ಇಂದು ಬೆಂಗಳೂರು ಬಂದ್ - ಸೆಕ್ಷನ್ ೧೪೪ ಜಾರಿ
ಬೆಂಗಳೂರು, ಸೆ. ೨೫: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ತಾ. ೨೬ ರಂದು (ಇಂದು) ಬೆಂಗಳೂರು ಸಂಪೂರ್ಣ ಬಂದ್ ಕರೆ ನೀಡಲಾಗಿದೆ. ಅಲ್ಲದೆ ಶುಕ್ರವಾರ ರಾಜ್ಯ ಬಂದ್ಗೂ ಕರೆ ನೀಡಲಾಗಿದೆ. ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಬೆಂಗಳೂರು ಬಂದ್ಗೆ ಕರೆ ನೀಡಲಾಗಿದ್ದು, ಹಲವು ರೈತ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ. ಬಂದ್ ಹಿನೆÀ್ನಲೆಯಲ್ಲಿ ಬೆಂಗಳೂರು ನಗರದ ಎಲ್ಲಾ ಶಾಲೆಗಳಿಗೆ ನಾಳೆ ರಜೆ ಘೋಷಿಸಲಾಗಿದೆ. ಮಕ್ಕಳ ಸುರಕ್ಷತೆ, ರಕ್ಷಣೆ ದೃಷ್ಟಿಯಿಂದ ರಜೆ ಘೋಷಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ. ಇನ್ನು ‘ಕರ್ನಾಟಕ ಜಲ ಸಂರಕ್ಷಣಾ ಸಮಿತಿ’, ರೈತ ಸಂಘಟನೆಗಳು ಮತ್ತು ಇತರ ಸಂಘಟನೆಗಳನ್ನು ಒಳಗೊಂಡ ‘ಕನ್ನಡ ಒಕ್ಕೂಟ’ ಬ್ಯಾನರ್ ಅಡಿಯಲ್ಲಿ ತಾ. ೨೯ ರಂದು ಕರ್ನಾಟಕ ಬಂದ್ಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರೆ ನೀಡಲಾಗಿದೆ. ಎರಡು ಬಂದ್ಗಳು ರೈತರು ಮತ್ತು ಕನ್ನಡ ಪರ ಸಂಘಟನೆಗಳ ನಡುವಿನ ಭಿನ್ನಾಭಿಪ್ರಾಯವನ್ನು ಪ್ರತಿಬಿಂಬಿಸುತ್ತಿವೆ. ಬೆಂಗಳೂರು ಬಂದ್ ಮಾಡುತ್ತೇವೆ ಎಂದು ಶಾಂತಕುಮಾರ್ ಅವರು ಹೇಳಿದ್ದರೆ, ಶುಕ್ರವಾರ ರಾಜ್ಯ ಬಂದ್ಗೆ ಕರೆ ನೀಡಿರುವ ವಾಟಾಳ್ ನಾಗರಾಜ್ ಅವರು ಇಂದಿನ ಬಂದ್ಗೆ ಕನ್ನಡ ಒಕ್ಕೂಟ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಲವಂತದ ಬಂದ್ಗೆ ಅವಕಾಶ ನೀಡುವುದಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಸೋಮವಾರ ಎಚ್ಚರಿಕೆ ನೀಡಿದ್ದಾರೆ. ಬಂದ್ ವಿಚಾರವಾಗಿ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಆಯುಕ್ತರು, ಬಲವಂತದ ಬಂದ್ಗೆ ಅವಕಾಶ ಇಲ್ಲ. ಇಂದು ಮಧ್ಯರಾತ್ರಿಯಿಂದ ಮಂಗಳವಾರ ಮಧ್ಯರಾತ್ರಿ ವರೆಗೆ ಬೆಂಗಳೂರು ನಗರದಾದ್ಯಂತ ಸೆಕ್ಷನ್ ೧೪೪ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಮೋದಿ ಮಧ್ಯ ಪ್ರವೇಶಕ್ಕೆ ಹೆಚ್.ಡಿ.ಡಿ. ಪತ್ರ
ಬೆಂಗಳೂರು, ಸೆ. ೨೫: ಕಾವೇರಿ ಜಲ ವಿವಾದಕ್ಕೆ ಸಂಬAಧಪಟ್ಟAತೆ ಈಗ ಏನು ವಾಸ್ತವಾಂಶ ಇದೆಯೋ ಅದರ ಆಧಾರದ ಮೇಲೆ ಕೇಂದ್ರ ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕಬೇಕು. ಅರ್ಜಿ ಹಾಕಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡಬೇಕು ಎಂದು ಮಾಜಿ ಪಿಎಂ ಎಚ್.ಡಿ ದೇವೇಗೌಡ ಆಗ್ರಹಿಸಿದ್ದಾರೆ. ಇನ್ನು ಈ ಬಗ್ಗೆ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಕಾವೇರಿ ನದಿ ನೀರು ವಿವಾದದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಮನವಿ ಮಾಡಿದ್ದಾರೆ.
ವಾಯುಸೇನೆಗೆ ಸಿ-೨೯೫ ವಿಮಾನ ಸೇರ್ಪಡೆ
ನವದೆಹಲಿ, ಸೆ. ೨೫: ಭಾರತೀಯ ವಾಯುಪಡೆಯ ಬಲ ದ್ವಿಗುಣಗೊಂಡಿದೆ. ಇಂದು ಸಿ-೨೯೫ ಸಾರಿಗೆ ವಿಮಾನವನ್ನು ಔಪಚಾರಿಕವಾಗಿ ವಾಯುಪಡೆಗೆ ಸೇರಿಸಲಾಯಿತು. ಘಾಜಿಯಾಬಾದ್ನ ಹಿಂಡನ್ ಏರ್ಬೇಸ್ನಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ವಿಮಾನವನ್ನು ವಾಯುಪಡೆಗೆ ಹಸ್ತಾಂತರಿಸಿದರು.
ಪಿ.ಎಫ್.ಐ. ಮಾಜಿ ನಾಯಕರ ಮನೆಗಳ ಮೇಲೆ ಇ.ಡಿ. ದಾಳಿ
ನವದೆಹಲಿ, ಸೆ. ೨೫: ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾದ (ಪಿಎಫ್ಐ) ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬAಧಿಸಿದAತೆ ಜಾರಿ ನಿರ್ದೇಶನಾಲಯವು(ಇ.ಡಿ) ವಯನಾಡ್, ಕೋಯಿಕ್ಕೋಡ್ ಸೇರಿದಂತೆ ಕೇರಳದ ೧೨ ಕಡೆಗಳಲ್ಲಿ ದಾಳಿ ನಡೆಸಿದೆ. ಸಂಘಟನೆಗೆ ಸಂಬAಧಿಸಿದ ಸ್ಥಳಗಳು, ಮಾಜಿ ನಾಯಕರ ಮನೆಗಳಲ್ಲಿ ಶೋಧ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಕಾನೂನುಬಾಹಿರ ಚಟುವಟಿಕೆ ಆರೋಪದಡಿ ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಪಿಎಫ್ಐ ಸಂಘಟನೆಯನ್ನು ನಿಷೇಧಿಸಲಾಗಿತ್ತು. ಸಂಘಟನೆಯ ಹಲವು ನಾಯಕರನ್ನು ಬಂಧಿಸಲಾಗಿತ್ತು.
ಭಾರತ ಜೊತೆಗಿನ ಪಾಲುದಾರಿಕೆ ಮುಂದುವರಿಕೆ - ಕೆನಾಡ ಸಚಿವ
ಒಟ್ಟಾವ, ಸೆ. ೨೫: ಭಾರತ ಮತ್ತು ಕೆನಡಾ ಜೊತೆಗಿನ ರಾಜತಾಂತ್ರಿಕ ಸಂಬAಧ ಹದಗೆಟ್ಟಿರುವ ನಡುವೆ ಭಾರತದೊಂದಿಗಿನ ಸಂಬAಧ ಅತ್ಯಂತ ಪ್ರಮುಖ ಎಂದು ಬಣ್ಣಿಸಿರುವ ಕೆನಡಾದ ರಕ್ಷಣಾ ಸಚಿವ ಬಿಲ್ ಬೇರ್, ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆಯ ತನಿಖೆ ಮುಂದುವರಿದಿದ್ದು, ಇಂಡೋ-ಪೆಸಿಫಿಕ್ ಕಾರ್ಯತಂತ್ರದAತಹ ಪಾಲುದಾರಿಕೆಯನ್ನು ತಮ್ಮ ದೇಶವು ಮುಂದುವರಿಸುತ್ತದೆ ಎಂದು ಹೇಳಿದ್ದಾರೆ. ಭಾನುವಾರ ಪ್ರಸಾರವಾದ ಸಂದರ್ಶನವೊAದರಲ್ಲಿ ಬೇರ್ ಅವರು, ಭಾರತದೊಂದಿಗಿನ ಕೆನಡಾ ಸಂಬAಧವನ್ನು ಅತ್ಯಂತ ಪ್ರಮುಖ ಎಂದು ಕರೆದರು. ನಿಜ್ಜರ್ ಹತ್ಯೆ ಕುರಿತ ಆರೋಪಗಳ ತನಿಖೆ ನಡೆಯುತ್ತಿದ್ದು, ಕೆನಡಾವು ಭಾರತದ ಜೊತೆಗಿನ ಪಾಲುದಾರಿಕೆಗಳನ್ನು ಮುಂದುವರಿಸಲಿದೆ. ಭಾರತದೊಂದಿಗಿನ ನಮ್ಮ ಬಾಂಧವ್ಯಕ್ಕೆ ಸಂಬAಧಿಸಿದAತೆ ಇದು ಸವಾಲಿನ ಸಮಸ್ಯೆಯಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ' ಎಂದು ಉಲ್ಲೇಖಿಸಿದ್ದಾರೆ.
