ಗೋಣಿಕೊಪ್ಪ ವರದಿ, ಸೆ. ೨೪ : ಪ್ರತ್ಯೇಕ ಪ್ರಕರಣಗಳಲ್ಲಿ ಆನ್‌ಲೈನ್ ಖದೀಮರ ಕೈಚಳಕಕ್ಕೆ ಗೋಣಿಕೊಪ್ಪ ವ್ಯಾಪ್ತಿಯಲ್ಲಿ ರೂ. ೭.೨೫ ಲಕ್ಷ ರೂ. ಮೋಸವಾಗಿದೆ.

ಪೆಟ್ರೋಲ್ ಬಂಕ್ ಆರಂಭಿಸಲು ಸ್ಥಳೀಯ ಉದ್ಯಮಿಯಿಂದ ಆನ್‌ಲೈನ್ ಮೂಲಕ ಅರ್ಜಿ ಪಡೆದುಕೊಂಡು ರೂ. ೭.೧೦ ಲಕ್ಷ ದೋಚಲಾಗಿದೆ. ಮತ್ತೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬರು ಹಣ ದ್ವಿಗುಣ ಆಮಿಷಕ್ಕೆ ೧೫ ಸಾವಿರ ಕಳೆದುಕೊಂಡಿದ್ದಾರೆ. ಇದರಂತೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ,

ಪೆಟ್ರೋಲ್ ಬಂಕ್ ಆರಂಭಿಸಲು ಅನುಮತಿ ಮಾಡಿಕೊಡುವುದಾಗಿ ಆನ್‌ಲೈನ್ ಮೂಲಕ ದೊರೆತ ಮಾಹಿತಿಯಂತೆ ಗೋಣಿಕೊಪ್ಪದ ಉದ್ಯಮಿಯೊಬ್ಬರು ಹಣ ಕಳೆದುಕೊಂಡಿದ್ದಾರೆ. eಟಿgಠಿumಠಿಚಿಠಿಠಿಟiಛಿಚಿಣioಟಿiಟಿ೨೦೨೩.ಛಿom ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಲಾಗಿತ್ತು. ಆಗಸ್ಟ್ ೧೫ ರಂದು ಆನ್‌ಲೈನ್‌ನಲ್ಲಿ ಆಯ್ಕೆಯಾಗಿರುವ ಬಗ್ಗೆ ಬಂದ ಇ.ಮೇಲ್ ಸಂದೇಶದAತೆ ೨೫ ಸಾವಿರ ರೂ. ಮೊದಲು ಕಂತು ಮೂಲಕ ಪಾವತಿಸಬೇಕು ಎಂಬ ಸಂದೇಶ ನಂಬಿ ಪಾವತಿಸಲಾಗಿದೆ. ಇದರೊಂದಿಗೆ ೧.೭೫ ಲಕ್ಷ ರೂ. ೭ ದಿನಗಳ ಒಳಗೆ ಪಾವತಿಸುವಂತೆ ಸೂಚನೆಯಂತೆ ೧.೭೫ ಲಕ್ಷ ರೂ. ಪಾವತಿಯಾಗಿದೆ. ಸೆಪ್ಟೆಂಬರ್ ೧ ರಂದು ೫.೧೦ ಲಕ್ಷ ರೂ. ಆನ್ ಲೈನ್ ಮೂಲಕ ಪಾವತಿಸಲಾಗಿದೆ. ಸೆಪ್ಟೆಂಬರ್ ೧೮ ರಂದು ಮತ್ತೆ ೭ ಲಕ್ಷ ರೂ. ಪಾವತಿಸುವಂತೆ ಸೂಚಿಸಿದಾಗ ಸಂಶಯ ಬಂದು ಹಣ ಪಾವತಿಯನ್ನು ಸ್ಥಗಿತಗೊಳಿಸಿ ಪರಿಶೀಲನೆ ನಡೆಸಿದ್ದಾರೆ. ಮೈಸೂರು ಪೆಟ್ರೋಲಿಯಂ ಕಂಪೆನಿಯಲ್ಲಿ ವಿಚಾರಿಸಿದಾಗ ನಾವು ಆನ್‌ಲೈನ್ ಮೂಲಕ ಯಾವ ಹಣ ಪಾವತಿಸಿಕೊಂಡಿಲ್ಲ. ನಮಗೂ ಇದಕ್ಕೂ ಸಂಬAಧವಿಲ್ಲ ಎಂದು ತಿಳಿಸಿದ್ದರು. ಇದರಂತೆ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಪಂಕಜ್ ಗುಪ್ತ ಹಾಗೂ Peಣಡಿoಟeum ಠಿಚಿಥಿ oಟಿಟiಟಿe govಣ.iಟಿ ಸಂದಾಯವಾಗಿರುವ ಬಗ್ಗೆ ಮಾಹಿತಿ ದೊರೆತಿದೆ. (ಮೊದಲ ಪುಟದಿಂದ) ಒಂದಷ್ಟು ಹಣ ಬೆಂಗಳೂರು, ಉತ್ತರ ಪ್ರದೇಶ, ಹರಿಯಾಣ ಭಾಗದ ಬ್ಯಾಂಕ್ ಖಾತೆಗೆ ಸಂದಾಯವಾಗಿದ್ದು, ಒಟ್ಟು ೭.೧೦ ಲಕ್ಷ ಹಣ ಕಳೆದುಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಗೋಣಿಕೊಪ್ಪದ ವ್ಯಕ್ತಿಯೊಬ್ಬರಿಗೆ ಸೆಪ್ಟೆಂಬರ್ ೨೨ ರಂದು ಒಎಲ್‌ಎಕ್ಸ್ ಮೂಲಕ ಫರ್ನಿಚರ್ ತೆಗೆದುಕೊಳ್ಳುತ್ತೇವೆ. ೫ ಸಾವಿರ ಪಾವತಿಸಿದರೆ ನಿಮಗೆ ೧೦ ಸಾವಿರ ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದ. ಇದಕ್ಕೆ ಮಾರು ಹೋದ ಮಹಿಳೆ ಮಗಳ ಮೊಬೈಲ್‌ನಲ್ಲಿ ಪೇಟಿಎಂ ಮೂಲಕ ರೂ. ೫ ಸಾವಿರ ಸಂದಾಯ ಮಾಡಿದ್ದರು.

