ಕೂಡಿಗೆ, ಸೆ. ೨೩: ಕೊಡಗು ವಿಶ್ವವಿದ್ಯಾಲಯದ ಜ್ಞಾನಕಾವೇರಿ ಕ್ಯಾಂಪಸ್‌ನ ಕಾವೇರಿ ಸಭಾಂಗಣದಲ್ಲಿ ಅಂರ‍್ರಾಷ್ಟಿçÃಯ ಪ್ರಜಾಪ್ರಭುತ್ವ ದಿನಾ ಚರಣೆ ಅಂಗವಾಗಿ ಭಾರತ ಸಂವಿಧಾನ ಪೀಠಿಕೆಯನ್ನು ಕುಲ ಸಚಿವರಾದ ಡಾ. ಸೀನಪ್ಪ ಅವರು ಬೋಧಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತೀಯ ರಾದ ನಾವು ಭಾರತವನ್ನು ಸಾರ್ವ ಭೌಮ, ಸಮಾಜವಾದಿ, ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವ ನಿಟ್ಟಿನಲ್ಲಿ ನ್ಯಾಯ, ಭ್ರಾತೃತ್ವ ಮತ್ತು ವ್ಯಕ್ತಿ ಗೌರವವನ್ನು ಅರಿತು ಎತ್ತಿ ಹಿಡಿಯಲು ಸಂವಿಧಾ ನದ ಪ್ರಸ್ತಾವನೆಯನ್ನು ಅನು ದಿನವೂ ಓದಿ ಅದನ್ನು ಅರ್ಥೈಸಿಕೊಳ್ಳುವುದು ಅತ್ಯಂತ ಅನಿವಾರ್ಯವಾಗಿದೆ ಎಂದರು. ಸಂಸ್ಥೆಯ ಪ್ರಭಾರ ನಿರ್ದೇಶಕರಾದ ಪ್ರೊ. ಕೆ.ಕೆ. ಧರ್ಮಪ್ಪ ಅವರು ಮಾತನಾಡಿ ಪ್ರಜಾಪ್ರಭುತ್ವ ದಿನದ ಮಹತ್ವವನ್ನು ತಿಳಿಸುತ್ತಾ ಆಧುನಿಕ ಪ್ರಪಂಚದಲ್ಲಿ ಪ್ರಜಾಪ್ರಭುತ್ವದ ತತ್ವಗಳಾದ ನ್ಯಾಯ, ಸ್ವಾತಂತ್ರö್ಯ, ಸಮಾನತೆ ಮತ್ತು ಭ್ರಾತೃತ್ವಗಳನ್ನು ಎತ್ತಿ ಹಿಡಿಯುವ ಸಲುವಾಗಿಯೇ ಮತ್ತು ಈಗಿನ ಯುವ ಜನಾಂಗಕ್ಕೆ ಮೌಲ್ಯ ಗಳ ಅರಿವನ್ನು ಉಂಟು ಮಾಡು ವುದು ಇದರ ಉದ್ದೇಶವೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.