ಮಡಿಕೇರಿ, ಸೆ. ೨೩: ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆಯಲ್ಲಿ ದರೋಡೆ ನಡೆಸುತ್ತಿದ್ದ ಪ್ರಕರಣವನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಪತ್ತೆಹಚ್ಚಿದ್ದಾರೆ.
ಈ ಕೃತ್ಯಕ್ಕೆ ಸಂಬAಧಿಸಿದAತೆ ಇಬ್ಬರು ಆರೋಪಿಗಳನ್ನು ಸದ್ಯಕ್ಕೆ ಬಂಧಿಸಲಾಗಿದ್ದು, ಚಿನ್ನಾಭರಣ ವಶಪಡಿಸಿ ಕೊಳ್ಳಲಾಗಿದೆ. ಒಟ್ಟು ನಾಲ್ಕು ಪ್ರಕರಣಗಳನ್ನು ಭೇದಿಸ ಲಾಗಿದ್ದು, ಇದರಲ್ಲಿ ಎರಡು ಪ್ರಕರಣ ಕೊಡಗಿನವರದ್ದಾಗಿದೆ.
ಕೊಡಗಿನ ಅರಪಟ್ಟು ಗ್ರಾಮದ ನಿವಾಸಿಯೊಬ್ಬರು ಹಾಗೂ ಟಿ. ಶೆಟ್ಟಿಗೇರಿಯ ದಂಪತಿ ದುಷ್ಕರ್ಮಿಗಳಿಂದ ಸುಲಿಗೆಗೆ ಒಳಗಾಗಿದ್ದ ಎರಡು ಪ್ರಕರಣಗಳು ಇದರಲ್ಲಿ ಸೇರಿವೆ.
ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಕೃತ್ಯ, ಪಟ್ಟಣ ಠಾಣಾ ವ್ಯಾಪ್ತಿಯ ಒಂದು ಪ್ರಕರಣ ಹಾಗೂ ಮದ್ದೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಘಟನೆಗೆ ಸಂಬAಧಿಸಿದAತೆ ಕಾರ್ಯಾಚರಣೆ ತಂಡ ಸದ್ಯಕ್ಕೆ ಇಬ್ಬರನ್ನು ಬಂಧಿಸಿದ್ದು, ಇನ್ನು ಕೆಲವರು ತಲೆಮರೆಸಿಕೊಂಡಿದ್ದಾರೆ. ಬಂಧಿತರಿAದ ಇವರು ಸುಲಿಗೆ ಮಾಡಿದ್ದ ೯೨ ಗ್ರಾಂ ಚಿನ್ನದ ಒಡವೆ, ಕೃತ್ಯಕ್ಕೆ ಬಳಸಿದ್ದ ನಂಬರ್ ಪ್ಲೇಟ್ ಇಲ್ಲದ ಡಿಯೋ ಸ್ಕೂಟರ್, ಎರಡು ಹೆಲ್ಮೆಟ್, ಎರಡು ಡ್ರಾö್ಯಗನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚನ್ನಪಟ್ಟಣದಲ್ಲಿ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಫಸಿಲುಲ್ಲಾ ಅಲಿಯಾಸ್ ನಸರುಲ್ಲಾ (೨೫) ಹಾಗೂ ಚನ್ನಪಟ್ಟಣದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಸಿದ್ದಿಕ್ ಅಹಮದ್ ಅಲಿಯಾಸ್ ಸಿದ್ದಿಕ್ (೨೬) ಬಂಧಿತ ಆರೋಪಿಗಳು. ಇವರೊಂದಿಗೆ ಶಾಮೀಲಾಗಿರುವ ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಪೊಲೀಸ್ ಕಾರ್ಯಾಚರಣೆ ಮುಂದುವರೆಯುತ್ತಿದೆ.
ಕೊಡಗಿನವರ ವಿಚಾರ
ಮೂಲತಃ ಟಿ. ಶೆಟ್ಟಿಗೇರಿಯವರಾದ ಕರ್ನಂಡ ಚಲನ್ ಹಾಗೂ ಅವರ ಪತ್ನಿ ಸೆಪ್ಟೆಂಬರ್ ೧೩ ರಂದು ರಾತ್ರಿ ಬೆಂಗಳೂರಿನಿAದ ಕಾರಿನಲ್ಲಿ ಜಿಲ್ಲೆಗೆ ಮರಳುತ್ತಿದ್ದಾಗ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಆಗಮಿಸಿ ಕಾರನ್ನು ಅಡ್ಡಗಟ್ಟಿ ಶ್ರೀರಂಗಪಟ್ಟಣದ ಗೌರಿಪುರ ಫ್ಲೆöÊಓವರ್ (ಗಂಜಾA) ಬಳಿ ಇವರನ್ನು ತಾವು ಪೊಲೀಸರೆಂದು ಹೇಳಿ ಚಾಕು ತೋರಿಸಿ ಬೆದರಿಸಿ (ಮೊದಲ ಪುಟದಿಂದ) ಚಿನ್ನಾಭರಣ ಅಪಹರಿಸಿ ಪರಾರಿಯಾ ಗಿದ್ದರು. ಈ ಬಗ್ಗೆ ಶ್ರೀರಂಗಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮತ್ತೊಂದು ಪ್ರಕರಣ ಜುಲೈ ೧ ರಂದು ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಮೂಲತಃ ಜಿಲ್ಲೆಯ ಅರಪಟ್ಟುವಿನವರಾದ ಮುತ್ತಪ್ಪ ಕೆ.ಕೆ. ಎಂಬವರು ತಮ್ಮ ಇನೋವಾ ಕಾರಿನಲ್ಲಿ ಬೆಂಗಳೂರಿನಿAದ ಕೊಡಗಿಗೆ ಮರಳುತ್ತಿದ್ದ ಸಂದರ್ಭ ರಸ್ತೆ ನಡುವೆ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಮೂವರು ಅಪರಿಚಿತರು ತಾವು ಪೊಲೀಸರೆಂದು ಹೇಳಿಕೊಂಡು ಕಾರಿನ ಒಳನುಗ್ಗಿ ಚಾಕು ತೋರಿಸಿ ಅವರಿಗೆ ಸಣ್ಣ ಗಾಯವ ನ್ನುಂಟು ಮಾಡಿದ್ದಲ್ಲದೆ, ಇವರಿಂದಲೂ ಚಿನ್ನಾಭರಣ ಅಪಹರಿಸಿ ಪರಾರಿಯಾ ಗಿದ್ದರು. ಈ ಕೃತ್ಯ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.
ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಹ ಇದೇ ಮಾದರಿಯಲ್ಲಿ ಇನ್ನು ಎರಡು ಪ್ರತ್ಯೇಕ ಸುಲಿಗೆ ಪ್ರಕರಣಗಳು ಈ ಹಿಂದೆ ನಡೆದಿತ್ತು. ಈ ಘಟನೆಯನ್ನು ಪತ್ತೆಹಚ್ಚಲು ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯತೀಶ್ ಯನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೊಡಗಿನವರೇ ಆಗಿರುವ ಚೆಯ್ಯಂಡ ಈ. ತಿಮ್ಮಯ್ಯ ಶ್ರೀರಂಗಪಟ್ಟಣ ಉಪಅಧೀಕ್ಷಕ ಮುರಳಿ ಅವರುಗಳ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಗಳಾಗಿ ಗ್ರಾಮಾಂತರ ಠಾಣಾ ಇನ್ಸ್ಪೆಕ್ಟರ್ ಬಿ.ಜಿ. ಕುಮಾರ್, ಪಾಂಡವಪುರ ಇನ್ಸ್ಪೆಕ್ಟರ್ ಹೆಚ್.ಆರ್. ವಿವೇಕಾನಂದ, ಶ್ರೀರಂಗ ಪಟ್ಟಣ ಟೌನ್ ಇನ್ಸ್ಪೆಕ್ಟರ್ ಮಂಜುನಾಥ್, ಪಿ.ಎಸ್.ಐಗಳಾದ ದಳವಾಯಿ, ರಕ್ಷಿತ್ ಹಾಗೂ ಇತರ ಸಿಬ್ಬಂದಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು. ಈ ತಂಡ ಇದೀಗ ಇಬ್ಬರನ್ನು ಬಂಧಿಸುವ ಮೂಲಕ ಒಟ್ಟು ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ತನಿಖೆ ಮುಂದುವರೆಯುತ್ತಿದೆ.