ಭರವಸೆಯಂತೆ ೧೦ ಸಾವಿರ ಇವರ ಖಾತೆಗೆ ಜಮಾ ಮಾಡುವ ಮೂಲಕ ನಂಬಿಕೆ ಹುಟ್ಟಿಸಿದ್ದ ಖದೀಮರು ಮತ್ತೆ ೫ ಸಾವಿರ ಜಮಾ ಮಾಡಿಸಿಕೊಂಡು ೧೦ ಸಾವಿರ ವರ್ಗಾಹಿಸಿದ್ದರು. ಇದನ್ನು ನಂಬಿ ೩೦ ಸಾವಿರ ದೊರೆಯುವ ಕುತೂಹಲದಲ್ಲಿ ಖದೀಮರ ಮನವಿಯಂತೆ ೧೫ ಸಾವಿರ ವರ್ಗಾಹಿಸಿದ್ದು, ನಂತರ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ. ಇದರಂತೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು. ಬಸವಂತ್ ಅಗರವಾಲ್, ರೋಹಿತ್ ಶರ್ಮ ಎಂಬ ಹೆಸರಿನಲ್ಲಿರುವ ಮೊಬೈಲ್ ಸಂಖ್ಯೆಯಾಗಿದ್ದು, ಮೋಸದ ಜಾಲ ಮೂಲ ತಿಳಿಯದಾಗಿದೆ. ೯೧೦೯೬೬೬೭೯೬, ೮೯೬೨೫೨೬೯೧೭ ಮೊಬೈಲ್ ಸಂಖ್ಯೆಗಳಲ್ಲಿ ಮೋಸ ನಡೆದಿದೆ.