' ಮಡಿಕೇರಿ, ಸೆ. ೨೪ : ಮಹಾಸಭೆಯಲ್ಲಿ ಪಾಲ್ಗೊಳ್ಳುವ ಸದಸ್ಯರ ಸಂಖ್ಯೆ ಇಳಿಮುಖಗೊಳ್ಳುತ್ತಿದ್ದು ಹೆಚ್ಚಿನ ಸದಸ್ಯರು ನಿಧಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಮೂಲಕ ವಿದ್ಯಾಭಿವೃದ್ಧಿ ನಿಧಿಯ ಬೆಳವಣಿಗೆಗೆ ಸಹಕರಿಸಬೇಕು ಎಂದು ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ಎ. ಗೋಪಾಲಕೃಷ್ಣ ಮನವಿ ಮಾಡಿದರು. ಮಡಿಕೇರಿಯ ಲಕ್ಷಿö್ಮÃನರಸಿಂಹ ಕಲ್ಯಾಣ ಮಂಟಪದ ಶತಮಾನೋತ್ಸವ ಭವನದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ೨೦೨೨- ೨೩ರ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ತ್ರಿಮತಸ್ಥ ಬ್ರಾಹ್ಮಣರ ಪ್ರಮುಖ ಸಂಘಟನೆಯಾದ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಬೆಳವಣಿಗೆಗೆ ತಾಲೂಕು ಸಂಘದ ಪದಾಧಿಕಾರಿಗಳು ಮುತುವರ್ಜಿ ವಹಿಸಬೇಕು. ಸಂಘಟನೆ ಜಿಲ್ಲಾ ಕೇಂದ್ರಕ್ಕೆ ಮಾತ್ರ ಸೀಮಿತವಲ್ಲ. ಜಿಲ್ಲೆಯ ಎಲ್ಲಾ ಭಾಗದ ಸದಸ್ಯರು ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಬೆಳವಣಿಗೆಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು. ಹೆಚ್ಚಿನ ಸದಸ್ಯರು ಪಾಲ್ಗೊಂಡರೆ ಮಾತ್ರ ನಿಧಿ ಬೆಳೆಯುತ್ತದೆ ಎಂದರು. ನಿಧಿಯ ಕಾರ್ಯಕಾರಿ ಮಂಡಳಿಯಲ್ಲಿ ಬದಲಾವಣೆ ಇರಬೇಕು. ಹಿರಿಯ ಪದಾಧಿಕಾರಿಗಳೊಂದಿಗೆ ಯುವ ಸದಸ್ಯರು ಸೇರಿ ಒಂದು ತಂಡವಾಗಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಕರ್ನಾಟಕ ಬ್ರಾಹ್ಮಣ ಮಹಸಭಾದ ಕಾರ್ಯಚಟುವಟಿಕೆಯ ಬಗ್ಗೆ ಇತ್ತೀಚೆಗೆ ರಾಜ್ಯ ಸಮಿತಿಗೆ ನಿಯುಕ್ತಿಗೊಂಡಿರುವ ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಶ್ರೀಧರ್ ನೆಲ್ಲಿತ್ತಾಯ ಅವರು ವಿವರಣೆ ನೀಡಿದರು. ಸಹಕಾರ ಸಂಘ ಸ್ಥಾಪಿಸುವಂತೆ ಸಲಹೆಯಿತ್ತರು. ಅಲ್ಲದೆ, ಇತ್ತೀಚೆಗೆ ಸಚಿವರಾದ ಸುಧಾಕರ್À ಅವರು ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದರ ವಿರುದ್ಧ ಹಾಗೂ ಸನಾತನ ಧರ್ಮದ ವಿರುದ್ಧದ ರಾಜಕಾರಣಿಯೊಬ್ಬರ ಹೇಳಿಕೆಗೆ ಮಹಾಸಭೆಯಲ್ಲಿ ಶ್ರೀಧರ್ ನೆಲ್ಲಿತ್ತಾಯ ಖಂಡನಾ ನಿರ್ಣಯ ಮಂಡಿಸಿದ್ದು ಮಹಾಸಭೆಯಲ್ಲಿ ಒಕ್ಕೊರಲಿನಿಂದ ಪ್ರತಿಧ್ವನಿತಗೊಂಡಿತು.

ನಿಧಿಯ ಕಾರ್ಯಕಾರಿ ಮಂಡಳಿ ಉಪಾಧ್ಯಕ್ಷ ರಾಮಚಂದ್ರ ಸಿ. ಮೂಗೂರು, ಗೌರವ ಕಾರ್ಯದರ್ಶಿ ಬಿ.ಕೆ. ಅರುಣ್‌ಕುಮಾರ್, ಖಜಾಂಚಿ ಗೀತಾ ಗಿರೀಶ್, ನಿರ್ದೇಶಕರುಗಳಾದ, ಲಲಿತಾ ರಾಘವನ್, ಸವಿತಾ ಕೆ. ಭಟ್, ಜಯಶೀಲ ಪ್ರಕಾಶ್, ಜಿ.ಆರ್ ರವಿಶಂಕರ್, ಜಿ.ಡಿ ಶಿವಶಂಕರ, ಕೆ.ಎಸ್. ರಾಜಶೇಖರ್, ಎ.ವಿ. ಮಂಜುನಾಥ್ ಭಟ್, ಪ್ರಭಾಕರ್ ನೆಲ್ಲಿತ್ತಾಯ, ಶ್ರೀಶ ಭಟ್, ವಿಶೇಷ ಆಹ್ವಾನಿತರುಗಳಾದ ಪಿ.ಎನ್. ಯೋಗೀಶ್, ಪಿ.ವಿ. ಅಶೋಕ್ ಉಪಸ್ಥಿತರಿದ್ದರು. ಸಂಘದ ಲೆಕ್ಕ ಪರಿಶೋಧಕರಾದ ಎಂ. ಈಶ್ವರ ಭಟ್ ಹಾಜರಿದ್ದರು.

ಸಭೆಯಲ್ಲಿ ಜಿ.ಟಿ.ರಾಘವೇಂದ್ರ, ವಕೀಲ ನಾಗೇಂದ್ರ, ಗೀತಾ ಸಂಪತ್, ಜಿ. ರಾಜೇಂದ್ರ ಎಂ.ಕೆ. ಸುಬ್ರಮಣ್ಯ, ಎಸ್.ಎಸ್. ಸಂಪತ್ ಕುಮಾರ್, ಮುರಳೀಧರ್ ಮೊದಲಾದವರು ಸಲಹೆಗಳನ್ನಿತ್ತರು. ಶ್ರೀ ಸತ್ಯನಾರಾಯಣ ಪೂಜೆಯನ್ನು ಏರ್ಪಡಿಸಲಾಗಿತ್ತು. ಕಾರ್ಯದರ್ಶಿ ಅರುಣ್ ಕುಮಾರ್ ವಂದನಾರ್ಪಣೆ ಸಲ್ಲಿಸಿದರು.