ಮಡಿಕೇರಿ, ಸೆ. ೨೪ : ೨೦೨೩ನೇ ಸಾಲಿನ ಎನ್‌ಸಿಸಿ ಎಐಟಿಎಸ್‌ಸಿ ರಾಷ್ಟಿçÃಯ ಮಟ್ಟದ ಶೂಟಿಂಗ್, ಮ್ಯಾಪ್ ರೀಡಿಂಗ್, ಹೆಲ್ತ್ ಮತ್ತು ಹೈಜಿನ್ ಹಾಗೂ ಅಪ್ಟಿçಕಲ್ಸ್ ಸ್ಪರ್ಧೆಯಲ್ಲಿ ಕರ್ನಾಟಕ ಮತ್ತು ಗೋವಾ ಡೈರಕ್ಟರೇಟ್ ತಂಡ ಪಟ್ಟಮಾಡ ಪಿ. ಕಾರ್ತಿಕ್ ಕುಟ್ಟಪ್ಪ ಅವರ ನಾಯಕತ್ವದಲ್ಲಿ ಮುನ್ನಡೆಯಲಿದೆೆ.

ಕೊಡಗು ಜಿಲ್ಲೆಯ ಬೇಂಗೂರು ಗ್ರಾಮದ ಪಟ್ಟಮಾಡ ಡಿ. ಪೊನ್ನಪ್ಪ ಹಾಗೂ ಹೇಮ ಪೊನ್ನಪ್ಪ ದಂಪತಿಯ ಪುತ್ರ ಕಾರ್ತಿಕ್ ಅವರು, ಪ್ರಸ್ತುತ ಎಂ.ಎಸ್. ರಾಮಯ್ಯ ಕಾಲೇಜ್ ಆಫ್ ಲಾದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದಾರೆ.