ನಾಪೋಕ್ಲು: ಗೌರಿಗಣೇಶೋತ್ಸವದ ಅಂಗವಾಗಿ ಪಟ್ಟಣದ ವಿವಿಧ ಗಣೇಶ ಸೇವಾ ಸಮಿತಿಗಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿಗಣೇಶ ಮೂರ್ತಿಗಳನ್ನು ಶನಿವಾರ ಅದ್ಧೂರಿ ಶೋಭಾಯಾತ್ರೆ ಮೂಲಕ ವಿಸರ್ಜಿಸಲಾಯಿತು.
ಇಲ್ಲಿನ ಇಂದಿರಾನಗರದ ವಿವೇಕಾನಂದ ಸೇವಾಸಮಿತಿ, ರಾಮಟ್ರಸ್ಟ್ ಗಣೇಶೋತ್ಸವ ಸಮಿತಿ, ಪೊನ್ನುಮುತ್ತಪ್ಪ ದೇವಾಲಯದ ವಿನಾಯಕ ಸೇವಾ ಸಮಿತಿ, ನಾಪೋಕ್ಲು ನಾಡು ಗೌರಿಗಣೇಶ ಸಮಿತಿ ಹಾಗೂ ಕಕ್ಕುಂದಕಾಡಿನ ಗಣೇಶೋತ್ಸವ ಸೇವಾಸಮಿತಿ ಅದ್ಧೂರಿ ಮೆರವಣಿಗೆಯಲ್ಲಿ ಉತ್ಸವ ಮೂರ್ತಿಗಳನ್ನು ಅಲಂಕೃತ ವಾಹನಗಳಲ್ಲಿ ಕೊಂಡೊಯ್ದು ಸಂಜೆ ವಿಸರ್ಜಿಸಲಾಯಿತು.
ಗೌರಿಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭ ವಿವಿಧ ಸೇವಾ ಸಮಿತಿಗಳು ಆಯೋಜಿಸಿದ್ದ ಮನೋರಂಜನಾ ಕಾರ್ಯಕ್ರಮದಲ್ಲಿ ಪುತ್ತೂರಿನ ಶಬರಿ ತಂಡದವರಿAದ ನಾಸಿಕ್ ಬ್ಯಾಂಡ್, ಶ್ರೀ ಶಾರದಾ ಆರ್ಟ್ಸ್ ಜನಪದ ಗೊಂಬೆ ಬಳಗದಿಂದ ವಿವಿಧ ಆಕರ್ಷಕ ಕೀಲು ಬೊಂಬೆಯಾಟ, ವಿಟ್ಲ ತಂಡದವರಿAದ ಬೃಹತ್ ಗಾತ್ರದ ಆಂಜನೇಯ, ಚಲಿಸುವ ಮೂರ್ತಿಗಳೊಂದಿಗೆ ವಿಭಿನ್ನ ರೀತಿಯಲ್ಲಿ ವಿಘ್ನೇಶ್ವರನ ಕಥಾ ಸಂಕಲನ, ಸಿಡಿಮದ್ದಿನ ಚಿತ್ತಾರ, ವಿಶೇಷ ಅಲಂಕೃತ ಮಂಟಪಗಳೊAದಿಗೆ ಮಹಿಳೆಯರು ಮಕ್ಕಳಾದಿಯಾಗಿ ಸಾರ್ವಜನಿಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಮೆರವಣಿಗೆ ಸಂದರ್ಭ ಪಟ್ಟಣದಲ್ಲಿ ವಿಘ್ನೇಶನಿಗೆ ನೂರಾರು ಈಡುಗಾಯಿ ಒಡೆಯಲಾಯಿತು. ವಿವಿಧ ಉತ್ಸವ ಸಮಿತಿಯ ಪದಾಧಿಕಾರಿಗಳು ಸದಸ್ಯರು, ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಪಟ್ಟಣದಲ್ಲಿ ಅದ್ಧೂರಿ ಮೆರವಣಿಗೆ ನಡೆದು ರಾತ್ರಿ ಕಾವೆರಿ ನದಿಯಲ್ಲಿ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಈ ಸಂದರ್ಭ ಡಿವೈಎಸ್ಪಿ ಜಗದೀಶ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಮಾಲಂಬಿ: ಮಾಲಂಬಿಯ ಶ್ರೀ ವಿನಾಯಕ ಸೇವಾ ಸಮಿತಿಯ ೧೧ನೇ ವರ್ಷದ ಗೌರಿ ಗಣಪತಿ ವಿಸರ್ಜನೆಯ ಮೆರವಣಿಗೆಯು ಮಾಲಂಬಿಯ ಮುಖ್ಯಬೀದಿಯಿಂದ ಪ್ರಾರಂಭವಾಗಿ ಕೂಡುರಸ್ತೆ ಮಾರ್ಗವಾಗಿ ಕನ್ನಂಬಾಡಿಯಮ್ಮ ದೇವಸ್ಥಾನ ರಸ್ತೆಯಲ್ಲಿ ಬಂದು ಹೊಸಬುತ್ತಿ ಮಾರ್ಗದಲ್ಲಿರುವ ಬಾಲಗೆರೆ ಕೆರೆಗೆ ಗಣಪತಿ ವಿಸರ್ಜನೆ ಮಾಡಲಾಯಿತು.
ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬಸವನಹಳ್ಳಿಯಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯ ವಿಸರ್ಜನೆ ಅದ್ಧೂರಿಯಾಗಿ ನಡೆಯಿತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭ ಗ್ರಾಮದ ಅಧಿಕ ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯುದ್ದಕ್ಕೂ ಡಿ.ಜೆ ವಾದ್ಯಗೋಷ್ಠಿಗೆ ಜನರು ಕುಣಿದು ಕುಪ್ಪಳಿಸಿದರು. ನಂತರ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಮುಳ್ಳೂರು: ಸಮೀಪದ ಮಾಲಂಬಿ ವ್ಯಾಪ್ತಿಯ ಕಣಿವೆ ಬಸವನಹಳ್ಳಿ ಗ್ರಾಮದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಗ್ರಾಮದ ಗೌರಿ ಗಣೇಶ ಸೇವಾ ಸಮಿತಿ ವತಿಯಿಂದ ಗೌರಿ, ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಹಬ್ಬದ ಪ್ರಯುಕ್ತ ಗೌರಿ ಗಣೇಶ ಸೇವಾ ಸಮಿತಿ ವತಿಯಿಂದ ಗ್ರಾಮದ ಪುರುಷರು, ಮಹಿಳೆಯರು, ಯುವಕರು, ಯುವತಿಯರು ಮತ್ತು ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ಗ್ರಾಮಸ್ಥರು ಹುರುಪಿನಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಹಬ್ಬದ ಪ್ರಯುಕ್ತ ಸೇವಾ ಸಮಿತಿ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು.
ಗಣೇಶೋತ್ಸವ ಸಮಿತಿಗೆ ಪರಿಕರಗಳ ಕೊಡುಗೆ
ಮಡಿಕೇರಿ : ಕತ್ತಲೆಕಾಡುವಿನ ವಿನಾಯಕ ಭಕ್ತ ವೃಂದ ಗಣೇಶೋತ್ಸವ ಸಮಿತಿಗೆ ಗ್ರಾಮಸ್ಥರು ಹಾಗೂ ದಾನಿಗಳು ವಿವಿಧ ಪರಿಕರಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಈ ಬಾರಿ ೧೭ನೇ ವರ್ಷದ ಗೌರಿ ಗಣೇಶೋತ್ಸವ ಆಚರಿಸುತ್ತಿದ್ದು, ಪೂಜಾ ಕಾರ್ಯ ಹಾಗೂ ಇನ್ನಿತರೆ ಚಟುವಟಿಕೆಗಳಿಗೆ ಅಂದಾಜು ೧ ಲಕ್ಷ ರೂ. ಮೊತ್ತದ ಪರಿಕರಗಳು ಕೊಡುಗೆ ರೂಪದಲ್ಲಿ ಬಂದಿದೆ. ಪ್ರತಿ ವರ್ಷ ವಸ್ತುಗಳನ್ನು ಬಾಡಿಗೆಗೆ ಪಡೆದುಕೊಳ್ಳಲಾಗುತ್ತಿತ್ತು. ಇದೀಗ ಹಲವು ಅಗತ್ಯ ವಸ್ತುಗಳು ಸಮಿತಿಯ ಸಂಗ್ರಹದಲ್ಲಿರುವುದರಿAದ ಗಣೇಶೋತ್ಸವ ಹಾಗೂ ಮುಂದಿನ ದಿನದಲ್ಲಿ ಜರುಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಇವುಗಳನ್ನು ಬಳಸಿಕೊಳ್ಳಲಾಗುವುದು ಎಂದು ಸಮಿತಿಯ ಅಧ್ಯಕ್ಷ ಎಂ.ಎಸ್. ಅಶೋಕ್, ಕಾರ್ಯದರ್ಶಿ ಬ್ರಿಜೇಶ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಮೈಸೂರಿನಿಂದ ಅಡುಗೆ ಪಾತ್ರೆ, ಗ್ಯಾಸ್ ಸ್ಟೌ, ಚೇರ್, ಟೇಬಲ್, ಪೂಜಾ ಸಾಮಾಗ್ರಿ ಸೇರಿದಂತೆ ವಿವಿಧ ವಸ್ತುಗಳ ಖರೀದಿಸಲಾಯಿತು. ಈ ಸಂದರ್ಭ ಬ್ರಿಜೇಶ್ ರೈ, ಹೊನ್ನಪ್ಪ ಆಚಾರ್ಯ, ಸತೀಶ್ ರೈ ಇದ್ದರು. ಕೊಡುಗೆ ನೀಡಿದ ದಾನಿಗಳಿಗೆ ಧನ್ಯವಾದ ಅರ್ಪಿಸಿರುವ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಮುಂದಿನ ದಿನದಲ್ಲಿ ಹಮ್ಮಿಕೊಳ್ಳಲಾಗುವ ಅಭಿವೃದ್ಧಿ ಕಾರ್ಯಗಳಿಗೂ ನೆರವಾಗುವಂತೆ ಕೋರಿದ್ದಾರೆ.
ಮಡಿಕೇರಿ : ಕಗ್ಗೋಡ್ಲು ಗ್ರಾಮದ ಹೂಕಾಡುವಿನಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ೧೮ನೇ ವರ್ಷದ ಗಣೇಶೋತ್ಸವ ಸಂಭ್ರಮದಿAದ ಜರುಗಿತು.
ಪೂಜಾ ಕಾರ್ಯದ ಬಳಿಕ ಶೋಭಾಯಾತ್ರೆಗೂ ಮುನ್ನ ಗ್ರಾಮದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಿತಿ ಅಧ್ಯಕ್ಷ ಉಮೇಶ್ ರೈ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೈನಿಕರಾದ ಮಂದ್ರೀರ ಉಮೇಶ್, ಬಿ.ಜೆ. ಭರತ್ ಪೂಜಾರಿ, ಮಾಜಿ ಸೈನಿಕ ಹಗರಿಮನೆ ಮೇ. ವಾಸಪ್ಪ, ದಾನಿಗಳಾದ ದಿವಾಕರ ರೈ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗಾಗಿ ಶ್ವೇತಾ ಎಂ.ವಿ., ವಿವೇಕ್ ಎಂ.ವಿ., ತನಿಷ್ಕಾ ರೈ, ಅಮೃತ ಎಂ., ಅವರನ್ನು ಸಮಿತಿ ಹಾಗೂ ಗ್ರಾಮದ ಪ್ರಮುಖರು ಸನ್ಮಾನಿಸಿದರು.
