ಭಾರತೀಯ ರಾಜತಾಂತ್ರಿಕರ ಹತ್ಯೆಗೆ ಕರೆ

ಕೆನಡಾ, ಸೆ. ೨೪: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬAಧದಲ್ಲಿ ಉದ್ವಿಗ್ನತೆ ಉಂಟಾಗಿದ್ದು ಏತನ್ಮಧ್ಯೆ, ಸರ್ರೆಯ ಗುರುದ್ವಾರದಲ್ಲಿ ಭಾರತೀಯ ರಾಜತಾಂತ್ರಿಕರ ಹತ್ಯೆಗೆ ಕರೆ ನೀಡುವ ಪೋಸ್ಟರ್‌ಗಳನ್ನು ಹಾಕಲಾಗಿದೆ. ಸ್ಥಳೀಯ ಅಧಿಕಾರಿಗಳು ಪೋಸ್ಟರ್‌ಗಳನ್ನು ತೆಗೆದುಹಾಕಲು ಆದೇಶ ನೀಡಿದ್ದಾರೆ. ಮೂಲಗಳ ಪ್ರಕಾರ, ಸಮಸ್ಯೆಯ ಪ್ರಮಾಣವನ್ನು ಪರಿಗಣಿಸಿ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ. ಇದಲ್ಲದೆ, ಗುರುದ್ವಾರದಲ್ಲಿ ಯಾವುದೇ ಆಮೂಲಾಗ್ರ ಘೋಷಣೆಗೆ ಧ್ವನಿವರ್ಧಕಗಳನ್ನು ಬಳಸದಂತೆ ಎಚ್ಚರಿಕೆ ನೀಡಲಾಗಿದೆ. ನಿಷೇಧಿತ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥ ಮತ್ತು ಭಾರತದ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿರುವ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಜೂನ್ ೧೮ ರಂದು ಸರ್ರೆಯ ಗುರುದ್ವಾರದ ಹೊರಗೆ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದರು. ಆತನ ತಲೆಯ ಮೇಲೆ ರೂಪಾಯಿ ೧೦ ಲಕ್ಷ ನಗದು ಬಹುಮಾನವಿತ್ತು.

ಏಷ್ಯನ್ ಗೇಮ್ಸ್ - ಭಾರತ ಶುಭಾರಂಭ

ಹ್ಯಾAಗ್ಝೌ:, ಸೆ. ೨೪: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ೨೦೨೩ರ ಏಷ್ಯನ್ ಗೇಮ್ಸ್ಗೆ ಶನಿವಾರ ಅಧಿಕೃತ ಚಾಲನೆ ದೊರೆತಿದ್ದು, ಮೊದಲ ದಿನವೇ ಭಾರತದ ಕ್ರೀಡಾಪಟುಗಳು ೨ ಬೆಳ್ಳಿಯೊಂದಿಗೆ ಪದಕ ಬೇಟೆ ಆರಂಭಿಸಿದ್ದಾರೆ. ಮಹಿಳೆಯರ ೧೦ ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ಭಾರತ ಒಟ್ಟು ೧೮೮೬ ಅಂಕಗಳೊAದಿಗೆ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿತು. ರಮಿತಾ, ಮೆಹುಲಿ ಘೋಷ್ ಮತ್ತು ಆಶಿ ಚೌಕ್ಸೆ ಅವರು ೨೦೨೩ ರ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಮೊದಲ ಪದಕವನ್ನು ಗೆದ್ದುಕೊಂಡಿದ್ದಾರೆ. ಇನ್ನು ಏರ್ ರೈಫಲ್‌ನಲ್ಲಿ ಭಾರತಕ್ಕೆ ಪದಕ ಸಿಕ್ಕ ಕೂಡಲೇ ಭಾರತದ ಅರ್ಜುನ್ ಜತ್ ಲಾಲ್ ಮತ್ತು ಅರವಿಂದ್ ಸಿಂಗ್ ಜೋಡಿಯು ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್ನ ಫೈನಲ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿತು. ಲೇಖ್ ರಾಮ್ ಮತ್ತು ಬಾಬು ಲಾಲ್ ಯಾದವ್ ಪುರುಷರ ಜೋಡಿ ಫೈನಲ್‌ನಲ್ಲಿ ಮೂರನೇ ಸ್ಥಾನ ಗಳಿಸುವ ಮೂಲಕ ಕಂಚಿನ ಪದಕ ಗೆದ್ದು, ಭಾರತಕ್ಕೆ ಮೂರನೇ ಪದಕ ತಂದುಕೊಟ್ಟರು. ಈ ಜೋಡಿ ೬:೫೦.೪೧ ಸೆಕೆಂಡ್‌ಗಳಲ್ಲಿ ಗುರಿ ತಲುಪಿತು.

