ಮಡಿಕೇರಿ, ಸೆ. ೨೪: ಬಾಳೆಲೆಯಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅಮ್ಮತ್ತಿಯ ಗುಡ್‌ಶೆಫರ್ಡ್ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕರ ತಂಡ ಫುಟ್ಬಾಲ್‌ನಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.

ಬಾಲಕಿಯರ ಥ್ರೋಬಾಲ್‌ನಲ್ಲಿ ದ್ವಿತೀಯ ಸ್ಥಾನವನ್ನು, ಅಥ್ಲೆಟಿಕ್ಸ್ ವಿಭಾಗದ ರಿಲೆಯಲ್ಲಿ ಪ್ರಥಮ, ಪ್ರಾಥಮಿಕ ಶಾಲೆಯ ಸಿನಾನ್, ಜೋಶ್ವ, ಅವಿನಾಶ್, ಅಭಿನವ್ ಪ್ರಥಮ, ತಟ್ಟೆ ಎಸೆತದಲ್ಲಿ ನವನೀತ್ ದ್ವಿತೀಯ, ಎತ್ತರ ಜಿಗಿತ ಸ್ಪರ್ಧೆಯಲ್ಲಿ ಶಿಹಾಬ್ ಹಾಗೂ ಅಕ್ಷಿತಾ ದ್ವಿತೀಯ ಹಾಗೂ ೪೦೦ ಮೀ. ಓಟದಲ್ಲಿ ರೋಷನ್ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.