ಕಾರ್ಯದರ್ಶಿ ಕೆ.ಆರ್. ಸತೀಶ್ ನಿರೂಪಿಸಿದರು. ಉಪಾಧ್ಯಕ್ಷ ಸುರೇಶ್(ರಾಜು), ಖಜಾಂಚಿ ಗಣಪತಿ, ಸುರೇಶ್ ಮುಂತಾದವರು ಈ ಸಂದರ್ಭ ಇದ್ದರು. ಬಳಿಕ ಶೋಭಾಯಾತ್ರೆ ಮೂಲಕ ಉತ್ಸವ ಮೂರ್ತಿಯನ್ನು ಕೊಂಡೊಯ್ದು ಸ್ಥಳೀಯ ಹೊಳೆಯಲ್ಲಿ ವಿಸರ್ಜಿಸಲಾಯಿತು.ಐಗೂರು: ಐಗೂರಿನ ಏಕದಂತ ವಿನಾಯಕ ಸೇವಾ ಸಮಿತಿ ವತಿಯಿಂದ ಗಣೇಶ ಮೂರ್ತಿ ವಿಸರ್ಜನೆ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಅನ್ನದಾನ ಏರ್ಪಡಿಸಲಾಗಿತ್ತು.
ಸಂಜೆ ಮಹಾಪೂಜೆ ನೆರವೇರಿಸಿ ಗೌರಿಗಣೇಶ ಉತ್ಸವ ಮೂರ್ತಿಯ ಭವ್ಯ ಮಂಟಪದಲ್ಲಿ ಸುಳ್ಯದ ನಾಸಿಕ್ ಬ್ಯಾಂಡ್, ಮಂಗಳೂರಿನ ಡಿಜೆ ಸೌಂಡ್ಸ್ನೊAದಿಗೆ ಮೆರವಣಿಗೆ ಹೊರಟು ಕಾಜೂರು ಜಂಕ್ಷನ್ನಿAದ ವಾಪಸ್ ಬಂದು ಚೋರನ ಹೊಳೆಯಲ್ಲಿ ವಿಸರ್ಜಿಸಲಾಯಿತು.
ಸುಂಟಿಕೊಪ್ಪ: ಕೆದಕಲ್ ಗ್ರಾಮ ಪಂಚಾಯಿತಿಯ ಸಾರ್ವಜನಿಕ ಶ್ರೀ ಗೌರಿಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಹೊರೂರು ಮಠದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಶ್ರೀಗೌರಿ ಹಾಗೂ ಗಣೇಶ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಉತ್ಸವದ ಅಂಗವಾಗಿ ವಿಶೇಷ ಪೂಜೆ, ಮಹಾಪೂಜೆ ಮಂಗಳಾರತಿ, ಅನ್ನದಾನ ನಂತರ ೪ಗಂಟೆಗೆ ವಿದ್ಯುತ್ ದೀಪ ಅಲಂಕೃತ ಮಂಟಪದಲ್ಲಿ ಗೌರಿಗಣೇಶೋತ್ಸವ ಮೂರ್ತಿಗಳನ್ನು ಗ್ರಾಮದಲ್ಲಿ ಮೆರವಣಿಗೆ ನಡೆಸಿ ನಂತರ ತೋಟದ ಕೆರೆಯಲ್ಲಿ ವಿಸರ್ಜಿಸಲಾಯಿತು. ಸಮಿತಿ ಅಧ್ಯಕ್ಷರು ಕಾರ್ಯಕಾರಿ ಮಂಡಳಿಯವರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಶನಿವಾರಸAತೆ: ಸಮೀಪದ ಒಡೆಯನಪುರ ಗ್ರಾಮದಲ್ಲಿ ಶ್ರೀ ಮಂಜುನಾಥ ಯುವಕ ಸಂಘದ ವತಿಯಿಂದ ನಡೆದ ೧೫ ನೇ ವರ್ಷದ ಶ್ರೀಗೌರಿ-ಗಣೇಶೋತ್ಸವದ ಪ್ರಯುಕ್ತ ಗ್ರಾಮದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಸ್ಪರ್ಧೆಯಲ್ಲಿ ಭಾಗ್ಯ ರಮೇಶ್ ಪ್ರಥಮ, ಸೌಮ್ಯ ಗಿರೀಶ್ ದ್ವಿತೀಯ ಹಾಗೂ ಮಮತಾ ಉಮೇಶ್ ತೃತೀಯ ಸ್ಥಾನ ಪಡೆದುಕೊಂಡರು. ತೀರ್ಪುಗಾರರಾಗಿ ಸಾಹಿತಿ ಶ.ಗ.ನಯನತಾರಾ ಹಾಗೂ ಶಿಕ್ಷಕಿ ಜ್ಯೋತಿನಿರಂಜನ್ ಕಾರ್ಯನಿರ್ವಹಿಸಿದರು.