ಯಡಿಯೂರಪ್ಪ ಭೇಟಿ ಮಾಡಿದ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು, ಸೆ. ೨೪: ಬಿಜೆಪಿ- ಜೆಡಿಎಸ್ ಮೈತ್ರಿ ಘೋಷಿಸಿದ ಬೆನ್ನಲ್ಲೇ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಇಂದು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಯಡಿಯೂರಪ್ಪನವರ ಆಶೀರ್ವಾದ ಪಡೆಯಲು ಬಂದಿರುವುದಾಗಿ ತಿಳಿಸಿದ್ದಾರೆ.

ಖಲಿಸ್ತಾನ ಉಗ್ರರ ಆಸ್ತಿ ಜಪ್ತಿ ಸಾಧ್ಯತೆ

ನವದೆಹಲಿ, ಸೆ. ೨೪: ಖಲಿಸ್ತಾನಿ ಭಯೋತ್ಪಾದಕ ಮತ್ತು ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನೂನ್ ವಿರುದ್ಧ ಕ್ರಮಕೈಗೊಂಡ ಬೆನ್ನಲ್ಲೇ ಭಾರತ ಸರ್ಕಾರ ದೇಶ ಬಿಟ್ಟು ಪರಾರಿಯಾದ ೧೯ ಮಂದಿ ಖಲಿಸ್ತಾನ ಉಗ್ರರ ವಿರುದ್ಧ ಬೃಹತ್ ಕ್ರಾö್ಯಕ್‌ಡೌನ್‌ಗೆ ಸಿದ್ಧತೆ ನಡೆಸಿದೆ. ರಾಷ್ಟಿçÃಯ ತನಿಖಾ ಸಂಸ್ಥೆ ಎನ್‌ಐಎ ಬ್ರಿಟನ್, ಅಮೆರಿಕ, ಕೆನಡಾ, ದುಬೈನಲ್ಲಿ ನೆಲೆಸಿರುವ ೧೯ ಮಂದಿ ಪರಾರಿಯಾದ ಖಲಿಸ್ತಾನಿ ಭಯೋತ್ಪಾದಕರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಭಾರತದಲ್ಲಿರುವ ಆಸ್ತಿಪಾಸ್ತಿ ಸೇರಿದಂತೆ ಪಾಕಿಸ್ತಾನ ಮತ್ತು ಇತರ ದೇಶಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಭದ್ರತಾ ಏಜೆನ್ಸಿಗಳು ವರ್ಷಗಳಿಂದ ಅವರನ್ನು ಹಿಂಬಾಲಿಸುತ್ತಿದ್ದು, ಅವರ ವಿರುದ್ಧ ಬೃಹತ್ ಮಟ್ಟದ ಮಾಹಿತಿ ಕಲೆಹಾಕಿದೆ. ಕಠಿಣ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಈ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಭಯೋತ್ಪಾದಕರು ವಿದೇಶದಿಂದ ಭಾರತ ವಿರೋಧಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ನಾಗ್ಪುರದಲ್ಲಿ ಭಾರಿ ಮಳೆ

