗಳು ಕೊಡವ ನೃತ್ಯದ ಮೂಲಕ ರಂಗು ಹೆಚ್ಚಿಸಿದರು. ಕೊಡವ ಉಮ್ಮತ್ತಾಟ್, ಬೊಳಕಾಟ್ ಪ್ರದರ್ಶನ ನಡೆಯಿತು.
ಗೋಣಿಕೊಪ್ಪ-ವೀರಾಜಪೇಟೆ ಹೆದ್ದಾರಿ ಮೂಲಕ ಮ್ಯಾರಥಾನ್ ನಡೆದ ಕಾರಣ, ರಸ್ತೆಯ ಒಂದು ಬದಿಯ ಮೂಲಕ ಓಡಲು ಬ್ಯಾರಿಕೇಡ್ ಇಟ್ಟು ಮುಂಜಾಗೃತೆ ವಹಿಸಲಾಗಿತ್ತು. ಪೊಲೀಸ್ ಇಲಾಖೆ ಮೂಲಕ ವಾಹನ ಸಂಚಾರ, ಓಟಕ್ಕೆ ತೊಡಕಾಗದಂತೆ ಕ್ರಮಕೈಗೊಳ್ಳಲಾಗಿತ್ತು. ವೀರಾಜಪೇಟೆ ಡಿವೈಎಸ್‌ಪಿ ಪಿ. ಮೋಹನ್‌ಕುಮಾರ್ ಧ್ವಜ ಹಾರಿಸುವ ಮೂಲಕ ಉದ್ಘಾಟಿಸಿದರು. ಫೆಡರಲ್ ಬ್ಯಾಂಕ್ ಮುಖ್ಯ ಪ್ರಬಂಧಕ ರಾಜೀವ್, ಟಾಟಾ ಕಾಫಿ ಮುಖ್ಯ ವ್ಯವಸ್ಥಾಪಕ ಎಂ. ಜಿ. ಗಣಪತಿ, ಕ್ಯಾಲ್ಸ್ ಮುಖ್ಯಸ್ಥ ಮನೆಯಪಂಡ ದತ್ತಾ ಕರುಂಬಯ್ಯ, ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ನಿರ್ದೇಶಕಿ ಅಶ್ವಿನಿ ನಾಚಪ್ಪ, ಪ್ರಾಂಶುಪಾಲ ಗೌರಮ್ಮ ನಂಜಪ್ಪ ಬಹುಮಾನ ವಿತರಿಸಿದರು.
ಫಲಿತಾಂಶ: ೨೧ ಕಿ. ಮೀ. ಓಟ ಮಹಿಳಾ ವಿಭಾಗದಲ್ಲಿ ಮಮತಾ ರಾವತ್ (೧೦೬ ನಿಮಿಷ) ಪ್ರಥಮ, ರೋಶಿಕಾ ಚೆಂಗಪ್ಪ (೧೧೫ ನಿ) ದ್ವಿತೀಯ, ೨.೨ ಅವಧಿಯಲ್ಲಿ ಸಿ. ಎಸ್. ವಿದ್ಯಾ (೧೨೫ ನಿ) ತೃತೀಯ, ಪುರುಷರಲ್ಲಿ
(ಮೊದಲ ಪುಟದಿಂದ) ಎಸ್. ಎನ್. ಶ್ರೀಧರ್ (೭೩ ನಿ) ಪ್ರಥಮ, ಅಮರ್‌ಸಿಂಗ್ ದೇವಾನಂದ್ (೭೪ ನಿ) ದ್ವಿತೀಯ, ಎಸ್. ಲಕ್ಷö್ಮಣ (೮೧ ನಿ) ತೃತೀಯ ಸ್ಥಾನ ಪಡೆದರು. ೧೦ ಕಿ. ಮೀ. ಓಟ ಮಹಿಳಾ ವಿಭಾಗದಲ್ಲಿ ಕೆ. ಟಿ. ಚೋಂದಮ್ಮ(೪೭ನಿ) ಪ್ರಥಮ, ಕೆ. ಎಸ್. ಕೃಪಾ (೫೯ ನಿ) ದ್ವಿತೀಯ, ನಿಧಿ ಬಾಲಸುಬ್ರಮಣ್ಯ (೬೧ ನಿ) ತೃತೀಯ, ಪುರುಷರಲ್ಲಿ ಎಂ. ನಿತಿನ್ (೩೩ ನಿ) ಪ್ರಥಮ, ಎ. ಟಿ. ಚೆಂಗಪ್ಪ (೩೪ನಿ) ದ್ವಿತೀಯ, ಎನ್ ಭಾವೇಶ್ (೪೩ ನಿ) ತೃತೀಯ ಸ್ಥಾನ ಪಡೆದರು.