ಮಡಿಕೇರಿ, ಸೆ. ೨೪: ಅಂಚೆ ಇಲಾಖೆಯ ವಿವಿಧ ಯೋಜನೆಗಳನ್ನು ಜನರಿಗೆ ಒಂದೇ ವೇದಿಕೆಯಲ್ಲಿ ಒದಗಿಸಲು ಕೊಡಗು ಅಂಚೆ ವಿಭಾಗವು ಅಂಚೆ ಜನಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಕುಶಾಲನಗರ ಅಂಚೆ ಕಚೇರಿಯ ಆವರಣದಲ್ಲಿ ತಾ.೧೬ರಂದು ಹಮ್ಮಿಕೊಂಡಿತ್ತು.

ಕರ್ನಾಟಕ ಅಂಚೆ ವಲಯದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಎಸ್. ಹಾಗೂ ಕೂಡಿಗೆ ಸೈನಿಕ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್‌ಜೀತ್ ಸಿಂಗ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದು, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಲ್ ಅಮರ್ ಜೀತ್ ಸಿಂಗ್ ಅವರು ಅಂಚೆ ಇಲಾಖೆಯೊಂದಿಗೆ ಅವರಿಗಿದ್ದ ಭಾವನಾತ್ಮಕ ಕ್ಷಣಗಳನ್ನು ಹಂಚಿಕೊAಡರು. ರಾಜೇಂದ್ರ ಕುಮಾರ್ ಅವರು ಅಂಚೆ ಇಲಾಖೆಯ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಸುಮಾರು ೫೦೦ಕ್ಕೂ ಹೆಚ್ಚು ಮಂದಿ ಅಂಚೆ ಇಲಾಖೆಯ ವಿವಿಧ ಯೋಜನೆಗಳ ಲಾಭವನ್ನು ಪಡೆದುಕೊಂಡರು. ಸ್ಥಳದಲ್ಲಿಯೇ ಹೊಸ ಖಾತೆಗಳ ಪುಸ್ತಕವನ್ನು ಜನರಿಗೆ ನೀಡಲಾಯಿತು. ಕೊಡಗು ಅಂಚೆ ವಿಭಾಗದ ಅಧೀಕ್ಷಕರಾದ ಎಸ್.ಪಿ. ರವಿ ಸ್ವಾಗತಿಸಿದರು. ಉಪ ಅಧೀಕ್ಷಕರಾದ ಹೆಚ್.ಜೆ. ಸೋಮಯ್ಯ ಅವರು ವಂದಿಸಿದರು. ಸತೀಶ್ ಕೆ.ಎಲ್. ಕಾರ್ಯಕ್ರಮ ನಿರೂಪಿಸಿದರು. ಮಡಿಕೇರಿ ಉಪ ಅಂಚೆ ವಿಭಾಗದ ನಿರೀಕ್ಷಕರಾದ ಬಿ.ಡಿ. ಮಂಜುನಾಥ ಸೇರಿದಂತೆ ಅಂಚೆ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.