ನಾಗ್ಪುರ, ಸೆ. ೨೪: ನಗರ ವ್ಯಾಪ್ತಿಯಲ್ಲಿ ಶನಿವಾರ ಭಾರಿ ವರ್ಷಧಾರೆಯಾಗಿದ್ದು, ಕನಿಷ್ಟ ೧೦ ಸಾವಿರ ಮನೆಗಳಿಗೆ ಮಳೆ ನೀರು ನುಗ್ಗಿದೆ. ಭಾನುವಾರ ತ್ವರಿತಗತಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮೂರು ಗಂಟೆಯ ಅವಧಿಯಲ್ಲಿ ೧೦.೯ ಸೆಂ.ಮೀ. ಮಳೆ ಸುರಿದಿದೆ. ನಸುಕಿನ ೨ ಗಂಟೆಯಿAದ ೪ ಗಂಟೆಯ ನಡುವೆಯೇ ೯ ಸೆಂ.ಮೀ. ವರ್ಷಧಾರೆಯಾಗಿದೆ ಎಂದು ಮಹಾರಾಷ್ಟçದ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ. ನಗರದ ಅತಿದೊಡ್ಡ ಜಲಮೂಲವಾದ ಅಂಬಾಝರಿ ಕೆರೆ ಹಾಗೂ ನಾಗ್ ನದಿ ತನ್ನ ವ್ಯಾಪ್ತಿ ಮೀರಿ ಉಕ್ಕಿ ಹರಿದಿದ್ದರಿಂದ ಶನಿವಾರ ಪ್ರವಾಹ ಉಂಟಾಗಿತ್ತು. ನೆರೆ ತಗ್ಗಿದ ಬಳಿಕ ಮನೆಗಳೊಳಗೆ ತುಂಬಿದ್ದ ಕೆಸರು ಮಿಶ್ರಿತ ಮಣ್ಣನ್ನು ಸ್ಥಳೀಯ ಆಡಳಿತ ತೆರವುಗೊಳಿಸಲು ಮುಂದಾಗಿದೆ. ೧೧ ಸಾವಿರ ಆಹಾರ ಪ್ಯಾಕೇಟ್‌ಗಳನ್ನು ವಿತರಿಸಲಾಗಿದೆ ಎಂದು ನಾಗ್ಪುರ ನಗರಸಭೆ ಆಯುಕ್ತ ಅಭಿಜಿತ್ ಚೌಧರಿ ತಿಳಿಸಿದ್ದಾರೆ.

ಕುಂದಾಪುರ ಹೆಸರು ಬಳಕೆಗೆ ಮಧ್ಯಂತರ ನಿರ್ಬಂಧ

ಬೆAಗಳೂರು, ಸೆ. ೨೪: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ೫ ಕೋಟಿ ರೂಪಾಯಿ ಪಡೆದು ಉದ್ಯಮಿಯೊಬ್ಬರಿಗೆ ವಂಚಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಹಿಂದೂಪರ ಸಂಘಟನೆಯ ಚೈತ್ರಾ ಅವರಿಗೆ ಸಂಬAಧಿಸಿದAತೆ ಸುದ್ದಿ ಪ್ರಕಟ ಹಾಗೂ ಪ್ರಸಾರ ಮಾಡುವಾಗ ಕುಂದಾಪುರ ಹೆಸರು ಉಲ್ಲೇಖಿಸಬಾರದು ಎಂದು ಮಾಧ್ಯಮಗಳಿಗೆ ನಿರ್ಬಂಧ ಹೇರಿ ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಏಕಪಕ್ಷೀಯ ಮಧ್ಯಂತರ ಆದೇಶ ಮಾಡಿದೆ. ಚೈತ್ರಾ ಪ್ರಕರಣದಲ್ಲಿ ಕುಂದಾಪುರ ಹೆಸರು ಉಲ್ಲೇಖಿಸುವುದಕ್ಕೆ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ ಹೇರುವಂತೆ ಕೋರಿ ಬೆಂಗಳೂರಿನ ಕುಂದಾಪುರ ಮೂಲದ ಗಣೇಶ್ ಶೆಟ್ಟಿ ಸಲ್ಲಿಸಿದ್ದ ಮೂಲ ದಾವೆಯ ವಿಚಾರಣೆಯನ್ನು ಬೆಂಗಳೂರಿನ ೭ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಬಾಲಗೋಪಾಲ ಕೃಷ್ಣ ಅವರು ಆದೇಶಿಸಿದ್ದಾರೆ.

