ಮಡಿಕೇರಿ, ಸೆ. ೨೪: ನಾಪೋಕ್ಲು ಕೊಡವ ಸಮಾಜದ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಈ ಹಿಂದೆ ನಬಾರ್ಡ್ನ ಜಿಲ್ಲಾ ವ್ಯವಸ್ಥಾಪಕರಾಗಿದ್ದ ಮುಂಡAಡ ಸಿ. ನಾಣಯ್ಯ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಸಮಾಜದ ನೂತನ ಆಡಳಿತ ಮಂಡಳಿಗೆ ಚುನಾವಣೆ ನಿಗದಿ ಯಾಗಿದ್ದು, ಹಲವರು ಅವಿರೋಧವಾಗಿ ಆಯ್ಕೆಗೊಂಡಿದ್ದರೆ, ಇನ್ನು ಕೆಲವು ಪದಾಧಿಕಾರಿಗಳು ಚುನಾವಣೆ ಮೂಲಕ ನೇಮಕಗೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಇದರಲ್ಲಿ ಕರವಂಡ ಲವ ನಾಣಯ್ಯ ಆಯ್ಕೆ ಗೊಂಡರು. ಜಂಟಿ ಕಾರ್ಯದರ್ಶಿ ಯಾಗಿ ಮಾಚೆಟ್ಟಿರ ಕುಶು ಕುಶಾಲಪ್ಪ ಹಾಗೂ ಖಜಾಂಚಿಯಾಗಿ ಚೌರಿರ ಉದಯ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ನೆಲಜಿಯ ಮುಕ್ಕಾಟಿರ ವಿನಯ್ ನಾಮಪತ್ರ ಹಿಂಪಡೆದಿದ್ದು, ಈ ಸ್ಥಾನಕ್ಕೆ ಮುಂದೆ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ನೂತನ ಅಧ್ಯಕ್ಷ ನಾಣಯ್ಯ ಅವರು ತಿಳಿಸಿದ್ದಾರೆ. ನಿರ್ದೇಶಕ ಸ್ಥಾನಕ್ಕೆ ಬಲ್ಲಮಾ ವಟಿ ಕ್ಷೇತ್ರದಿಂದ ಬೊಟ್ಟೋಳಂಡ ಗಿರೀಶ್ ಮಾದಪ್ಪ, ನೆಲಜಿ - ಬಲ್ಲಮಾವಟಿ ಮಹಿಳಾ ಮೀಸಲು ಕ್ಷೇತ್ರದಿಂದ ಕೋಟೆರ ಝಾನ್ಸಿ ಮಂದಪ್ಪ, ಕಕ್ಕಬ್ಬೆಯಿಂದ ಬೊಳಿಯಾಡಿರ ಸಂತು, ಕಕ್ಕಬೆ ಮಹಿಳಾ ಮೀಸಲು ಕ್ಷೇತ್ರದಿಂದ ಕಲಿಯಂಡ ಗೀತಾ ಗಿರೀಶ್, ಚೆಯ್ಯಂಡಾಣೆ ಕ್ಷೇತ್ರದಿಂದ ಚೇನಂಡ ಗಿರೀಶ್ ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ. ಉಳಿದಂತೆ ನಾಪೋಕ್ಲುವಿನಿಂದ ಶಿವಚಾಳಿಯಂಡ ಕಿಶೋರ್ ಬೋಪಣ್ಣ, ಬಾಳೆಯಡ ನಿಶಾ, ನಾಪೋಕ್ಲು ಪಟ್ಟಣದಿಂದ ಚೊಪ್ಪೆರ ಜಯ, ಅರೆಯಡ ಸರಸು ಚರ್ಮಣ, ಬೇತುವಿನಿಂದ ಕುಟ್ಟಂಜೆಟ್ಟಿರ ಶ್ಯಾಮ್, ಕೊಳಕೇರಿ ಯಿಂದ ಕುಂಡ್ಯೋಳAಡ ಬೋಪಣ್ಣ, ಬಿದ್ದಾಟಂಡ ಸಂಪತ್, ಕುಯ್ಯಂಗೇರಿ ಯಿಂದ ಚೌರೀರ ಅಯ್ಯಪ್ಪ, ಪಾರಾಣೆ ಯಿಂದ ನಾಯಕಂಡ ಮುತ್ತಪ್ಪ, ನಾಯಕಂಡ ಜೂಬಿ, ನೆಲಜಿಯಿಂದ ಬದ್ದಂಜೆಟ್ಟಿರ ದೇವಿ ಅವರುಗಳು ಅವಿರೋಧವಾಗಿ ನಿರ್ದೇಶ ಕರುಗಳಾಗಿ ಆಯ್ಕೆಯಾಗಿದ್ದಾರೆ.