ತಮಿಳುನಾಡಿನಲ್ಲಿಯೂ ಕಾವೇರಿಗಾಗಿ ಹೋರಾಟ
ತಿರುಚಿ, ಸೆ. ೨೫: ತಮಿಳುನಾಡಿನಲ್ಲಿಯೂ ಕಾವೇರಿ ಹೋರಾಟ ತೀವ್ರಗೊಂಡಿದೆ. ತಮ್ಮ ರಾಜ್ಯಕ್ಕೆ ನದಿ ನೀರು ಬಿಡುವಂತೆ ಒತ್ತಾಯಿಸಿ ತಿರುಚ್ಚಿಯ ರೈತರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಕರ್ನಾಟಕವನ್ನು ಒತ್ತಾಯಿಸಿದರು. ಮಾನವನ ಆಸ್ಥಿ ಪಂಜರ, ತಲೆಬುರುಡೆ ಇಟ್ಟುಕೊಂಡು ಅರೆಬೆತ್ತಲೆ ಪ್ರತಿಭಟನೆ ನಡೆಸಿದ ರೈತರು, ಕರ್ನಾಟಕ ಸದ್ಯ ಹರಿಸುತ್ತಿರುವ ಕಾವೇರಿ ನೀರು ನಮ್ಮ ಬೆಳೆಗೆ ಸಾಕಾಗುತ್ತಿಲ್ಲ. ಇನ್ನೂ ಹೆಚ್ಚಿನ ನೀರು ಹರಿಸಬೇಕೆಂದು ಆಗ್ರಹಿಸಿದರು.
ಮಸೀದಿ ಮೇಲೆ ಭಗವಾಧ್ವಜ ಹಾರಿಸಿದವರ ಬಂಧನ
ಬೀದರ್, ಸೆ. ೨೫: ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಧನ್ನೂರ (ಕೆ) ಗ್ರಾಮದ ಮಸೀದಿಯೊಂದರ ಮೇಲೆ ಭಗವಾಧ್ವಜ ಹಾರಿಸಿ ನಾಪತ್ತೆಯಾಗಿದ್ದ ನಾಲ್ವರನ್ನು ಬಸವಕಲ್ಯಾಣ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಭಗವಾಧ್ವಜ ತೆರವುಗೊಳಿಸಿ ಪ್ರಕರಣ ದಾಖಲಿಸಿಕೊಂಡು ಕೃತ್ಯ ಎಸಗಿದ ಅದೇ ಗ್ರಾಮದ ಅಭಿಷೇಕ, ಕಲ್ಯಾಣಿ, ಸುಶೀಲ್ ಹಾಗೂ ವೀರೇಶ ಬಿರಾದಾರ ಎಂದು ಗುರುತಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಷ್ಯನ್ ಗೇಮ್ಸ್ : ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಜಯ
ಹ್ಯಾಂಗ್ ಝೌ, ಸೆ. ೨೫: ಏಷ್ಯನ್ ಗೇಮ್ಸ್ ಮಹಿಳಾ ಟಿ-೨೦ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ ಮಹಿಳಾ ತಂಡ ಐತಿಹಾಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ನಡೆದ ಮಹಿಳಾ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಭಾರತ ತಂಡ ೧೯ರನ್ ಗಳ ಅಂತರದಲ್ಲಿ ಮಣಿಸಿ ಮೊದಲ ಬಾರಿಗೆ ಚಿನ್ನದ ಪದಕ ಪಡೆದುಕೊಂಡಿದೆ.