ಪಂದ್ಯದ ವೇಳೆ ಸಿಡಿಲು ಬಡಿದು ಇಬ್ಬರ ಸಾವು

ರಾಂಚಿ, ಸೆ. ೨೪: ಫುಟ್ಬಾಲ್ ಪಂದ್ಯದ ವೇಳೆ ಮೈದಾನಕ್ಕೆ ಸಿಡಿಲು ಬಡಿದು ಇಬ್ಬರು ಸಾವಿಗೀಡಾದ ಘಟನೆ ಜಾರ್ಖಂಡ್‌ನಲ್ಲಿ ವರದಿಯಾಗಿದೆ. ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ಸ್ಥಳೀಯ ಫುಟ್‌ಬಾಲ್ ಪಂದ್ಯದ ಆಟದ ಮೈದಾನಕ್ಕೆ ಸಿಡಿಲು ಬಡಿದು ಇಬ್ಬರು ಪ್ರೇಕ್ಷಕರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಡಿಲು ಟೆಂಟ್ ಮೇಲೆ ಅಪ್ಪಳಿಸಿದ್ದು, ಈ ವೇಳೆ ಟೆಂಟ್ ಒಳಗಿದ್ದ ಶಿವಲಾಲ್ ಸೊರೆನ್ (೩೨ ವರ್ಷ) ಮತ್ತು ಸಂತ್ಲಾಲ್ ಹೆಂಬ್ರಾಮ್ (೨೦ ವರ್ಷ) ಎಂಬ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಅದೇ ಗುಡಾರದಲ್ಲಿದ್ದ ಮೂವರು ಗಾಯಗೊಂಡಿದ್ದಾರೆ ಎಂದು ಪ್ರಬಾರ ಪೊಲೀಸ್ ಠಾಣಾಧಿಕಾರಿ ಜಿತೇಂದ್ರ ಕುಮಾರ್ ಸಾಹು ತಿಳಿಸಿದ್ದಾರೆ.

ರೈಲು ಡಿಕ್ಕಿ - ೩೧ ಮಂದಿಗೆ ಗಾಯ

ಲಾಹೋರ್, ಸೆ. ೨೪: ರೈಲು ನಿಲ್ದಾಣದಲ್ಲಿ ನಿಲ್ಲಿಸಿದ್ದ ಸರಕು ಸಾಗಣೆ ರೈಲಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ರೈಲೊಂದು ಡಿಕ್ಕಿ ಹೊಡೆದಿದ್ದು, ೩೧ ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಪಂಜಾಬ್ ಪ್ರಾಂತ್ಯದಲ್ಲಿ ಭಾನುವಾರ ನಡೆದಿದೆ. ಶೇಖಾಪುರ ಜಿಲ್ಲೆಯ ಕಿಲಾ ಸತ್ತಾರ್ ಶಾ ರೈಲ್ವೆ ನಿಲ್ದಾಣದಲ್ಲಿ ಅಪಘಾತ ಸಂಭವಿಸಿದೆ. ಮಿಯಾನ್ವಾಲಿಯಿಂದ ಲಾಹೋರ್‌ಗೆ ತೆರಳುತ್ತಿದ್ದ ರೈಲು ನಿಲ್ಲುವ ಹಳಿಯ ಮೇಲೆಯೇ ಸರಕು ಸಾಗಣೆ ರೈಲು ನಿಂತ ಪರಿಣಾಮ ಅಪಘಾತ ಸಂಭವಿಸಿದೆ ಎಂದು ವರದಿ ತಿಳಿಸಿದೆ. ರಕ್ಷಣಾ ಸಿಬ್ಬಂದಿ ರೈಲಿನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಿಸಿದ್ದು, ಯಾವುದೇ ಪ್ರಾಣಹಾನಿ ಉಂಟಾಗಿಲ್ಲ, ಆದರೆ ಐವರಿಗೆ ಗಂಭೀರ ಗಾಯಗಳಾಗಿವೆ. ಅಪಘಾತ ನಡೆದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.