ನಂತರ ನಡೆದ ಸರಳ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಮಂಜುನಾಥ ಯುವಕ ಸಂಘದ ಅಧ್ಯಕ್ಷ ವಿ.ವಿ. ಲತೇಶ್ ವಹಿಸಿದ್ದರು. ಸಾಹಿತಿ ನಯನತಾರಾ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ರಂಗೋಲಿಯೂ ಒಂದು ಸಾಂಪ್ರದಾಯಿಕ ಕಲೆಯಾಗಿದೆ. ಹಬ್ಬಹರಿದಿನಗಳಲ್ಲಿ ದೇವರ ಉತ್ಸವಗಳಲ್ಲಿ ರಂಗೋಲಿಗೆ ಪ್ರಾಶಸ್ತö್ಯವಿದೆ. ಚುಕ್ಕಿ ಇಟ್ಟು, ಗೆರೆ ಎಳೆದು, ಬಣ್ಣ ತುಂಬಿ ಬಿಡಿಸುವ ವೈವಿಧ್ಯಮಯ ಚಿತ್ತಾರದ ರಂಗೋಲಿ ಹೆಣ್ಣುಮಕ್ಕಳ ಬದುಕಿನಲ್ಲಿ ಪ್ರತಿನಿತ್ಯ ಆರಂಭದ ದಿನಚರಿಯಾಗಿದೆ ಎಂದರು.
ಮುಖ್ಯ ಅತಿಥಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸಿ.ಎಲ್ ಸುಬ್ಬಯ್ಯ ರಂಗೋಲಿ ಹಾಗೂ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿದರು. ಸಂಘದ ಕಾರ್ಯದರ್ಶಿ ನಿಶಾಂತ್, ಖಜಾಂಚಿ ಯೋಗ ಶಿಕ್ಷಕ ಸುರೇಶ್ ಮೊಗೇರ, ಸದಸ್ಯರು, ಪತ್ರಕರ್ತ ಪ್ರಕಾಶ್ಚಂದ್ರ, ಶಿಕ್ಷಕಿ ಜ್ಯೋತಿ, ಗ್ರಾಮ ಮುಖಂಡರು ಹಾಜರಿದ್ದರು. ಕುಶಾಲನಗರ: ಕುಶಾಲನಗರ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ವಾಸವಿ ಯುವಜನ ಸಂಘದ ವತಿಯಿಂದ ೧೦೧ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.
ಆರ್ಯವೈಶ್ಯ ಮಂಡಳಿ ಮತ್ತು ವಾಸವಿ ಯುವತಿಯರ ಸಂಘದ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ವಿಶೇಷ ರಂಗ ಪೂಜೆ ಹಮ್ಮಿಕೊಳ್ಳಲಾಯಿತು. ಅರ್ಚಕರಾದ ಗಿರೀಶ್ ಭಟ್, ಯೋಗೇಶ್ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು. ವಾಸವಿ ಯುವಜನ ಸಂಘದ ಅಧ್ಯಕ್ಷ ಕೆ ಪ್ರವೀಣ್ ಉಪಾಧ್ಯಕ್ಷರಾದ ವೈಶಾಕ್, ಬಾಲಾಜಿ ಕಾರ್ಯದರ್ಶಿ ಅಂಜನ್, ಪ್ರಹ್ಲಾದ್ ಮತ್ತು ಆರ್ಯವೈಶ್ಯ ಮಂಡಳಿಯ ಅಧ್ಯಕ್ಷರಾದ ಉದಯಕುಮಾರ್, ಪದಾಧಿಕಾರಿಗಳು, ವಾಸವಿ ಯುವತಿಯರ ಸಂಘದ ಪದಾಧಿಕಾರಿಗಳು ಇದ್ದರು.